ಡಾ. ರಾಜಕುಮಾರ ಅವರನ್ನು ನೆನದು ಭಾವುಕರಾದ ರಾಜ್ ಸಹೋದರಿ ನಾಗಮ್ಮ
ಚಾಮರಾಜನಗರ: ಕನ್ನಡದ ವರನಟ ಡಾ. ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಸಹೋದರಿ ನಾಗಮ್ಮ ಭಾವನಾತ್ಮಕ ಶುಭಾಶಯ ಕೋರಿದ್ದಾರೆ.
ಇಂದು ಕನ್ನಡದ ವರನಟ ಡಾ. ರಾಜ್‍ಕುಮಾರ್ ಅವರ 93ನೇ ಹುಟ್ಟುಹಬ್ಬವಿದ್ದು, ಹುಟ್ಟೂರು ಚಾಮರಾಜನಗರದ ದೊಡ್ಡಗಾಜನೂರಿನ ತಮ್ಮ ನಿವಾಸದಲ್ಲಿ ರಾಜಕುಮಾರ ಅವರ ಸಹೋದರಿ ಮಾತನಾಡಿ ಅಣ್ಣ ಇದ್ದಿದ್ದರೆ ಮುದ್ದಾಡುತ್ತಿದ್ದೆ. ವರ್ಷ ವರ್ಷ ಶುಭಾಶಯ ಕೂಡ ಹೇಳುತ್ತಿದ್ದೆ. ಅವನಿಗೆ ಮುತ್ತು ಕೊಡುತ್ತಿದ್ದೆ ಎಂದು ನೆನಪಿಸಿಕೊಂಡರು.
ಅಣ್ಣ ಇದ್ದಾನಾ ಹೋಗಿ ತಬ್ಬಿಕೊಂಡು ಶುಭಾಶಯ ಹೇಳೋಕೆ? ಅಣ್ಣ ನನ್ನೊಬ್ಬಳನ್ನೆ ಬಿಟ್ಟು ಹೋಗಿದ್ದಾರೆ. ಅವರು ನನ್ನನ್ನು ಕರೆಸ್ಕೋಬೇಕು ತಾನೆ. ಎಲ್ಲರೂ ಒಟ್ಟಿಗೆ ಬೆಳದ್ವಿ ಎಲ್ಲರೂ ಒಟ್ಟಿಗೆ ಇರಬೇಕು ಅಷ್ಟೇ ಸಾಕು ಎಂದು ಭಾವುಕರಾದರು.
ಇಂದು ಡಾ. ರಾಜ್‌ಕುಮಾರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಸ್ಯಾಂಡಲ್‌ವುಡ್ ನಾನಾ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದೆ. ಕರ್ನಾಟಕ ಸರ್ಕಾರ ಮತ್ತು ಡಾ. ರಾಜ್‌ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೇ, ಕರ್ನಾಟಕ ಸರ್ಕಾರ 2017ನೇ ಸಾಲಿನ ಚಲನಚಿತ್ರ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಬೆಳಗ್ಗೆಯಿಂದಲೇ ಈ ಎಲ್ಲ ಕೆಲಸಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲೇ ಶುರುವಾಗಲಿವೆ.