IPL 2022 | ಲಕ್ನೋ ವಿರುದ್ಧ ಆರ್ ಸಿಬಿ ಗೆಲುವು ಪಕ್ಕಾ..
ಐಪಿಎಲ್ 2022ರಲ್ಲಿ ಮತ್ತೊಂದು ಕುತೂಹಲಕಾರಿ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ಎಲಿಮಿನೇಟರ್ ಪಂದ್ಯವನ್ನು ನಡೆಯಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್ ನಲ್ಲಿ ಇಂದಿನ ಪಂದ್ಯ ಜರುಗಲಿದೆ.
ಈ ಪಂದ್ಯದಲ್ಲಿ ಗೆಲ್ಲುವ ತಂಡ, ಕ್ವಾಲಿಫೈಯರ್-1ರಲ್ಲಿ ಸೋತಿರುವ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ. ಕ್ವಾಲಿಫೈಯರ್-2ರಲ್ಲಿ ಗೆದ್ದರೆ ಗುಜರಾತ್ ಟೈಟಾನ್ಸ್ ಜೊತೆಗೆ ಫೈನಲ್ ಪ್ರವೇಶಿಸಿ ಪ್ರಶಸ್ತಿ ರೇಸ್ ಗೆ ಲಗ್ಗೆ ಇಡಲಿದೆ. ಈ ಹಿನ್ನಲೆಯಲ್ಲಿ ಸತತ ಮೂರು ಬಾರಿ ಪ್ಲೇ ಆಫ್ ಹಂತ ತಲುಪಿರುವ ಆರ್ ಸಿಬಿ ತಂಡ, ಲಕ್ನೋ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿದೆ.
ಈ ಹಿನ್ನಲೆಯಲ್ಲಿ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಎಲಿಮಿನೇಟರ್ ಪಂದ್ಯದ ವಿಜೇತರ ಬಗ್ಗೆ ಭವಿಷ್ಯ ನುಡಿದಿದ್ದಾರೆ. ಲಕ್ನೋ ವಿರುದ್ಧ ಆರ್‌ಸಿಬಿ ಗೆಲುವು ಸಾಧಿಸಲಿದೆ ಎಂದಿದ್ದಾರೆ. ”ಬೆಂಗಳೂರು ತಂಡಕ್ಕೆ ಗೆಲ್ಲುವ ಅವಕಾಶಗಳು ಹೆಚ್ಚಿವೆ. ಆ ತಂಡದಲ್ಲಿ ಸ್ಟಾರ್ ಆಟಗಾರರಿದ್ದಾರೆ. ಫಾಫ್ ಡುಪ್ಲೆಸಿಸ್ ಐಪಿಎಲ್ ದಾಖಲೆ ಒಂದು ಸರಿ ನೋಡಿ. ಅವರು ಪ್ಲೇಆಫ್ ಗಳಲ್ಲಿ ರೊಚ್ಚಿಗೆದ್ದು ಆಡುತ್ತಾರೆ. ವಿರಾಟ್ ಕೊಹ್ಲಿ ಕೂಡ ಗೇರ್ ಬದಲಾಯಿಸಿದ್ದಾರೆ. ಅನುಭವಿ ಆರ್‌ಸಿಬಿ ತಂಡ ಇಂತಹ ನಿರ್ಣಾಯಕ ಪಂದ್ಯಗಳಲ್ಲಿ ಒತ್ತಡವನ್ನು ಮೆಟ್ಟಿನಿಂತು ಉತ್ತಮವಾಗಿ ಆಡಬಹುದು ಎಂದು ಎಂದಿದ್ದಾರೆ.
ಕಳೆದ ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದ ಫಾಫ್, ಫೈನಲ್‌ನಲ್ಲಿ ಕೆಕೆಆರ್ ವಿರುದ್ಧ 59 ಎಸೆತಗಳಲ್ಲಿ 86 ರನ್ ಗಳಿಸಿದ್ದರು. eliminator-lsg-vs-rcb-sanjay-manjrekar-predicted-winner-explain