Dreams : ಎಂದಾದ್ರೂ ಎತ್ತರದಿಂದ ಜಿಗಿಯುವ ಕನಸು ಕಂಡಿದ್ದೀರಾ, ಈ ರೀತಿಯಾದ ಕನಸಿನ ಅರ್ಥವೇನು..?
ಕನಸಲ್ಲಿ ಬರೋದು ನಿಜವಾಗುತ್ತಾ ,ಕನಸುಗಳಿಗೆ , ಇಂಹದ್ದೇ ಪ್ರತ್ಯೇಕ , ನಿಖರ ಅರ್ಥವಿದ್ಯಾ , ಕಾರಣವಿದೆಯಾ. ಕೆಟ್ಟ ಕನಸು ಒಳ್ಳೆಯ ಕನಸು ಏನಾದ್ರೂ ಮುನ್ಸೂಚನೆಯಾ…?? ಹೀಗೆಲ್ಲಾ ಸಾಕಷ್ಟು ಪ್ರಶ್ನೆಗಳು ಸಹಜವಾಗಿ ನಮ್ಮೆಲ್ಲರನ್ನೂ ಕಾಡುವುದೇ..
ಕನಸುಗಳ ಬಗ್ಗೆ ಹಲವರಿಗೆ ಹಲವು ರೀತಿಯಾದ ನಂಬಿಕೆಗಳಿವೆ.. ಕೆಲವರು ಇದಕ್ಕೆ ಅದ್ರದ್ದೇ ಆದ ಕಾರಣ ಇದೆ.. ಈ ರೀತಿ ಕನಸು ಬಂದ್ರೆ ಹಾಗಾಗುತ್ತೆ ಇದು ಒಳ್ಲೆಯದು ಅದು ಕೆಟ್ಟದ್ದು ಹೀಗೆ ನಾನಾ ರೀತಿಯಾದ ಕನಸುಗಳಿಗೆ ನಾನಾ ಅರ್ಥ ಕಲ್ಪಿಸುವವರ ನಡುವೆ ಇನ್ನೂ ಹಲವರು ಕನಸನ್ನ ಕೇವಲ ನಿದ್ದೆ ಮಾಡಿ ಏಳುವ ತನಕ ಅದಾದದ ನಂತರ ಅದು ಕನಸಷ್ಟೇ ಯಾವುದೇ ಅರ್ಥವಿಲ್ಲ ಅಂತಲೂ ಯೋಚನೆ ಮಾಡ್ತಾರೆ.
ವಾಟ್ಸಪ್ ಟೆಲಿಗ್ರಾಂ ಸುರಕ್ಷಿತವಲ್ಲ, ಸರ್ಕಾರಿ ಉದ್ಯೋಗಿಗಳಿಗೆ ಕೇಂದ್ರದ ಎಚ್ಚರಿಕೆ.
ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ. ಅವರ ಪ್ರಕಾರ ಒಂದು ಕನಸು ವ್ಯಕ್ತಿಯ ಹಿಂದಿನ, ವರ್ತಮಾನ/ಭವಿಷ್ಯದ ಪ್ರತಿಬಿಂಬವಾಗಿದೆ. ನಮಗೆ ಅನೇಕ ರೀತಿಯಾದ ಕನಸುಗಳು ಬೀಳುತ್ತವೆ. ಪ್ರಪಂಚದಾದ್ಯಂತ ಜನರು ನಿದ್ದೆ ಮಾಡುವಾಗ ಕನಸು ಕಾಣುತ್ತಾರೆ. ಮತ್ತು ಕನಸಿನ ವ್ಯಾಖ್ಯಾನಕಾರರು ಪ್ರತಿ ಕನಸಿಗೆ ಒಂದು ಅರ್ಥವಿದೆ ಎಂದು ನಂಬುತ್ತಾರೆ. ಅದ್ರಂತೆ ಸಾಮಾನ್ಯವಾಗಿ ನಾವು ಎತ್ತರದಿಂದ ಹಾರುವ ಕನಸನ್ನ ಆಗಾಗ ಕಾಣುತ್ತಿರುತ್ತೇವೆ. ಆದ್ರೆ ಅದ್ರ ಅರ್ಥ ಏನಿರಬಹುದು ಅನ್ನೋದರ ಬಗ್ಗೆಯೂ ಕೆಲವೊಮ್ಮೆ ಯೋಚನೆ ಮಾಡುತ್ತೇವೆ. ಅದರ ಅರ್ಥ ಹುಡುಕುವ ಪ್ರಯತ್ನ ಮಾಡ್ತೇವೆ.