ಬೆಂಗಳೂರಿನಲ್ಲಿ ಫುಟ್‌ಪಾತ್ ಮೇಲೆ ವಾಹನ ಚಲಾಯಿಸುವವರ ವಿರುದ್ಧ ಟ್ರಾಫಿಕ್ ಪೋಲಿಸರು ಕಠಿಣ ಕ್ರಮ ಕೈಗೊಳ್ಳುವ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಫುಟ್‌ಪಾತ್‌ನಲ್ಲಿ ಬೈಕ್ ಮತ್ತು ಕಾರುಗಳನ್ನು ಓಡಿಸುವ ಸವಾರರಿಗೆ ಸಂಚಾರ ವಿಭಾಗದ ಪೊಲೀಸರು ಎಚ್ಚರಿಕೆ ನೀಡಿ, ಪಾದಾಚಾರಿ ರಸ್ತೆಯಲ್ಲಿ ವಾಹನ ಚಲಾಯಿಸಿದರೆ ಡ್ರೈವಿಂಗ್ ಲೈಸೆನ್ಸ್ (DL) ಅಮಾನತು ಮಾಡುವುದಾಗಿ ಹೇಳಿದ್ದಾರೆ.
ಈ ಕ್ರಮವನ್ನು ಸಾರ್ವಜನಿಕ ಸುರಕ್ಷತೆಗಾಗಿ ಹಾಗೂ ಫುಟ್‌ಪಾತ್ ಅನ್ನು ಪಾದಚಾರಿ ಬಳಕೆಗೆ ಮೀಸಲಿಡಲು ತೆಗೆದುಕೊಳ್ಳಲಾಗಿದೆ. ಫುಟ್‌ಪಾತ್‌ಗಳಲ್ಲಿ ವಾಹನ ಚಲಾಯಿಸುವುದರಿಂದ ಪಾದಚಾರಿ ರಸ್ತೆ ಅಥವಾ ದಾರಿಯಲ್ಲಿ ನಡೆಯುವ ಜನರಿಗೆ ತೊಂದರೆ ಅಥವಾ ಅಪಘಾತಗಳು ಸಂಭವಿಸಬಹುದು.
ಈ ಹಿನ್ನೆಲೆಯಲ್ಲಿ, ಟ್ರಾಫಿಕ್ ಪೋಲಿಸರು, ಫುಟ್‌ಪಾತ್‌ನಲ್ಲಿ ವಾಹನ ಚಲಾಯಿಸುವವರಿಗೆ ಕೇಸ್ ದಾಖಲಿಸಿ ದಂಡ ವಿಧಿಸಲು ಕೂಡ ನಿರ್ಧರಿಸಿದ್ದಾರೆ. ಫುಟ್‌ಪಾತ್‌ಗಳು ಪಾದಚಾರಿಗಳ ಸುರಕ್ಷತೆಗಾಗಿ ಇವೆ, ಅಲ್ಲಿ ವಾಹನ ಚಲಾಯಿಸುವುದನ್ನು ತಡೆಯಬೇಕು ಎಂದು ಪೋಲಿಸರು ಹೇಳಿದ್ದಾರೆ.