Duleep Trophy ಎರಡನೆ ದಿನ ದಕ್ಷಿಣ ವಲಯ ಮೇಲುಗೈD
ವೇಗಿಗಳ ಅದ್ಭುತ ಪ್ರದರ್ಶನದ ನೆರವಿನಿಂದ ದಕ್ಷಿಣ ವಲಯ ತಂಡ ಪಶ್ಚಿಮ ವಲಯ ವಿರುದ್ಧ ಮೇಲುಗೈ ಸಾಧಿಸಿದೆ.
ಇಲ್ಲಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಎರಡನೆ ದಿನದಾಟದ ಪಂದ್ಯಕ್ಕೆ ಮಳೆ ಅಡ್ಡಿ ಮುಂದುವರೆದಿದೆ. ದಕ್ಷಿಣ ವಲಯ ಮೊದಲ ಇನ್ನಿಂಗ್ಸ್ನಲ್ಲಿ 213 ರನ್ಗಳಿಗೆ ಆಲೌಟ್ ಆಯಿತು. ಪಶ್ಚಿಮ ವಲಯ ಮೊದಲ ಇನ್ನಿಂಗ್ಸ್ನಲ್ಲಿ 129 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿದೆ. ಇನ್ನು 84 ರನ್ಗಳ ಹಿನ್ನಡೆ ಅನುಭವಿಸಿದೆ.
ದಿನದ ಆರಂಭದಲ್ಲಿ ಬ್ಯಾಟಿಂಗ್ ಮುಂದುವರೆಸಿದ ದಕ್ಷಿಣ ವಲಯ ತಂಡದ ವಾಷಿಂಗ್ಟನ್ ಸುಂದರ್ ಅಜೇಯ 22, ವೈಶಾಕ್ 13, ವಿದ್ವಾತ್ ಕಾವೇರಪ್ಪ 8 ರನ್ ಗಳಿಸಿದರು.
ಪಶ್ಚಿಮ ವಲಯ ಪರ ಶಾಮ್ಸ್ ಮುಲಾನಿ 29ಕ್ಕೆ 3, ಅರ್ಜಾನ್ 62ಕ್ಕೆ 2, ಚಿಂತನ್ ಗಜ 27ಕ್ಕೆ 2, ಧರ್ಮೇಂದ್ರ ಸಿನ್ಹ್ 33ಕ್ಕೆ 2 ವಿಕೆಟ್ ಪಡೆದರು.
ಮೊದಲ ಇನ್ನಿಂಗ್ಸ್ ಆರಂಭಿಸಿದ ಪಶ್ಚಿಮ ವಲಯ ತಂಡಕ್ಕೆ ಓಪನರ್ ಪ್ರಿಯಾಂಕ್ ಪಾಂಚಲ್ ಅವರ ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಎರಡನೆ ವಿಕೆಟ್ಗೆ ಪೃಥ್ವಿ ಶಾ ಜತೆಗೂಡಿದ ಹಾರ್ವಿಕ್ ದೇಸಾಯಿ 70 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಬೋಜನ ವಿರಾಮದ ವೇಳೆಗೆ ಪಶ್ಚಿಮ ವಲಯ 1 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿತ್ತು.
ವೇಗಿಗಳನ್ನು ಚೆಂಡಾಡಿದ ಪೃಥ್ವಿ ಶಾ ಮಿಂಚಿದ ಹೊಡೆತಗಳ ಮೂಲಕ 73 ಎಸೆತದಲ್ಲಿ ಅರ್ಧ ಶತಕ ಪೂರೈಸಿದರು. 21 ರನ್ ಗಳಿಸಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹಾರ್ವಿಕ್ ದೇಸಾಯಿ ವೇಗಿ ಕಾವೇರಪ್ಪ ಎಸೆತದಲ್ಲಿ ಕ್ಯಾಚ್ ನೀಡಿ ಹೊರ ನಡೆದರು.
ಇದಾದ ಕೆಲವೇ ನಿಮಿಷಗಳಲ್ಲಿ ದಾಳಿಗಿಳಿದ ವೇಗಿ ವೈಶಾಕ್ ಪೃಥ್ವಿ ಶಾಗೆ (63ರನ್) ಬೌನ್ಸರ್ ಹಾಕಿ ಪೆವಿಲಿಯನ್ ಸೇರುವಂತೆ ಮಾಡಿದರು.
ಪಂದ್ಯಕ್ಕೆ ತಿರುವು ನೀಡಿದ ವೇಗಿ ಕಾವೇರಪ್ಪ
ನಂತರ 65 ನಿಮಿಷಗಳ ಕಾಲ ಮಳೆ ಸುರಿದಿದ್ದರಿಂದ ಪಂದ್ಯವನ್ನು ಸ್ಥಗಿತಗೊಂಡಿತ್ತು. ಪಂದ್ಯ ಆರಂಭದ ನಂತರ ದಾಳಿಗಳಿದ ವೇಗಿ ವಿದ್ವತ್ ಕಾವೇರಪ್ಪ ಟೆಸ್ಟ್ ಚೇತೇಶ್ವರ ಪುಜಾರ ಮತ್ತು ಸೂರ್ಯ ಕುಮಾರ್ ಯಾದವ್ ಅವರುಗಳ ವಿಕೆಟ್ ಪಡೆದು ಪಂದ್ಯಕ್ಕೆ ದೊಡ್ಡ ತಿರುವು ನೀಡಿದರು.
ಸೀಮಿತ ಓವರ್ಗಳಲ್ಲಿ ಆಡುವಂತೆ ಆಡಿದ ಸೂರ್ಯ ಕುಮಾರ್ ಮಿಡ್ವಿಕೆಟ್ನತ್ತ ಚೆಂಡನ್ನು ಹೊಡೆದರು. ಸಾಯಿ ಕಿಶೋರ್ ಕ್ಯಾಚ್ ಕೈಚೆಲ್ಲಿ ಜೀವದಾನ ನೀಡಿದರು. ನಂತರ ಎಚ್ಚರಿಕೆಯಿಂದ ಆಡದ ಸೂರ್ಯಕುಮಾರ್ (8ರನ್) ವಿದ್ವತ್ ಕಾವೇರಪ್ಪ ಎಸೆತದಲ್ಲಿ ಸ್ಲಿಪ್ನಲ್ಲಿ ಹನುಮ ವಿಹಾರಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಆರನೆ ಕ್ರಮಾಂಕದಲ್ಲಿ ಬಂದ ರ್ಸಾರಾಜ್ ಖಾನ್ (0ರನ್)ನಾಲ್ಕು ಎಸೆತ ಎದುರಿಸಿ ಕಾವೇರಪ್ಪ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ದರು. ಕೆಲವು ನಿಮಿಷಗಳ ನಂತರ ಎಚ್ಚರಿಕೆಯಿಂದ ಆಡಬೇಕಿದ್ದ ಚೇತೇಶ್ವರ ಪೂಜಾರ ಕಾವೇರಪ್ಪ ಎಸೆತದಲ್ಲಿ ಹೊಡೆದ ಚೆಂಡನ್ನು ಲೆಗ್ ಗಲ್ಲಿಯಲ್ಲಿ ಆರ್.ಸಮರ್ಥ್ ಸೊಗಸಾಗಿ ಹಿಡಿದರು.ಪಶ್ಚಿಮ ವಲಯ ಸಂಪೂರ್ಣ ಕುಸಿತ ಕಂಡು ಇನ್ನಿಂಗ್ಸ್ ಹಿನ್ನಡೆ ಭೀತಿಯಲ್ಲಿ ಸಿಲುಕಿತು. ಕೊನೆಯಲ್ಲಿ ಶಾಮ್ಸ್ ಮುಲಾನಿ ವೈಶಾಕ್ಗೆ ವಿಕೆಟ್ ಒಪ್ಪಿಸಿದರು.
ದಕ್ಷಿಣ ವಲಯ ಪರ ವಿದ್ವತ್ ಕಾವೇರಪ್ಪ 44ಕ್ಕೆ 4,ವಿಜಯ್ ಕುಮಾರ್ 29ಕ್ಕೆ 2, ವಾಸೂಕಿ ಕೌಶಿಕ್ 26ಕ್ಕೆ 1 ವಿಕೆಟ್ ಪಡೆದರು.
ಪ್ಯಾರಿಸ್ ಒಲಿಂಪಿಕ್ಸ್ ಗೆ ಅದ್ದೂರಿ ಚಾಲನೆ!
ಪ್ಯಾರಿಸ್: 33ನೇ ಒಲಿಂಪಿಕ್ಸ್ ಗೆ(Olympics Games) ಅದ್ಧೂರಿ ಚಾಲನೆ ಸಿಕ್ಕಿದೆ. ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಸೆನ್ ನದಿಯ (River Seine) ಮೇಲೆ ಭಾರತೀಯ ಕಾಲಮಾನ ಶುಕ್ರವಾರ...