ಅಲ್ಲಿಯ ಹಿಂಗೋಲಿ ನಗರದಲ್ಲಿ ಬೆಳಿಗ್ಗೆ 10 ನಿಮಿಷಗಳ ಅಂತರದಲ್ಲಿ 4.5 ಹಾಗೂ 3.6 ತೀವ್ರತೆಯ ಭೂಕಂಪ ಸಂಭವಿಸಿರುವ ಕುರಿತು ವರದಿಯಾಗಿದೆ. ಈ ಭೂಕಂಪನ ನಗರದ 10 ಕಿ.ಮೀ ಆಳದಲ್ಲಿ ಸಂಭವಿಸಿದೆ. ಎರಡನ ಭೂಕಂಪ ಬೆಳಗ್ಗೆ 6.19ರ ಎನ್ನಲಾಗಿದೆ.
ಆದರೆ, ಭೂಕಂಪನದಿಂದಾಗಿ ಯಾವುದ ಆಸ್ತಿ-ಪಾಸ್ತಿ ಅಥವಾ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮಹಾರಾಷ್ಟ್ರದ ಮರಾಠವಾಡದ ನಾಂದೇಡ್, ಪರ್ಭಾನಿ, ಹಿಂಗೋಲಿ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ.
ಈ ಭೂಕಂಪದ ಕೇಂದ್ರ ಬಿಂದು ಹಿಂಗೋಲಿ ಜಿಲ್ಲೆಯ ಅಖಾರ ಬಾಲಾಪುರ ಮತ್ತು ಇದರ ತೀವ್ರತೆಯನ್ನು ಹಿಂಗೋಲಿ ಪರ್ಭಾನಿ ನಾಂದೇಡ್ ಜಿಲ್ಲೆಯ ಎಲ್ಲಾ ಮೂರು ಗ್ರಾಮಗಳು ಅನುಭವಿಸಿವೆ. ಭೂಕಂಪನ ಸಂಭವಿಸಿದ ಪ್ರದೇಶಗಲ್ಲಿನ ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ ಎನ್ನಲಾಗಿದೆ.