ವಾಟ್ಸಾಪ್ ನಲ್ಲಿ ಇಷ್ಟುದಿನ ಕೇವಲ 4 ಮಂದಿಗೆ ಮಾತ್ರ ಗ್ರೂಪ್ ಕಾಲ್ ಮಾಡಲು ಸಾಧ್ಯವಾಗುತ್ತಿತ್ತು. ಆದ್ರೆ ಇನ್ಮುಂದೆ ವಾಟ್ಸಾಪ್ ನಲ್ಲಿ ಎಂಟು ಜನರಿಗೆ ಗ್ರೂಪ್ ಕಾಲ್ ಮಾಡಬಹುದಾಗಿದೆ. ಲಾಕ್ ಡೌನ್ ಆಗಿರುವ ಕಾರಣ ಬಹುತೇಕ ಕಂಪನಿಗಳು ಗ್ರೂಪ್ ಚಾಟ್ , ವಿಡಿಯೋ ಕಾನ್ಫೆರೆನ್ಸ್ ಗೆ ಮೇಲೆ ಹೆಚ್ಚು ಅವಲಂಬಿಸಿವೆ. ಆದರೆ, ಜನರು ಹೆಚ್ಚಾಗಿ ಬಳಸೋ ವಾಟ್ಸಾಪ್ ನಲ್ಲಿ ಮಾತ್ರ ವಾಯ್ಸ್ ಮತ್ತು ವಿಡಿಯೋ ಕಾಲನ್ನು ನಾಲ್ಕು ಮಂದಿಗೆ ಸೀಮಿತಗೊಳಿಸಿತ್ತು. ಹೀಗಾಗಿ, ಬೇರೆ ದಾರಿಯಿಲ್ಲದೇ ಇತರೆ ಅಪ್ಲಿಕೇಷನ್ ಗೆ ಮೊರೆಹೋಗಲಾಗಿತ್ತು. ಗ್ರಾಹಕರಿಗೆ ಸಹಕಾರವಾಗಲಿ ಎಂಬ ಕಾರಣಕ್ಕೆ ಇದೀಗ ವಾಟ್ಸಾಪ್ ಸಂಸ್ಥೆಯು ತನ್ನ ಆಪ್‌ನ ಗ್ರೂಪ್ ಕಾಲ್ ಲಿಮಿಟ್ ಅನ್ನು ಹೆಚ್ಚಿಸಿದೆ.
ಆಂಡ್ರಾಯ್ಡ್ ಮತ್ತು ಐಒಎಸ್ ನಲ್ಲಿನ ವಾಟ್ಸಾಪ್ ಲೇಟೆಸ್ಟ್ ಬೇಟಾ ಅಪ್ ಡೇಟ್ ನಲ್ಲಿ ಈ ಹೊಸ ಫೀಚರ್ ದೊರೆಯಲಿದೆ. ಐಫೋನ್ ಬಳಕೆದಾರರು ಟೆಸ್ಟ್ ಫ್ಲೈಟ್ ಆಪ್ ಡೌನ್ ಲೋಡ್ ಮಾಡಿಕೊಳ್ಳುವ ಮೂಲಕ ವಾಟ್ಸಾಪ್ ಬೇಟಾ ಪ್ರೋಗ್ರಾಂಗೆ ಸೇರಬಹುದು. ನೀವು ಗ್ರೂಪ್ ಕರೆ ಮಾಡಬೇಕಾದವರು ಸಹ ಲೇಟೆಸ್ಟ್ ಫೀಚರ್ ಅಪ್ ಡೇಟ್ ಮಾಡಿರಲೇಬೇಕು, ಆಗಮಾತ್ರ ಗ್ರೂಪ್ ಕಾಲ್ ಗೆ ಅವರು ಲಭ್ಯವಾಗುತ್ತಾರೆ.








