ತೈಪೆ: ತೈವಾನ್‌ನ ಪೂರ್ವ ನಗರವಾದ ಹುವಾಲಿಯನ್ ಹತ್ತಿರ ಭೂಕಂಪನದ ಅನುಭವವಾಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ.
ಹುವಾಲಿಯನ್ ನಿಂದ 34 ಕಿಮೀ ದೂರದಲ್ಲಿ 6.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ದ್ವೀಪದ ಹವಾಮಾನ ಆಡಳಿತವು ಹೇಳಿದೆ. ಭೂಕಂಪನದ ತೀವ್ರತೆಗೆ ರಾಜಧಾನಿ ತೈಪೆಯಲ್ಲಿ ಕಟ್ಟಡಗಳು ನಲುಗಿವೆ. ಭೂಕಂಪವು 9.7 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಆದರೆ, ಈ ಕಂಪನದಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ತೈವಾನ್ ಎರಡು ಟೆಕ್ಟೋನಿಕ್ ಪ್ಲೇಟ್‌ಗಳ ಜಂಕ್ಷನ್‌ನ ಸಮೀಪದಲ್ಲಿದೆ. ಆಗಾಗ ಭೂಕಂಪಗಳಿಗೆ ಗುರಿಯಾಗುತ್ತದೆ. ಹೀಗಾಗಿ ಈ ಪ್ರದೇಶದ ಜನರು ಯಾವಾಗಲೂ ಕೈಯಲ್ಲಿ ಜೀವ ಹಿಡಿದು ಬದುಕಬೇಕಾದ ಸ್ಥಿತಿಯಲ್ಲಿರುತ್ತಾರೆ.








