EggLess Bananna Pancacke Recipie : ಆರೋಗ್ಯಕರ ಬಾಳೆಹಣ್ಣು ಪ್ಯಾನ್ ಕೇಕ್ ..!!
ಮೊದಲನೆಯದಾಗಿ, 3 ಮಧ್ಯಮ ಗಾತ್ರದ ಪಚ್ಚು ಬಾಳೆಹಣ್ಣುಗಳನ್ನು ತೆಗೆದು ಸಿಪ್ಪೆ ಸುಳಿದಿಟ್ಟುಕೊಳ್ಳಿ.
ದೊಡ್ಡ ಬೌಲ್ ನಲ್ಲಿ ಬಾಳೆಹಣ್ಣು ತೆಗೆದುಕೊಂಡು ಸ್ಮಾಷರ್ ಸಹಾಯದಿಂದ ವುಗಳನ್ನ ಚನ್ನಾಗಿ ಮ್ಯಾಷ್ ಮಾಡಿಕೊಳ್ಳಿ..
ಬಾಳೆಹಣ್ಣುಗಳು ತುಂಬಾ ಪಕ್ವವಾಗಿದ್ದರೆ ನೀವು ಅವುಗಳನ್ನು ಬಟ್ಟಲಿನಲ್ಲಿ ಮ್ಯಾಶ್ ಮಾಡಲು ಆಲೂಗಡ್ಡೆ ಮಾಷರ್ ಅನ್ನು ಬಳಸಬಹುದು.
ಗಟ್ಟಿಯಾದ ಬಾಳೆಹಣ್ಣನ್ನು ಬಳಸುತ್ತಿದ್ದರೆ ನೀವು ಮ್ಯಾಶ್ ಮಾಡುವ ಮೊದಲು ಅವುಗಳನ್ನು ಚಾಕುವಿನಿಂದ ಕತ್ತರಿಸಿ ,ಸ್ಮಾಷ್ ಮಾಡಿ ಇಲ್ಲ ಮಿಕ್ಸರ್ ನಲ್ಲಿ ಒಂದು ರೌಂಡ್ ರುಬ್ಬಿಕೊಳ್ಳಿ.
ಇದಕ್ಕೆ ಬೇಕಿದ್ದಲ್ಲಿ ( ಆಪ್ಷನಲ್ ) ವೆನಿಲಾ ಎಸೆನ್ಸ್ ಸೇರಿಸಿಕೊಳ್ಬಹುದು..
ತುಂಬಾ ಚೆನ್ನಾಗಿ ಮಿಶ್ರಣ ಮಾಡಿ.
ಅದಕ್ಕೆ ನಂತರ 1 ಕಪ್ ಗೋಧಿ ಹಿಟ್ಟು ಹಾಕಿ ಇಕ್ಕೆ ಬೇಕಿದ್ದರೆ , ಲವಂಗ , ಏಲಕ್ಕಿ ಪುಡಿಯನ್ನ ಸೇರಿಸಿಕೊಳ್ಬಹುದು.. ಚನ್ನಾಗಿ ಮಿಶ್ರಣ ಮಾಡಿ..
ಹಿಟ್ಟಿಗೆ ನೀರನ್ನು ಸ್ವಲ್ಪಮಟ್ಟಿಗೆ ಸೇರಿಸಿ ಗಂಟುಗಳಾಗದಂತೆ ಕಲಸಿ..
ನಯವಾದ ಬ್ಯಾಟರ್ ಅನ್ನು ತಯಾರಿಸಿಕೊಳ್ಳಿ.. ಬ್ಯಾಟರ್ ತೀರ ತೆಳ್ಳಗೆ ಅಥವ ಗಟ್ಟಿಯಾಗೂ ಇರಬಾರದು.. ದೋಸೆ ಬ್ಯಾಟರ ಗಿಂತ ಕೊಂಚ ದಪ್ಪವಾಗಿರಬೇಕು..
ನಾನ್ ಸ್ಟಿಕ್ ಪ್ಯಾನ್ ಅನ್ನು ಕಡಿಮೆ ಶಾಖದಲ್ಲಿ ಬಿಸಿ ಮಾಡಿ.. ಸ್ವಲ್ಪ ಎಣ್ಣೆ ಅಥವ ಬೆಣ್ಣೆ ಅಥವಾ ತುಪ್ಪವನ್ನು ಸವರಿಕೊಳ್ಳಿ.. ಈಗ ಒಂದು ಸೌಟ್ ಬ್ಯಾಟರ್ ಅನ್ನು ಪ್ಯಾನ್ ಮೇಲೆ ಹಾಕಿ ಸಮಾನವಾಗಿ ಹರಡಿ.,. ಮಧ್ಯಮ ಉರಿಯಲ್ಲಿ ಬೇಯಿಸಿ , ತಿರುಗಿಸಿ ಎರೆಡೂ ಬದಿಯಿಂದ ಬೇಯಿಸಿ.. ಪ್ಯಾನ್‌ಕೇಕ್ ಬೇಯಿಸುವಾಗ, ಸ್ವಲ್ಪ ಎಣ್ಣೆಯನ್ನು ಬದಿಗಳಲ್ಲಿ ಮತ್ತು ಮೇಲ್ಭಾಗದಲ್ಲಿ ಚಿಮುಕಿಸಿ.
ಇದು ಸುಂದರವಾದ ಚಿನ್ನದ ಬಣ್ಣವನ್ನು ರಚಿಸಲು ಸಹಾಯ ಮಾಡುತ್ತದೆ ಮತ್ತು ಪ್ಯಾನ್ ಕೇಕ್ ಇನ್ನಷ್ಟು ಗರಿಗರಿಯಾಗುವುದು..
ನಂತರ ಪ್ರತಿ ಬೇಯಿಸಿದ ಬಾಳೆಹಣ್ಣಿನ ಪ್ಯಾನ್‌ಕೇಕ್ ಅನ್ನು ಹಾಟ್ ಬಾಕ್ಸ್ ಅಥವ ಬೇಕಿಂಗ್ ಶೀಟ್ ಮೇಲೆ ಇರಿಸಿ,.. ಪ್ಯಾನ್ ಕೇಕ್ ಮೇಲೆ ಜೇಬನು ತುಪ್ಪ ಅಥವ ಬೆಣ್ಣೆ ಅಥವ ಚಾಕೋ ಪೌಡರ್ ಇತರೇ ನಿಮ್ಮಿಷ್ಟದ ಪದಾರ್ಥಗಳ ಜೊತೆಗೆ ಸೇವಿಸಬಹುದು,..