ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಟೆಲಿಕಾಂ ತಂತ್ರಜ್ಞಾನದಲ್ಲಿ ತರಬೇತಿ ಪಡೆದ ಸುಮಾರು 1.26 ಲಕ್ಷ ಯುವಕರು ಉದ್ಯೋಗ ಪಡೆಯಲಿದ್ದಾರೆ ಎಂದು ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ನ ಉನ್ನತ ಅಧಿಕಾರಿಗಳು ಹೇಳಿದ್ದಾರೆ.
ಅಹಮದಾಬಾದ್ನ ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ (TSSC) ಕೌಶಲ್ಯ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿ ಫಿನ್ನಿಶ್ ಟೆಲಿಕಾಂ ಗೇರ್ ತಯಾರಕ ನೋಕಿಯಾ ಸಹಯೋಗದೊಂದಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಾಗಿ ಹೊಸ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ಸ್ಥಾಪಿಸುವುದಾಗಿ ಘೋಷಿಸಿದೆ ಎಂದು ಮನಿ ಕಂಟ್ರೋಲ್ ವರದಿ ತಿಳಿಸಿದೆ.
ಟೆಲಿಕಾಂ ಸೆಕ್ಟರ್ ಸ್ಕಿಲ್ ಕೌನ್ಸಿಲ್ (TSSC) ಪ್ರಸ್ತಕ ಆರ್ಥಿಕ ವರ್ಷದಲ್ಲಿ 1.26 ಲಕ್ಷ ಯುವಕರಿಗೆ ತರಬೇತಿ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸಲಿದೆ. ಹೀಗಾಗಿ ಅವರೆಲ್ಲರು ಉದ್ಯಮದಿಂದ ಉದ್ಯೋಗಿಯಾಗಲಿದ್ದಾರೆ ಎಂದು ಹೊಸ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದ ಬದಿಯಲ್ಲಿ ಟಿಎಸ್ಎಸ್ಸಿ ಯ ಮುಖ್ಯಸ್ಥ ಅರವಿಂದ್ ಬಾಲಿ ತಿಳಿಸಿದ್ದಾರೆ.