ದ್ವಿತ್ವ ಪೋಸ್ಟರ್ ನಕಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ ಡಿಸೈನರ್
ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ, ಲೂಸಿಯಾ ಖ್ಯಾತಿಯ ಪವನ್ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದ ಟೈಟಲ್ ಅನೌನ್ಸ್ ಆಗಿದ್ದು, ಚಿತ್ರಕ್ಕೆ ದ್ವಿತ್ವ ಎಂದು ಹೆಸರಿಡಲಾಗಿದೆ.
ಈ ಚಿತ್ರದ ನಿರ್ಮಾಣದ ಜವಾಬ್ದಾರಿಯನ್ನು ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿದೆ. ಪುನೀತ್ ರಾಜ್ ಕುಮಾರ್ ಅವರ 31ನೇ ಸಿನಿಮಾ ಇದಾಗಿದೆ. ಈ ಚಿತ್ರ ಸೈಕೋಲಾಜಿಕಲ್ ಮತ್ತು ಥ್ರೀಲ್ಲರ್ ನಿಂದ ಕೂಡಿರುತ್ತೆ ಎಂದು ಹೊಂಬಾಳೆ ಫಿಲ್ಮ್ಸ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿದೆ.
ಮೊದಲ ಸಲ ಪುನೀತ್ ರಾಜ್ ಕುಮಾರ್ ಸೈಕಲಾಜಿಕಲ್ ಥ್ರಿಲ್ಲರ್ ಕಥೆ ಮಾಡ್ತಿದ್ದು, ಅಪ್ಪು ವೃತ್ತಿ ಜೀವನದಲ್ಲೂ ಇದು ಬಹಳ ವಿಭಿನ್ನ ಪೋಸ್ಟರ್ ಎನಿಸಿಕೊಂಡಿದೆ. ಮೊದಲ ಪೋಸ್ಟರ್ ಮೂಲಕವೇ ಚಿತ್ರರಸಿಕರ ಗಮನ ಸೆಳೆದ ಪವನ್ ಕುಮಾರ್ ಮೇಲೆ ಅತಿಯಾದ ನಿರೀಕ್ಷೆ ಹುಟ್ಟಿಕೊಂಡಿದೆ.
ಆದ್ರೆ ಇದೀಗ ಗೊಂದಲವೂ ಮೂಡಿಬಂದಿದೆ.. ‘ದ್ವಿತ್ವ’ ಪೋಸ್ಟರ್ ಹೋಲುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವುದು ಈ ಪೋಟೋ, ಎಲ್ಲಿನದ್ದು ಎಂದು ಹುಡುಕಿ ಹೋದಾಗ ದ್ವಿತ್ವ ಚಿತ್ರದ ಪೋಸ್ಟರ್ ಕಾಪಿನಾ ಎಂಬ ಅನುಮಾನ ಮೂಡಿದೆ.
ಚಿತ್ರ ಟೈಟಲ್ ವಿಭಿನ್ನವಾಗಿದ್ದು, ದ್ವಿತ್ವ ಪದ ಅರ್ಥ ‘ಎರಡು ಬಗೆ’ ಎಂಥಿದ್ದು,ಲೂಸಿಯಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿ ಜನಪ್ರಿಯರಾಗಿದ್ದ ಪೂರ್ಣಚಂದ್ರ ತೇಜಸ್ವಿ ಅವರೇ ದ್ವಿತ್ವ ಚಿತ್ರಕ್ಕೂ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಪ್ರೀತಾ ಜಯರಾಮನ್ ಛಾಯಾಗ್ರಹಣ ಮಾಡಲಿದ್ದಾರೆ. ಸೆಪ್ಟೆಂಬರ್ ನಲ್ಲಿ ಚಿತ್ರೀಕರಣ ಆರಂಭಿಸಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಸಿನಿಮಾದ ಮೇಲೆ ಭಾರಿ ಕುತೂಹಲ ಕೆರಳಿಸಿದೆ.
ದ್ವಿತ್ವ ಪೋಸ್ಟರ್ ಹೋಲುವಂತೆ ವೈರಲ್ ಆಗಿರುವ ಫೋಟೋ ಸೌಂಡ್ಕ್ಲೌಡ್ ಎಂಬ ಪಾಡ್ಕಾಸ್ಟ್ ವೆಬ್ಸೈಟ್ನಲ್ಲಿ ಕಾಣಿಸಿಕೊಂಡಿದೆ. ಇದೊಂದು ಮ್ಯೂಸಿಕ್ ಮತ್ತು ಆಡಿಯೋ ಪ್ಲಾಟ್ಫಾರ್ಮ್ ಆಗಿದ್ದು, ಇದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಈ ಫೋಟೋ ಡಿಸೈನ್ ಇದೆ. ಥೇಟ್ ದ್ವಿತ್ವ ಚಿತ್ರದ ಪೋಸ್ಟರ್ ನಂತೆ ಇದೆ. ಆದರ್ಶ್ ಡಿಸೈನ್ ಮಾಡಿರುವ ಪೋಸ್ಟ್ ಪೋಸ್ಟರ್ ಕಾಪಿನಾ ಎಂಬ ಅನುಮಾನ ಮೂಡಿದೆ..
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆದರ್ಶ್ ‘ದ್ವಿತ್ವ’ ಸಿನಿಮಾದ ಪೋಸ್ಟರ್ ಡಿಸೈನ್ ಮಾಡಿರುವ ಆದರ್ಶ್ ಹೇಳಿಕೆಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ‘ದ್ವಿತ್ವ’ ಸಿನಿಮಾಕ್ಕೆ ಮಾಡಲಾಗಿರುವ ಪೋಸ್ಟರ್ ಕೃತಿಚೌರ್ಯದ್ದಲ್ಲ ಬದಲಿಗೆ ‘ಷಟರ್ ಸ್ಟಾಕ್’ ಹೆಸರಿನ ಚಿತ್ರಗಳನ್ನು ಮಾರುವ ವೆಬ್ನಿಂದ ಖರೀದಿಸಿದ್ದು’ ಎಂದಿದ್ದಾರೆ.