ಪಾಕಿಸ್ತಾನದ GDPಯನ್ನ ಮೀರಿಸಿದೆ ಎಲಾನ್ ಮಸ್ಕ್ ಸಂಪತ್ತು…!

1 min read

ಪಾಕಿಸ್ತಾನದ GDPಯನ್ನ ಮೀರಿಸಿದೆ ಎಲಾನ್ ಮಸ್ಕ್ ಸಂಪತ್ತು…!

ವಿಶ್ವದ ಕುಬೇರ …. ಜಗತ್ತಿನ ಅತ್ಯಂತ ಶ್ರೀಮಂತ ಉದ್ಯಮಿ… ಟೆಸ್ಲಾ ಕಂಪನಿಯ ಮಾಲೀಕನ ಸಂಪತ್ತು ಮತ್ತಷ್ಟು ಏರಿಕೆಯಾಗಿದೆ. ಈಗ ಎಲಾನ್ ಮಸ್ಕ್ ಬಳಿಯ ಪಟ್ಟು ಸಂಪತ್ತಿನ ಮೌಲ್ಯವು  ಪಾಕಿಸ್ತಾನದ ಒಟ್ಟಾರೆ GDPಯನ್ನೇ ಮೀರಿಸಿದೆ. ಹೌದು.. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಟೆಸ್ಲಾ ಮತ್ತು ಸ್ಪೇಸ್ ಎಕ್ಸ್ ಕಂಪನಿಯ ಸ್ಥಾಪಕ ಎಲೋನ್ ಮಸ್ಕ್ ಆಸ್ತಿ ಈಗ ಪಾಕಿಸ್ತಾನದ ಜಿಡಿಪಿ ಮೌಲ್ಯಕ್ಕಿಂತ ಅಧಿಕವಾಗಿದೆ. ಮಸ್ಕ್ ಆಸ್ತಿ ಮೌಲ್ಯ 300 ಶತಕೋಟಿ ಡಾಲರ್  ಅಂದ್ರೆ ಸುಮಾರು 22.50 ಲಕ್ಷ ಕೋಟಿ ರೂ.ತಲುಪಿದೆ.   ಪಾಕಿಸ್ತಾನದ GDP ಮೌಲ್ಯ 280 ಶತಕೋಟಿ ರೂ ಡಾಲರ್ ಇದೆ.  ಈಗ ಎಲಾನ್ ಮಸ್ಕ್ ಸಂಪತ್ತು  ಇದನ್ನ ಮೀರಿದೆ.

22 ಕೋಟಿ ಜನಸಂಖ್ಯೆ ಹೊಂದಿರುವ ಪಾಕಿಸ್ತಾನದ ಒಂದು ವರ್ಷದ ಒಟ್ಟು ಉತ್ಪಾದನೆಗಿಂತ ಮಸ್ಕ್ ಆಸ್ತಿಯೇ ಹೆಚ್ಚಾಗಿದ್ದು, ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಎಂಬ ಹಿರಿಮೆ ಹೊಂದಿರುವ ಮಸ್ಕ್ 300 ಶತಕೋಟಿ ಡಾಲರ್ ಆಸ್ತಿಯನ್ನು ಹೊಂದಿದ್ದಾರೆ.  ಬ್ಲೂಮ್‍ಬರ್ಗ್ ಬಿಲಿಯನೇರ್ ಇಂಡೆಕ್ಸ್‍ನಲ್ಲಿ ಮಸ್ಕ್ ಆಸ್ತಿ 311 ಶತಕೋಟಿ ಡಾಲರ್‍ ಗೆ ಏರಿದೆ. ಈ ಮೂಲಕ ಮಸ್ಕ್ 300 ಶತಕೋಟಿ ಡಾಲರ್ ಕ್ಲಬ್ ದಾಟಿದ ಮೊದಲ ವ್ಯಕ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. Tesla car

ಮಸ್ಕ್ ಅವರು ಟೆಸ್ಲಾ ಸಹಿತ ಹಲವು ಎಲೆಕ್ಟ್ರಿಕ್ ವಾಹನ ಉದ್ಯಮ ಸೇರಿದಂತೆ ಹಲವು ಕಂಪನಿಗಳ ಮಾಲೀಕರಾಗಿದ್ದಾರೆ. ಅವರ ಕಂಪನಿಯ ಷೇರು ಮೌಲ್ಯಗಳು ಭಾರೀ ಏರಿಕೆ ಕಂಡಿದ್ದರಿಂದ ಹಾಗೂ 1 ಲಕ್ಷದಷ್ಟು ಟೆಸ್ಲಾ ಎಲೆಕ್ಟ್ರಿಕ್ ವಾಹನಗಳು ಒಮ್ಮೆಲೆ ಮಾರಾಟವಾದ ಬೆನ್ನಲ್ಲೇ ಅವರ ಆಸ್ತಿ ಮೌಲ್ಯ 292 ಶತಕೋಟಿ ಡಾಲರ್‍ ಗೆ  ಏರಿಕೆ ಕಂಡಿದೆ.

ಬ್ಲೂಮ್‍ಬರ್ಗ್ ಇಂಡೆಕ್ಸ್ ನ ವರದಿಯ ಪ್ರಕಾರ ಶ್ರೀಮಂತರ ಪಟ್ಟಿಯಲ್ಲಿ ಮಸ್ಕ್ ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಜೆಫ್ ಬೆಜೋಸ್ 14.62 ಲಕ್ಷ ಕೋಟಿ ರೂ. ಬೆರ್ನಾರ್ಡ್ ಅರ್ನಾಲ್ಟ್ 12.52 ಲಕ್ಷ ಕೋಟಿ ರೂ. ಆಗಿದೆ. ಈ ಪಟ್ಟಿಯಲ್ಲಿ ಭಾರತದ ಉದ್ಯಮಿ ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ 71.2 ಲಕ್ಷ ಕೋಟಿ ರೂ. ನೊಂದಿಗೆ 11ನೇ ಸ್ಥಾನ ಪಡೆದರೆ, ಇನ್ನೋರ್ವ ಉದ್ಯಮಿ ಗೌತಮ್ ಅದಾನಿ 5.77 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ 13ನೇ ಸ್ಥಾನ ಪಡೆದಿದ್ದಾರೆ.

ಅಫ್ಗಾನಿಸ್ತಾನದ ಬಾಲಕಿ ಕಳಿಸಿದ್ದ ಕಾಬುಲ್ ನದಿ ನೀರನ್ನು ರಾಮ ಮಂದಿರಕ್ಕೆ ಅರ್ಪಿಸಿದ ಯೋಗಿ ಆದಿತ್ಯನಾಥ್

ಉತ್ತರಪ್ರದೇಶ ಚುನಾವಣೆ :  ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ  ಕಾಂಗ್ರೆಸ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd