ಎಂಎಸ್ ಡಿ ಸಾರಥ್ಯದ ಚೆನ್ನೈ ತಂಡ ಹೇಗಿದೆ..?
ಸೂಪರ್ ಕಿಂಗ್ಸ್ ಗೆ ಮಹೇಂದ್ರನೇ ಬಲ
ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ನ ಮೋಸ್ಟ್ ಸಕ್ಸಸ್ ಫುಲ್ ಟೀಂ. ಐಪಿಎಲ್ ಶುರುವಿನಿಂದ ಇಲ್ಲಿಯವರೆಗೂ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ಚೆನ್ನೈಗೆ ಕೂಲ್ ಕ್ಯಾಫ್ಟನ್ ಧೋನಿಯೇ ಬಲ. ಪ್ರತಿ ಆವೃತ್ತಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವ ತಂಡ ಸಿಎಸ್ ಕೆ. 12 ಆವೃತ್ತಿಗಳಲ್ಲಿ ಮೂರು ಬಾರಿ ಚಾಂಪಿಯನ್ ಆಗಿರುವ ಚೆನ್ನೈ, ಐದು ಬಾರಿ ಫೈನಲ್ ಪಂದ್ಯದಲ್ಲಿ ಎಡವಿದೆ. ಸಂಘಟಿತ ಹೋರಾಟ ಚೆನ್ನೈ ಟೀಂನ ಸಕ್ಸಸ್ ಸೀಕ್ರೆಟ್.
ಆದ್ರೆ ಈ ಬಾರಿ ಕೊರೊನಾ ಕಾಟದ ಮಧ್ಯೆ ಚೆನ್ನೈನ ಸ್ಟ್ರಾಂಗ್ ಪಿಲ್ಲರ್ ಸುರೇಶ್ ರೈನಾ ತಂಡದಿಂದ ದೂರ ಉಳಿದಿದ್ದಾರೆ. ಜೊತೆಗೆ ಹರ್ಭಜನ್ ಸಿಂಗ್ ಕೂಡ ತಂಡದಲ್ಲಿಲ್ಲ. ಇದು ಸಿಎಸ್ ಕೆ ತಂಡವನ್ನು ಸಂಕಷ್ಟದಲ್ಲಿರಿಸಿದೆ. ಆದರೂ ಚೆನ್ನೈ ಈ ಬಾರಿಯೂ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ಅದಕ್ಕೆ ಕಾರಣ ಒನ್ ಅಂಡ್ ಓನ್ಲಿ ಎಂಎಸ್ ಧೋನಿ.
ಹೌದು..! ಎಂಎಸ್ ಧೋನಿ ಸಿಎಸ್ ಕೆ ತಂಡದ ನಾಯಕ. ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಲ್ ಆಗಿರುವ ಡಿ ಬಾಸ್, ಕಾಮ್ ಆಗಿ ತಂಡವನ್ನು ಗೆಲುವಿನ ತಡ ಸೇರಿಸುತ್ತಾರೆ. ಪ್ರತಿಕ್ಷಣದವರೆಗೂ ಗೆಲುವಿಗಾಗಿ ಹೋರಾಡುವ ಧೋನಿಯ ಆಟ ಇತರೆ ಆಟಗಾರರಿಗೆ ಸ್ಫೂರ್ತಿ ಆಗಿದೆ.
ಚೆನ್ನೈ ತಂಡದ ಬಲಾಬಲ ನೋಡೋದಾದರೆ.. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಎಂಎಸ್ ಧೋನಿ, ಡು ಪ್ಲೆಸೀಸ್, ಅಂಬಾಟಿ ರಾಯುಡು, ಮುರಳಿ ವಿಜಯ್ ಋತುರಾಜ್ ಗಾಯಕ್ವಾಡ್, ಜಗದೀಶನ್ ಚೆನ್ನೈನ ಬ್ಯಾಟಿಂಗ್ ಬಲ.
ಆಲ್ ರೌಂಡರ್ ಗಳಾದ ಡ್ವೇನ್ ಬ್ರಾವೋ, ರವೀಂದ್ರ ಜಡೇಜಾ, ಶೇನ್ ವಾಟ್ಸನ್, ಪಿಯುಷ್ ಚಾವ್ಲಾ, ಕೇಧರ್ ಜಾದವ್, ಕರಣ್ ಶರ್ಮಾ, ಮಿಚನ್ ಸ್ಯಾಂಟನರ್, ಸ್ಯಾಮ್ ಕರನ್, ಎಂತಹ ಸಂದರ್ಭದಲ್ಲಾದರೂ ಪಂದ್ಯದ ಗತಿಯನ್ನ ಬದಲಿಸಬಲ್ಲರು.
ಇನ್ನು ಬೌಲಿಂಗ್ ವಿಭಾಗದಲ್ಲಿ ಇಮ್ರಾನ್ ತಾಹಿರ್, ದೀಪಕ್ ಚಹರ್, ಶರ್ದೂಲ್ ಠಾಕೂರ್, ಲುಂಗಿಸನಿ ನ್ಗಿದಿ, ಜೋಷ್ ಹ್ಯಾಜûಲ್ ವುಡ್, ಕೆ.ಎಂ ಅಸೀಫ್, ಮೊನು ಕುಮಾರ್, ಸಾಯಿ ಕಿಶೋರ್ ಇದ್ದಾರೆ.
ಹೆಡ್ ಕೋಚ್ :ಸ್ಟೀಫೆನ್ ಪ್ಲೆಮಿಂಗ್
ಬ್ಯಾಟಿಂಗ್ ಕೋಚ್ : ಮೈಕಲ್ ಹಸ್ಸಿ
ಬೌಲಿಂಗ್ ಕೋಚ್: ಲಕ್ಷ್ಮೀ ಪತಿ ಬಾಲಾಜಿ
ಫೀಲ್ಡಿಂಗ್ ಕೋಚ್ : ರಾಜೀವ್ ಕುಮಾರ್