ಗಂಡ ಹೆಂಡತಿ ಮಧ್ಯೆಯೇ ಅಸಮಧಾನ ಇರುತ್ತೆ, ಅಂಥಾದ್ರಲ್ಲಿ ಪಕ್ಷದಲ್ಲಿ ಇರಲ್ವಾ..?

1 min read
BJP

ಗಂಡ ಹೆಂಡತಿ ಮಧ್ಯೆಯೇ ಅಸಮಧಾನ ಇರುತ್ತೆ, ಅಂಥಾದ್ರಲ್ಲಿ ಪಕ್ಷದಲ್ಲಿ ಇರಲ್ವಾ..?

ಬೆಂಗಳೂರು : ಗಂಡ ಹೆಂಡತಿ ಮಧ್ಯೆಯೇ ಅಸಮಧಾನ ಇರುತ್ತದೆ. ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ ಎಂದು ನಾಯಕತ್ವ ಬದಲಾವಣೆ ಚರ್ಚೆ ವಿಚಾರವಾಗಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪ್ರತಿಕ್ರಿಯೆ ನೀಡಿದ್ದಾರೆ.

ನಾಯಕತ್ವ ಬದಲಾವಣೆ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಸುಧಾಕರ್, ಗಂಡ ಹೆಂಡತಿ ಮಧ್ಯೆಯೇ ಅಸಮಧಾನ ಇರುತ್ತದೆ.

ಅಂಥಾದ್ರಲ್ಲಿ ಇಷ್ಟು ದೊಡ್ಡ ಪಕ್ಷದಲ್ಲಿ ಅಸಮಾಧಾನ ಸಾಮಾನ್ಯ. ಯಾರ್ಯಾರಿಗೆ ಅಸಮಾಧಾನ ಇದೆಯೋ ಅವರ ಜೊತೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಚರ್ಚೆ ಮಾಡುತ್ತಾರೆ.

ಅರುಣ್ ಸಿಂಗ್ ಮುಂದಿನ ವಾರ ಆಗಮಿಸುತ್ತಿದ್ದು, ಗೊಂದಲಗಳಿಗೆ ತೆರೆ ಎಳೆಯುತ್ತಾರೆ. ಅಸಮಾಧಾನ ಸರಿಪಡಿಸಿ ಸಮಾಧಾನ ಮಾಡುತ್ತಾರೆ.

Dr K sudakar

ಆಡಳಿತಕ್ಕೆ ಇನ್ನೂ ಯಾವ ರೀತಿ ಚುರುಕು ಮುಟ್ಟಿಸಬೇಕೆಂದು ಚರ್ಚೆ ಮಾಡುತ್ತಾರೆ. ಯಡಿಯೂರಪ್ಪನವರೇ ಮುಂದಿನ ಎರಡು ವರ್ಷ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಎಲ್ಲ ಹಿರಿಯ ನಾಯಕರೂ ಇದನ್ನೇ ಹೇಳಿದ್ದಾರೆ. ನಾಯಕತ್ವದ ಚರ್ಚೆ ಅನಾವಶ್ಯಕ ಎಂದರು

ಇನ್ನು ಬೆಂಗಳೂರಿನಲ್ಲಿ ಸೋಂಕು ಹೆಚ್ಚಾಗಿರುವ ಬಗ್ಗೆ ಮಾತನಾಡಿ, ನಗರಕ್ಕೆ ತುಂಬಾ ಜನ ಬರುತ್ತಿದ್ದಾರೆ. ಬಂದವರು ಮುನ್ನೆಚ್ಚರಿಕೆ ಕ್ರಮ ತಗೋಬೇಕು.

ಟೆಸ್ಟಿಂಗ್ ಹೆಚ್ಚು ಮಾಡಿದ್ದೇವೆ ಎಂದರು. ಅಲ್ಲದೆ 14ರಿಂದ ಅನ್ಲಾಕ್ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಪಾಲಿಸಿ ಜನರಲ್ಲಿ ಮನವಿ ಮಾಡಿಕೊಂಡರು.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd