Earthquake : ಪಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 11 ಮಂದಿ ಸಾವು…
ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ದೇಶಗಳಲ್ಲಿ ಬಾರಿ ಭೂಕಂಪ ಸಂಭವಿಸಿದೆ. ಪಾಕಿಸ್ಥಾನದ ಇಸ್ಲಾಮಾಬಾದ್, ಲಾಹೋರ್ ಮತ್ತು ಪೇಶಾವರ್ ಪ್ರದೇಶಗಳಲ್ಲಿ 6.8 ರ ತೀವ್ರತೆಯಲ್ಲಿ ಭೂಕಂಪ ಸಂಭವಿಸಿದೆ. ಕಂಪನದ ತೀವ್ರತೆಗೆ ಹಲವು ಕಟ್ಟಡಗಳು ಧರೆಗುರುಳಿವೆ. ರಾವಲ್ಪಿಂಡಿ, ಕೇತ್ವಾ, ಕೊಹಟ್ಟಾ ಸೇರಿದಂತೆ ಹಲವೆಡೆ ಭೂಕಂಪನದ ಅನುಭವವಾಗಿದೆ. ಪಂಜಾಬ್‌ನ ಖೈಬರ್ ಪಖ್ತುಂಖ್ವಾದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಭೂಕಂಪನದ ಪರಿಣಾಮ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಇಲ್ಲಿಯವರೆಗೆ 11 ಮಂದಿ ಸಾವನ್ನಪ್ಪಿದ್ದು, 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪನದ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಎಚ್ಚೆತ್ತುಕೊಂಡಿದೆ. ಯಾವುದೇ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿರುವಂತೆ ಪ್ರಧಾನಿ ಆದೇಶಿಸಿದ್ದಾರೆ. ಇಸ್ಲಾಮಾಬಾದ್ ನ ಪ್ರಮುಖ ಆಸ್ಪತ್ರೆಗಳು ಕಟ್ಟೆಚ್ಚರದಲ್ಲಿವೆ ಎಂದು ಆರೋಗ್ಯ ಸಚಿವ ಅಬ್ದುಲ್ ಖಾದರ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲೂ ಭಾರೀ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 6.8ರಷ್ಟಿತ್ತು. ಭೂಕಂಪನದ ಕೇಂದ್ರ ಬಿಂದು ಫೈಜಾಬಾದ್‌ನಿಂದ 133 ಕಿಮೀ ದೂರದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. 190 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ ಎಂದು ತೋರುತ್ತದೆ.
ಭಾರೀ ಭೂಕಂಪದ ನಂತರ ಅನೇಕ ಜನರು ತಮ್ಮ ಮನೆಗಳಿಂದ ಹೊರಬಂದು ಖಾಲಿ ಸ್ಥಳಗಳಲ್ಲಿ ನಿಂತಿದ್ದರು. ಭಾರತದ ರಾಜಧಾನಿ ದೆಹಲಿಯಲ್ಲಿಯೂ ರಾತ್ರಿ ಭೂಮಿ ಕಂಪಿಸಿದೆ. ರಾತ್ರಿ 10.17ಕ್ಕೆ ಭೂಮಿ ಕಂಪಿಸಿತು. ದೆಹಲಿಯ ಹಲವು ಭಾಗಗಳಲ್ಲಿ ರಿಕ್ಟರ್ ಮಾಪಕದಲ್ಲಿ 6.6 ತೀವ್ರತೆಯ ಭೂಕಂಪ ಸಂಭವಿಸಿದೆ.
Earthquake: Powerful earthquake in Pakistan and Afghanistan – 11 dead…