ADVERTISEMENT
Monday, May 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Saaksha Special Life Style

ಆದ್ಯತೆಯ ಕಲಿಕೆಯ ಮಾದರಿಯಾಗಿ ಹೈಬ್ರಿಡ್’ ಹೊರಹೊಮ್ಮಿದ HP ಇಂಡಿಯಾ`ಫ್ಯೂಚರ್ ಆಫ್ಲರ್ನಿಂಗ್ ಸ್ಟಡಿ 2022

Namratha Rao by Namratha Rao
January 20, 2022
in Life Style, Newsbeat, ಜೀವನಶೈಲಿ
Share on FacebookShare on TwitterShare on WhatsappShare on Telegram

ಆದ್ಯತೆಯ ಕಲಿಕೆಯ ಮಾದರಿಯಾಗಿ ಹೈಬ್ರಿಡ್’ ಹೊರಹೊಮ್ಮಿದ HP ಇಂಡಿಯಾ`ಫ್ಯೂಚರ್ ಆಫ್ಲರ್ನಿಂಗ್ ಸ್ಟಡಿ 2022

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಹೈಬ್ರಿಡ್ ಲರ್ನಿಂಗ್ ಮಾದರಿಗೆ ಅಗಾಧವಾದ ಆದ್ಯತೆ ನೀಡುತ್ತಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದವರು, ಹೈಬ್ರಿಡ್ ಮಾದರಿಯು ಹವಾಮಾನ ವೈಪರೀತ್ಯದ ಪರಿಸ್ಥಿತಿಗಳಲ್ಲಿಯೂ ಕಲಿಕೆ ಮುಂದುವರಿಯುವುದನ್ನು ಖಚಿತಪಡಿಸುತ್ತದೆ ಎಂದು ಭಾವಿಸುತ್ತಾರೆ.
ಆನ್‌ಲೈನ್ ತರಗತಿಗಳು ತಮಗೆ ಕೆಲಸ-ಜೀವನದ ಸಮತೋಲನವನ್ನು ಸುಧಾರಿಸಿದೆ ಎಂದು ಶಿಕ್ಷಕರು ಕಂಡುಕೊಂಡಿದ್ದಾರೆ
ಪಿಸಿಗಳು ಈಗ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಹೆಚ್ಚು ಆದ್ಯತೆಯ ಕಲಿಕೆಯ ಸಾಧನಗಳಾಗಿವೆ.

Related posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

May 4, 2026
ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

May 4, 2026

ಮುಖ್ಯಾಂಶಗಳು
• ಹೈಬ್ರಿಡ್ ಕಲಿಕೆಯ ಮಾದರಿಯು ತಮ್ಮ ಹವ್ಯಾಸಗಳನ್ನು ಮುಂದುವರಿಸಲು ಹೆಚ್ಚುವರಿ ಸಮಯವನ್ನು ನೀಡುತ್ತದೆ ಎಂದು ಸರ್ವೇ ಮಾಡಲಾದ ವಿದ್ಯಾರ್ಥಿಗಳ ಪೈಕಿ 83% ಮಂದಿ ಭಾವಿಸುತ್ತಾರೆ
• ಆನ್‌ಲೈನ್ ಕಲಿಕೆಯು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ನಿರಂತರ ಕಲಿಕೆಯನ್ನು ಖಚಿತಪಡಿಸುತ್ತದೆ ಎಂದು ಬಹುತೇಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಒಪ್ಪುತ್ತಾರೆ.
• ಆನ್‌ಲೈನ್ ಕಲಿಕೆಯಿಂದಾಗಿ ತಾವು ಉತ್ತಮ ಕೆಲಸ-ಜೀವನ ಸಮತೋಲನವನ್ನು ಕಂಡುಕೊಂಡಿದ್ದಾಗಿ 92% ಶಿಕ್ಷಕರು ನಂಬುತ್ತಾರೆ.
• ಮಕ್ಕಳು ತಮ್ಮ ಕಲಿಕೆಗೆ ಟ್ಯಾಬ್ಲೆಟ್ ಅಥವಾ ಫೋನ್‌ಗಳಿಗಿಂತ ಒಂದು ಪಿಸಿ ಬಳಸಬೇಕೆಂದು 88% ಶಿಕ್ಷಕರು ಬಯಸುತ್ತಾರೆ

ಬೆಂಗಳೂರು,ಜನವರಿ 20, 2022- ಸಾಂಕ್ರಾಮಿಕ ರೋಗದ ಆಕ್ರಮಣ ಮತ್ತು ಚಾಲ್ತಿಯಲ್ಲಿರುವ ಪ್ರಭಾವ ಭಾರತೀಯ ಶಿಕ್ಷಣ ವ್ಯವಸ್ಥೆಯನ್ನು ಸಾಕಷ್ಟು ಅಸ್ತವ್ಯಸ್ತಗೊಳಿಸಿದೆ. ಆನ್‌ಲೈನ್ ಕಲಿಕೆಯ ಪರಿಣಾಮವಾಗಿ, ತರಗತಿಯಲ್ಲಿ ಶಿಕ್ಷಕರು ಹೇಗೆ ಬೋಧಿಸುತ್ತಾರೆ ಎಂಬುದೂ ಬದಲಾವಣೆಗೆ ಒಳಗಾಗಿದೆ. HP ಇಂಡಿಯಾ ಫ್ಯೂಚರ್ ಆಫ್ ಲರ್ನಿಂಗ್ ಸ್ಟಡಿ 2022 ಪ್ರಕಾರ, ಸರ್ವೇ ಮಾಡಲಾದವರ ಪೈಕಿ 98% ಪೋಷಕರು ಮತ್ತು 99% ಶಿಕ್ಷಕರು ಆನ್‌ಲೈನ್ ಶಿಕ್ಷಣವು ಕಲಿಕೆಯನ್ನು ನಿರಂತರವಾಗಿ ಮುನ್ನಡೆಸುತ್ತಿದೆ ಎಂದು ಹೇಳುತ್ತಾರೆ. ವಾಸ್ತವವಾಗಿ, ಆನ್‌ಲೈನ್ ಕಲಿಕೆಯು ಸಾಂಪ್ರದಾಯಿಕ ತರಗತಿಯ ಕಲಿಕೆಗೆ ಪೂರಕವಾಗಿದೆ ಎಂದು ಬಹುಪಾಲು (91%) ವಿದ್ಯಾರ್ಥಿಗಳು ನಂಬುತ್ತಾರೆ.
ಅಧ್ಯಯನವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಾದ್ಯಂತ ಹೈಬ್ರಿಡ್ ಕಲಿಕೆಯ ಮಾದರಿಗೆ ಅಗಾಧ ಆದ್ಯತೆಯನ್ನು ಕಂಡುಕೊಂಡಿದೆ ಮತ್ತು ಸಾಂಪ್ರದಾಯಿಕ ತರಗತಿಗಳು ಪುನರಾರಂಭಿಸಿದ ನಂತರವೂ ಅವರು ಆನ್‌ಲೈನ್ ಕಲಿಕೆಯನ್ನು ಕೆಲವು ರೂಪದಲ್ಲಿ ಮುಂದುವರಿಸಲು ಬಯಸುತ್ತಾರೆ.

ಭವಿಷ್ಯಕ್ಕಾಗಿ ಹೈಬ್ರಿಡ್ ಕಲಿಕೆಯ ಮಾದರಿಗೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಆದ್ಯತೆ ನೀಡಿದ್ದಾರೆ. ಸಾಂಪ್ರದಾಯಿಕ ತರಗತಿಗಳು ಮತ್ತೆ ಆರಂಭವಾದ ಮೇಲೂ ಆನ್‌ಲೈನ್ ಕಲಿಕೆಯನ್ನು ಮುಂದುವರಿಸಲು ಒಲವು ತೋರಿದ್ದಾರೆ.

ಹೈಬ್ರಿಡ್ ಕಲಿಕೆಯು ಹೊಸ ಸಾಮಾನ್ಯ ಶಿಕ್ಷಣವಾಗಿದೆ ಎಂದು ವಿದ್ಯಾರ್ಥಿಗಳು ಪರಿಭಾವಿಸುತ್ತಾರೆ.

• ಆನ್‌ಲೈನ್ ಮತ್ತು ತರಗತಿಯ ಕಲಿಕೆಯ ಸಂಯೋಜಿತ ವಿಧಾನದ ಮೂಲಕ ಚೆನ್ನಾಗಿ ಅರ್ಥವಾಗುತ್ತದೆ, ವೈಯಕ್ತಿಕ ಹವ್ಯಾಸಗಳನ್ನು ಮುಂದುವರಿಸಲು ಹೆಚ್ಚು ಸಮಯ ಸಿಗುತ್ತದೆ ಮತ್ತು ದೀರ್ಘಾವಧಿ ನೆನಪಿನಲ್ಲಿ ಇಟ್ಟುಕೊಳ್ಳಲು ಸಹಾಯ ಮಾಡುತ್ತದೆ- ಇವು ವಿದ್ಯಾರ್ಥಿಗಳು ಹೈಬ್ರಿಡ್ ಕಲಿಕೆಗೆ ಆದ್ಯತೆ ನೀಡುವ ಪ್ರಮುಖ ಕಾರಣಗಳಾಗಿ ಹೊರಹೊಮ್ಮಿವೆ.

ಹೈಬ್ರಿಡ್ ಕಲಿಕೆಯು ಹವಾಮಾನ ವೈಪರೀತ್ಯ ಅಥವಾ ಇತರ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಂದಾಗಿ ಜನರ ಸಂಚಾರವನ್ನು ನಿಯಂತ್ರಿಸುವುದರಿಂದ ಕಲಿಕೆಗೆ ಅಡಚಣೆಯಾಗುವುದನ್ನು ಕಡಿಮೆ ಮಾಡುತ್ತದೆ.
ಅಪಾಯಕಾರಿ ಮಾಲಿನ್ಯದ ಮಟ್ಟಗಳು, ಶಾಖದ ಅಲೆಗಳು, ಪ್ರವಾಹಗಳು ಮತ್ತು ಇತರ ಅನೇಕ ನೈಸರ್ಗಿಕ ವಿಕೋಪಗಳಿಂದ ಆಗಾಗ ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ಆದರೆ, ಹೈಬ್ರಿಡ್ ಕಲಿಕೆಯನ್ನು ಅಳವಡಿಸಿದ್ದರಿಂದ ಕಲಿಕೆಯು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಂತರವಾಗಿ ಮುಂದುವರಿಯುತ್ತದೆ ಎಂಬುದು ಗಮನಾರ್ಹ.

• ಪ್ರತಿಸ್ಪಂದಿಸಿರುವ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು, ಹೈಬ್ರಿಡ್ ಮಾದರಿಯು ಇಂತಹ ಹವಾಮಾನ ವೈಪರೀತ್ಯಗಳು ಮತ್ತು ಇತರ ಸಂದರ್ಭಗಳಲ್ಲಿ ನಿರಂತರ ಕಲಿಕೆಯನ್ನು ಖಚಿತಪಡಿಸುತ್ತದೆ ಎಂದು ಒಪ್ಪಿಕೊಳ್ಳುತ್ತಾರೆ.

“ಸವಾಲಿನ ಈ ಕಾಲದಲ್ಲಿ ತಂತ್ರಜ್ಞಾನವು ಸಂರಕ್ಷಕನಾಗಿ ಹೊರಹೊಮ್ಮಿದೆ. ಕಲಿಕೆಯ ಮೇಲೂ ಇದರ ಪ್ರಭಾವ ಗಾಢವಾಗಿದೆ. ಹೈಬ್ರಿಡ್ ಕಲಿಕೆಯ ಮಾದರಿಯು ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಸಾಂಪ್ರದಾಯಿಕ ತರಗತಿಯ ವ್ಯವಸ್ಥೆಯಲ್ಲಿ ಆನ್‌ಲೈನ್ ಸಂಪನ್ಮೂಲಗಳು ಮತ್ತು ಸಾಂಪ್ರದಾಯಿಕ ಕಲಿಕೆಯ ವೈಯಕ್ತಿಕ ಸಂವಹನಗಳ ಪ್ರಯೋಜನಗಳನ್ನು ಸಂಯೋಜಿಸುತ್ತದೆ. ಡಿಜಿಟಲ್ ಕಲಿಕೆಯತ್ತ ಒಲವು ವಿದ್ಯಾರ್ಥಿ-ಶಿಕ್ಷಕರ ಸಂವಾದವನ್ನು ಪುಷ್ಟೀಕರಿಸಿದೆ ಮತ್ತು ಪ್ರತಿಯೊಬ್ಬ ಭಾಗೀದಾರನ ಸುರಕ್ಷತೆ ಮತ್ತು ಸೌಕರ್ಯವನ್ನು ಖಾತ್ರಿಪಡಿಸುತ್ತದೆ. ಪರಿವರ್ತನೆಯ ಈ ಸಮಯದಲ್ಲಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಉತ್ತಮ ಕೆಲಸ-ಜೀವನ ಸಮತೋಲನ, ಹೆಚ್ಚಿದ ದಕ್ಷತೆ ಮತ್ತು ಹೆಚ್ಚು ಒಳನೋಟ-ಆಧಾರಿತ ಕಲಿಕೆಯನ್ನು ಸಾಧಿಸಿದ್ದಾರೆ. HP ಇಂಡಿಯಾ ಫ್ಯೂಚರ್ ಆಫ್ ಲರ್ನಿಂಗ್ ಸ್ಟಡಿ 2022 ಬೆಂಬಲದೊಂದಿಗೆ, ಹೆಚ್ಚು ದಕ್ಷ ಮತ್ತು ಪರಿಣಾಮಕಾರಿ ಕಲಿಕೆಯ ಮಾದರಿಯನ್ನು ರಚಿಸುವಲ್ಲಿ ಡಿಜಿಟಲ್ ಕಲಿಕೆಯು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ನಾನು ನಂಬುತ್ತೇನೆ” ಎಂದು HP ಇಂಡಿಯಾದ ಎಂಡಿ ಕೇತನ್ ಪಟೇಲ್ ಹೇಳಿದರು.

ನಮ್ಯತೆ ಮತ್ತು ಅನುಕೂಲಕ್ಕಾಗಿ ವಿದ್ಯಾರ್ಥಿಗಳು ಆನ್‌ಲೈನ್ ಕಲಿಕೆಯನ್ನು ಇಷ್ಟಪಡುತ್ತಾರೆ.
ಆನ್‌ಲೈನ್ ಕಲಿಕೆಯ ಆರಂಭಿಕ ಸವಾಲುಗಳ ಹೊರತಾಗಿಯೂ, ವಿದ್ಯಾರ್ಥಿಗಳು ಅದು ನೀಡುವ ಸ್ವಾಯತ್ತತೆ ಮತ್ತು ನಮ್ಯತೆಯಲ್ಲಿ ಅಪಾರ ಪ್ರಯೋಜನವನ್ನು ಕಂಡುಕೊಳ್ಳುತ್ತಾರೆ. ಅನುಕೂಲಕರವಾದ ವೇಗದಲ್ಲಿ ಅಧ್ಯಯನ ಮಾಡಲು ವಿದ್ಯಾರ್ಥಿಗಳು (61%), ಪೋಷಕರು (65%) ಮತ್ತು ಶಿಕ್ಷಕರಿಗೆ (81%) ಅವಕಾಶ ಮಾಡಿಕೊಡುವುದು ಆನ್‌ಲೈನ್ ಕಲಿಕೆಯು ಪ್ರಮುಖ ಅಂಶವಾಗಿದೆ.

ಮನರಂಜನೆಯಿಂದ ಕಲಿಕೆಯವರೆಗೆ, ಭಾರತವು ಬಹುತೇಕ ವೀಡಿಯೊ-ಫಸ್ಟ್ ದೇಶವಾಗಿ ಹೊರಹೊಮ್ಮಿದೆ. ವಿದ್ಯಾರ್ಥಿಗಳು (63%), ಶಿಕ್ಷಕರು (57%) ಮತ್ತು ಪೋಷಕರು (61%) ವೀಡಿಯೊ ರೂಪದಲ್ಲಿ ಅಧ್ಯಯನದ ವಸ್ತುವಿಗೆ ಹೆಚ್ಚು ಆದ್ಯತೆಯನ್ನು ನೀಡುತ್ತಿದ್ದಾರೆ.

• ವಿದ್ಯಾರ್ಥಿಗಳು ಹೈಬ್ರಿಡ್ ಕಲಿಕೆಗೆ ಆದ್ಯತೆ ನೀಡುತ್ತಾರೆ. ಏಕೆಂದರೆ ಅವರು ತಮ್ಮ ಕೆಲಸವನ್ನು ಪರಿಷ್ಕರಿಸಲು, ವಿಷಯವನ್ನು ಹೆಚ್ಚು ಸುಲಭವಾಗಿ ಮತ್ತು ಆಳವಾಗಿ ಗ್ರಹಿಸಲು ಸಹಾಯ ಮಾಡುತ್ತದೆ. ರೆಕಾರ್ಡಿಂಗ್‌ಗಳನ್ನು ವೀಕ್ಷಿಸುವ ಮೂಲಕ ಅವರು ತಪ್ಪಿದ ತರಗತಿಗಳನ್ನೂ ಮತ್ತೆ ಪಡೆಯಬಹುದು.
ವಿದ್ಯಾರ್ಥಿಗಳು, ಶಿಕ್ಷಕರ ಮೇಲೆ ಡಿಜಿಟಲ್ ಕಲಿಕೆಯ ಪ್ರಭಾವ

ಆನ್‌ಲೈನ್ ಕಲಿಕೆಯ ಪ್ರಮುಖ ಪ್ರಯೋಜನಗಳಲ್ಲಿ ಕೆಲಸ-ಜೀವನದ ಸಮತೋಲನವೂ ಒಂದು ಎಂದು ಶಿಕ್ಷಕರು ಸೂಚಿಸಿದರೆ, ಸಮೀಕ್ಷೆಯಲ್ಲಿ ಭಾಗವಹಿಸಿದ 82% ಶಿಕ್ಷಕರು ಉತ್ತಮ ಆನ್‌ಲೈನ್ ಕಲಿಕೆಗೆ ಅನುಕೂಲವಾಗುವಂತೆ ಹೆಚ್ಚಿನ ಪರಿಕರಗಳ ಅಗತ್ಯವಿದೆ ಎಂದು ಹೇಳಿದರು ಆದರೆ 74% ರಷ್ಟು ಜನರು ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಬಳಸಲು ಮತ್ತು ಅವರ ಶಿಕ್ಷಣ ಕೌಶಲ್ಯಗಳನ್ನು ಹೆಚ್ಚಿಸಲು ಹೆಚ್ಚಿನ ತರಬೇತಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ..
ಸೀಮಿತ ಸಾಮಾಜಿಕ ಸಂವಹನವು ಕೋವಿಡ್-19ರ ಪ್ರಮುಖ ಪರಿಣಾಮಗಳಲ್ಲಿ ಒಂದಾಗಿದೆ. ವಿದ್ಯಾರ್ಥಿಗಳು ತಮ್ಮ ಗೆಳೆಯರೊಂದಿಗೆ ಸಂವಹನ ನಡೆಸಲು ಮತ್ತು ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ಭಾಗವಹಿಸಲು ಶಾಲೆಗೆ ಮರಳುವುದಕ್ಕೆ ಉತ್ಸುಕರಾಗಿದ್ದಾರೆ.

• ತರಗತಿಯ ಕಲಿಕೆಯ ಸಮಯದಲ್ಲಿ ಅವರು ಹೆಚ್ಚು ಸ್ನೇಹಿತರನ್ನು ಮಾಡಿಕೊಳ್ಳಬಹುದು, ಶಿಕ್ಷಕರ ಸಮ್ಮುಖದಲ್ಲಿ ಉತ್ತಮವಾಗಿ ಕಲಿಯಬಹುದು ಎಂದು ವಿದ್ಯಾರ್ಥಿಗಳು ಪ್ರತಿಕ್ರಿಯಿಸುತ್ತಾರೆ. ಇತರ ಸಹಪಾಠಿಗಳೊಂದಿಗೆ ಅವರ ಸಂವಹನ ಮತ್ತು ಕ್ರೀಡೆಗಳಲ್ಲಿ ಪಾಲ್ಗೊಳ್ಳುವಿಕೆಯು ಕೋವಿಡ್-19ನಿಂದಾಗಿ ತುಂಬಾ ಸೀಮಿತವಾಗಿದೆ ಎಂದು ಅವರು ಭಾವಿಸುತ್ತಾರೆ.

ಹೈಬ್ರಿಡ್ ಕಲಿಕೆಗೆ ಪಿಸಿ ಒಂದು ಆದರ್ಶ ಆಯ್ಕೆಯಾಗಿ ಹೊರಹೊಮ್ಮುತ್ತದೆ.
ಪ್ರತಿಕ್ರಿಯಿಸಿದವರಲ್ಲಿ, 88% ಶಿಕ್ಷಕರು, 72% ವಿದ್ಯಾರ್ಥಿಗಳು ಮತ್ತು 89% ಪೋಷಕರು ವಿದ್ಯಾರ್ಥಿಗಳ ನಡುವೆ ಡಿಜಿಟಲ್ ಕಲಿಕೆಗೆ ಪಿಸಿಗಳು ಸೂಕ್ತವೆಂದು ನಂಬುತ್ತಾರೆ. ವಾಸ್ತವವಾಗಿ, ಆನ್‌ಲೈನ್ ಕಲಿಕೆಗಾಗಿ ಪಿಸಿಗಳಿಗೆ ಮೊರೆ ಹೋಗಬೇಕೆಂದು 79% ಶಿಕ್ಷಕರು ಶಿಫಾರಸು ಮಾಡುತ್ತಾರೆ.

• ಕಣ್ಣಿನ ಮೇಲೆ ಒತ್ತಡ ನಿವಾರಣೆ, ಫೈಲ್‌ಗಳ ತ್ವರಿತ ವರ್ಗಾವಣೆ ಮತ್ತು ಉತ್ತಮ ಕಾರ್ಯನಿರ್ವಹಣೆ ಪಿಸಿಗಳು ಆದರ್ಶ ಆಯ್ಕೆಯಾಗಿ ಹೊರಹೊಮ್ಮಲು ಪ್ರಮುಖ ಕಾರಣಗಳಾಗಿವೆ.

ಪ್ರಿಂಟರ್ ವಿದ್ಯಾರ್ಥಿಗಳಿಗೆ ಕಲಿಕೆ ಮತ್ತು ಸೃಜನಶೀಲತೆಯನ್ನು ಬೆಂಬಲಿಸುತ್ತದೆ
ಪ್ರತಿಕ್ರಿಯಿಸಿದವರಲ್ಲಿ, 75% ಶಿಕ್ಷಕರು ಕಡತಗಳಿಗೆ ಮತ್ತು ಮನೆಗೆಲಸದ ಸಲ್ಲಿಕೆಗಾಗಿ ಪ್ರಿಂಟರ್‌ಗಳನ್ನು ಬಳಸುವುದಕ್ಕೆ ಆದ್ಯತೆ ನೀಡಿದ್ದಾರೆ. ಕಲಿಕೆಯನ್ನು ಅನುಭವದ ಕಲಿಕೆಯಾಗಿ ಮಾರ್ಪಡಿಸುವುದು, ಸಮಗ್ರ ಅನುಭವವನ್ನು ಹೊಂದಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುವುದಕ್ಕಾಗಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶಿಕ್ಷಣಕ್ಕೆ ಸಹಾಯ ಮಾಡುವ ಪ್ರಮುಖ ಸಾಧನವಾಗಿ ಪ್ರಿಂಟರ್‌ಗಳನ್ನು ಬಳಸುತ್ತಿದ್ದಾರೆ. ಪ್ರಿಂಟರ್‌ಗಳಿದ್ದರೆ ಕಲಿಕೆಯ ಫಲಿತಾಂಶವನ್ನು ಸುಧಾರಿಸಬಹುದೆಂದು 82% ವಿದ್ಯಾರ್ಥಿಗಳು ನಂಬುತ್ತಾರೆ. ಇದಲ್ಲದೆ, ಸುಲಭವಾಗಿ ವೀಕ್ಷಿಸಬಹುದಾದ ನೋಟ್ಸ್ ಮತ್ತು ಪ್ರ್ಯಾಕ್ಟೀಸ್ ಶೀಟ್‌ಗಳ ಅನುಕೂಲವು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಲ್ಲಿ ಸ್ಪಷ್ಟವಾದ ನಿಲುವಿಗೆ ಕಾರಣವಾಗಿದೆ.

ವಿಧಾನಶಾಸ್ತ್ರ
207 ಶಿಕ್ಷಕರು (ವಯಸ್ಸು: 28 – 50 ವರ್ಷಗಳು), 679 ಪೋಷಕರು (ವಯಸ್ಸು: 30 – 60 ವರ್ಷಗಳು) ಮತ್ತು 711 ವಿದ್ಯಾರ್ಥಿಗಳು (ವಯಸ್ಸು: 14 – 22 ವರ್ಷಗಳು) ಒಳಗೊಂಡಿರುವ 1,500ಕ್ಕೂ ಹೆಚ್ಚು ಪ್ರತಿಸ್ಪಂದಕರು ಈ ಸಮೀಕ್ಷೆಗೆ ಒಳಪಟ್ಟಿದ್ದಾರೆ. ದೆಹಲಿ/ಎನ್‌ಸಿಆರ್, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದರಾಬಾದ್, ಬೆಂಗಳೂರು, ಲಕ್ನೋ, ಚಂಡೀಗಢ, ಪಾಟ್ನಾ, ಗುವಾಹಟಿ, ಇಂದೋರ್, ರಾಂಚಿ ಮತ್ತು ಕೊಚ್ಚಿಯಂತಹ 13 ನಗರಗಳಲ್ಲಿ ಸಂದರ್ಶನಗಳನ್ನು ನಡೆಸಲಾಯಿತು.

Tags: #saakshatveducationhp feature off learningOnline
ShareTweetSendShare
Join us on:

Related Posts

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

ಹೈಕಮಾಂಡ್ ನಾಯಕನಿಗೆ ಸಿಎಂ ಪಟ್ಟದ ಆಫರ್: ರಾಯರೆಡ್ಡಿ ಮಾಸ್ಟರ್ ಪ್ಲಾನ್ ಹಿಂದೆ ಅಡಗಿದೆ ದೊಡ್ಡ ರಹಸ್ಯ

by Shwetha
May 4, 2026
0

ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ದಿನಕ್ಕೊಂದು ಹೊಸ ತಿರುವು ಪಡೆಯುತ್ತಿವೆ. ಸದ್ಯ ಹಿರಿಯ ಶಾಸಕ ಹಾಗೂ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಬಸವರಾಜ್ ರಾಯರೆಡ್ಡಿ ನೀಡಿರುವ ಹೇಳಿಕೆ...

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

ಭಾರತದ ಮೂಲ ಗುರುತು ಉಳಿಸಿದ್ದು ಆದಿವಾಸಿ ಮತ್ತು ದಲಿತ ಸಮುದಾಯಗಳು: ಮೋಹನ್ ಭಾಗವತ್

by Shwetha
May 4, 2026
0

ಮುಂಬೈ: ಭಾರತದ ಮೇಲೆ ನಡೆದ ಸರಣಿ ವಿದೇಶಿ ಆಕ್ರಮಣಗಳು ಮತ್ತು ನೂರಾರು ವರ್ಷಗಳ ಸಂಕಷ್ಟದ ಕಾಲದಲ್ಲೂ ದೇಶದ ಮೂಲ ಗುರುತು ಹಾಗೂ ಸಾಂಸ್ಕೃತಿಕ ಆತ್ಮವನ್ನು ಸಂರಕ್ಷಿಸಿರುವುದು ಆದಿವಾಸಿ...

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

ಬ್ರಿಜ್ ಭೂಷಣ್ ನಿಂದ ಲೈಂಗಿಕ ಕಿರುಕುಳಕ್ಕೊಳಗಾದ ಆರು ಸಂತ್ರಸ್ತರಲ್ಲಿ ನಾನೂ ಒಬ್ಬಳು! : ವಿನೇಶ್ ಫೋಗಟ್

by Shwetha
May 4, 2026
0

ಕುಸ್ತಿ ಲೋಕದಲ್ಲಿ ಮತ್ತು ದೇಶದ ಕ್ರೀಡಾ ವಲಯದಲ್ಲಿ ಬೆಚ್ಚಿಬೀಳಿಸುವಂತಹ ಬೆಳವಣಿಗೆಯೊಂದು ನಡೆದಿದೆ. ಖ್ಯಾತ ಒಲಿಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರು ತಮಗೆ ಎದುರಾದ ಕಹಿ ಘಟನೆಯನ್ನು ಸಾರ್ವಜನಿಕವಾಗಿ...

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

ಮೊಬೈಲ್ ನಲ್ಲೇ ಸಿಗಲಿದೆ ಆಸ್ತಿ ಪತ್ರ: ಕಂದಾಯ ಸಚಿವರಿಂದ ಭೂ ಸುರಕ್ಷಾ ಯೋಜನೆ ಜಾರಿ

by Shwetha
May 4, 2026
0

ಬೆಂಗಳೂರು: ರಾಜ್ಯದ ಜನತೆಗೆ ಕಂದಾಯ ಇಲಾಖೆಯು ಬಹುದೊಡ್ಡ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಸ್ತಿ ದಾಖಲೆಗಳಿಗಾಗಿ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವ ಸಂಕಷ್ಟ ತಪ್ಪಲಿದ್ದು, ನೇರವಾಗಿ...

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

ಜೈಲಿನಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರಾ ನಟ ದರ್ಶನ್? ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿ ಬಾಸ್ ಕಷ್ಟದ ಸರಮಾಲೆ

by Shwetha
May 4, 2026
0

ನಟ ದರ್ಶನ್ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ತಿಂಗಳುಗಳೇ ಕಳೆದಿವೆ. ಇದೀಗ ಜಾಮೀನು ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ದರ್ಶನ್, ಅಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram