ಹೊಂಡಗಳ ರಸ್ತೆಗೆ ಪೂಜೆ ಮಾಡಿ , ಉರುಳು ಸೇವೆ ನಡೆಸಿ ವಿನೂತನ ಪ್ರತಿಭಟನೆ….
ಹೊಂಡಗಳ ರಸ್ತೆಗೆ ಆರತಿ ಎತ್ತಿ, ತೆಂಗಿನ ಕಾಯಿ ಒಡೆದ ಉರುಳು ಸೇವೆ ಮಾಡಿ ವಿನೂತನ ಪ್ರತಿಭಟನೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ನಗರದ ಉಡುಪಿ ಮಣಿಪಾಲ್ ರಾಷ್ಟ್ರಿಯ ಹೆದ್ದಾರಿಯ ಇಂದ್ರಾಳಿ ಬ್ರಿಡ್ಜ್ ಬಳಿಯ ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಎಂಬುವವರು ರಸ್ತೆಯಲ್ಲಿ ಉರುಳು ಸೇವೆ ಮಾಡಿ ಪ್ರತಿಭಟನೆ ನಡೆಸಿದ್ದಾರೆ.
ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ರಸ್ತೆಗೆ ಮೂರು ವರ್ಷಗಳ ಹಿಂದೆಯೇ ಟೆಂಡರ್ ಮಂಜೂರು ಮಾಡಲಾಗಿದ್ದರೂ ಮಾರ್ಗ ಇನ್ನೂ ದಯನೀಯ ಸ್ಥಿತಿಯಲ್ಲಿದೆ. ಈ ವಿಚಾರವನ್ನು ಯಾರೂ ಚಕಾರ ಎತ್ತುತ್ತಿಲ್ಲ. ಪ್ರತಿ ದಿನ ಸಾವಿರಾರು ಜನರು ಈ ರಸ್ತೆಯನ್ನು ಬಳಸುತ್ತಾರೆ ಮತ್ತು ಮುಖ್ಯಮಂತ್ರಿಗಳು ಸಹ ಈ ಮಾರ್ಗವನ್ನು ಹಾದು ಹೋಗಿದ್ದಾರೆ.
ಇಲ್ಲಿನ ಹೊಂಡಗಳನ್ನು ರಿಪೇರಿ ಮಾಡಲು ಸ್ವತಃ ಮೋದಿ ಮತ್ತು ನಿತಿನ್ ಗಡ್ಕರಿ ಬರಬೇಕಾದ ಅನಿವಾರ್ಯತೆ ಇದೆ ಎಂದು ನಿತ್ಯಾನಂದ ಒಳಕಾಡು ಲೇವಡಿ ಮಾಡಿದರು. .








