Dr K Sudhakar | ಜನರ ಪ್ರಾಣ ಉಳಿಯಬೇಕು ಎಂದರೆ ಸುಧಾಕರ್ ರಾಜೀನಾಮೆ ನೀಡಬೇಕು
ಬೆಂಗಳೂರು : ರಾಜ್ಯದ ಜನರ ಪ್ರಾಣ ಉಳಿಯಬೇಕು ಎಂದರೆ ಅಸಮರ್ಥ ಸಚಿವ ಡಾ.ಕೆ.ಸುಧಾಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ರಾಜ್ಯ ಕಾಂಗ್ರೆಸ್ ಒತ್ತಾಯಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ವಿಮ್ಸ್ ಆಸ್ಪತ್ರೆಯಲ್ಲಾದ ಸಾವುಗಳಿಗೆ ಸಿಎಂ ಹಾಗೂ ಆರೋಗ್ಯ ಸಚಿವರು ಹೊಣೆ ಹೊರಬೇಕು. ವಿದ್ಯುತ್ ಕೊರತೆಯಿಂದ ಅವಘಡ ನಡೆದಿಲ್ಲ ಎಂದಾದರೆ ತನಿಖೆಗೆ ಸಮಿತಿ ರಚಿಸಿದ್ದೇಕೆ? ಸುಳ್ಳು ಹೇಳಿ ರಾಜ್ಯದ ದಿಕ್ಕು ತಪ್ಪಿಸುತ್ತಿದೆ ಸರ್ಕಾರ. ರಾಜ್ಯದ ಜನರ ಪ್ರಾಣ ಉಳಿಯಬೇಕು ಎಂದರೆ ಅಸಮರ್ಥ ಸಚಿವ ಡಾ.ಕೆ.ಸುಧಾಕರ್ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದೆ.
https://twitter.com/INCKarnataka/status/1571091627338190848?s=20&t=1KhPm5OWxF-6D0DMEo-zWw
ಇನ್ನು ಉಪಯೋಗಕ್ಕೆ ಬಾರದ ಕೆಲಸಗಳಿಗೆ ದಲಿತರ ಹಣ ದುರ್ಬಳಕೆ ಮಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ದಲಿತರ ಏಳಿಗೆಯನ್ನು ಸಹಿಸಲಾಗುತ್ತಿಲ್ಲವೇ? ಈಗಾಗಲೇ ದಲಿತರ ವಿಶೇಷ ಅನುದಾನವನ್ನು ಕಡಿತಗೊಳಿಸಿದೆ, ಅಲ್ಪ ಅನುದಾನವನ್ನೂ ಬೇರೆಡೆ ಬಳಸಿದೆ. ಈಗ ವೇದಗಣಿತ ಕಲಿಕೆ ಎಂಬ ಮತ್ತೊಂದು ಮೋಸ ಮಾಡುತ್ತಿದೆ. ಬಸವರಾಜ ಬೊಮ್ಮಾಯಿ ಈ ದುರ್ಬಳಕೆ ತಡೆಯಲು ನಿಮ್ಮಿಂದ ಅಸಾದ್ಯವೇ ಎಂದು ಪ್ರಶ್ನಿಸಿದೆ.








