ENG v IND 2nd ODI : ಇಂಗ್ಲೆಂಡ್ ಗೆ 100 ರನ್‌ಗಳ ಜಯ ; ಸರಣಿ ಸಮಬಲ
ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಅತ್ಯಂತ ಹೀನಾಯವಾಗಿ ಸೋಲುಂಡಿದೆ.
ಮೊದಲ ಪಂದ್ಯದಲ್ಲಿ ಸೋತಿದ್ದ ಇಂಗ್ಲೆಂಡ್ ತಂಡ ಟೀಂ ಇಂಡಿಯಾ ಸೇಡು ತೀರಿಸಿಕೊಂಡಿದೆ.
ಇದರೊಂದಿಗೆ ಮೂರು ಪಂದ್ಯಗಳ ಸರಣಿ ಸಮಬಲವಾಗಿದ್ದು, ಮೂರನೇ ಏಕದಿನ ಪಂದ್ಯದ ಮೇಲೆ ನಿರೀಕ್ಷೆಗಳು ಹೆಚ್ಚಾಗಿವೆ.
ಲಾರ್ಡ್ಸ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆಲ್ರೌಂಡ್ ಪ್ರದರ್ಶನ ನೀಡಿತು.
ಟಾಸ್ ಸೋತು ಮೊದಲ ಬ್ಯಾಟಿಂಗ್ ಅವಕಾಶ ಪಡೆದ ಇಂಗ್ಲೆಂಡ್, 49 ಓವರ್‌ಗಳಲ್ಲಿ 246 ರನ್‌ಗಳಿಗೆ ಆಲೌಟ್ ಆಯಿತು.
ಆದರೆ ಈ ಟಾರ್ಗೆಟ್ ಬೆನ್ನತ್ತಿದ ಭಾರತ 38.5 ಓವರ್‌ಗಳಲ್ಲಿ 146 ರನ್‌ಗಳಿಗೆ ಸರ್ವಪತನಗೊಂಡಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಸಾಧಾರಣ ಆರಂಭ ಪಡೆಯಿತು.
ಜೇಸನ್ ರಾಯ್(23) ಹಾಗೂ ಜಾನಿ ಬೈರ್ಸ್ಟೋವ್(38) ಉಪಯುಕ್ತ ರನ್‌ಗಳಿಸಿದರು.

ನಂತರ ಬಂದ ರೂಟ್(11), ಸ್ಟೋಕ್ಸ್(21) ಹಾಗೂ ಬಟ್ಲರ್(4) ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.
ಪರಿಣಾಮ 102ಕ್ಕೆ 5 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಅಲ್ಪಮೊತ್ತಕ್ಕೆ ಕುಸಿಯುವ ಆತಂಕಕ್ಕೆ ಸಿಲುಕಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ಲಿವಿಂಗ್‌ಸ್ಟೋನ್(33), ಮೊಯಿನ್ ಅಲಿ(47) ಹಾಗೂ ಡೇವಿಡ್ ವಿಲ್ಲಿ(41) ಜವಾಬ್ದಾರಿಯುತ ಬ್ಯಾಟಿಂಗ್ ಮೂಲಕ ತಂಡಕ್ಕೆ ನೆರವಾದರು.
ಇದರ ಪರಿಣಾಮ ಇಂಗ್ಲೆಂಡ್ 246 ರನ್‌ಗಳ ಗೌರವಯುತ ಮೊತ್ತ ಕಲೆಹಾಕುವಲ್ಲಿ ಯಶಸ್ವಿಯಾಯಿತು.
ಭಾರತದ ಪರ ಸ್ಪಿನ್ನರ್ ಯಜುವೇಂದ್ರ ಚಹಲ್ ನಾಲ್ಕು ವಿಕೆಟ್ ಪಡೆದರೇ ಹಾರ್ದಿಕ್, ಬುಮ್ರಾ ತಲಾ 2 ವಿಕೆಟ್ ಪಡೆದರು. ಶಮಿ ಹಾಗೂ ಪ್ರಸಿದ್ಧ್ ತಲಾ 1 ವಿಕೆಟ್ ಪಡೆದರು.
ಪಂದ್ಯ ಗೆಲ್ಲಲು 247 ರನ್‌ಗಳ ಟಾರ್ಗೆಟ್ ಬೆನ್ನತ್ತಿದ ಭಾರತದ ಬ್ಯಾಟರ್ ಗಳು ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿದರು.
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮ (0) ಹಾಗೂ ಧವನ್(9) ಬಹುಬೇಗನೆ ವಿಕೆಟ್ ಒಪ್ಪಿಸಿದರೆ. ನಂತರ ಬಂದ ವಿರಾಟ್ ಕೊಹ್ಲಿ(16) ಹಾಗೂ ರಿಷಬ್ ಪಂತ್(0) ಬೇಜಾವಾಬ್ದಾರಿಯ ಆಟವಾಡಿದರು.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್(27), ಹಾರ್ದಿಕ್(29), ಜಡೇಜಾ(29) ಹಾಗೂ ಶಮಿ(23) ರನ್‌ಗಳಿಸಿದ್ದು ಬಿಟ್ಟರೆ, ಮತ್ಯಾರು ಕ್ರೀಸ್ ನಲ್ಲಿ ಹೆಚ್ಚು ಕಾಲ ನಿಲ್ಲಲೇ ಇಲ್ಲ. ಪರಿಣಾಮ 38.5 ಓವರ್ ಗಳಿಗೆ ಭಾರತ ಸರ್ವಪತನಗೊಂಡಿತು.