ಸೋಂಕು ಹೆಚ್ಚಾದ್ರೆ ಶಾಲೆಗಳು ಮತ್ತೆ ಬಂದ್
ಬೆಂಗಳೂರು : ಮೊದಲ ಹಂತವಾಗಿ ಇಂದಿನಿಂದ ರಾಜ್ಯದಲ್ಲಿ 9, 10 ಮತ್ತು ಪಿಯುಸಿ ತರಗತಿಗಳನ್ನು ಆರಂಭಿಸಲಾಗಿದೆ.
ಆದ್ರೆ ಸೋಂಕಿನ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಓಪನ್ ಮಾಡಿಲ್ಲ.
ಈ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾದರೆ ಶಾಲೆಗಳನ್ನು ಮತ್ತೆ ಬಂದ್ ಮಾಡಲಾಗುವುದು.
ಸದ್ಯ ಕೊರೊನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಓಪನ್ ಮಾಡಲಾಗಿದೆ ಎಂದು ತಿಳಿಸಿದರು.
ಇನ್ನು ಇಂದಿನಿಂದ ರಾಜ್ಯದಾದ್ಯಂತ ಶಾಲಾ – ಕಾಲೇಜುಗಳು ಓಪನ್ ಆಗಿದ್ದು, ಕೊರೊನಾ ನಿಯಮಗಳ ಅನುಸಾರವಾಗಿ ತರಗತಿಗಳು ನಡೆಯಲಿವೆ.
ಶಾಲೆಗಳ ತೆರೆಯುವುದರ ಬಗ್ಗೆ ಸರ್ಕಾರ ಈಗಾಗಲೇ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಅದರ ಅನುಸಾರವಾಗಿ ತರಗತಿಗಳು ನಡೆಯಲಿವೆ.