ಟಿ 20 ವಿಶ್ವಕಪ್ | ಇಂಗ್ಲೆಂಡ್ ಗೆ ಲಂಕಾ ಸವಾಲ್

1 min read
World Cup saaksha tv

ಟಿ 20 ವಿಶ್ವಕಪ್ | ಇಂಗ್ಲೆಂಡ್ ಗೆ ಲಂಕಾ ಸವಾಲ್

ಇಂಗ್ಲೆಂಡ್ ಟಿ20 ವಿಶ್ವಕಪ್ ಚಾಂಪಿಯನ್ ಆಗಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಮೇಲಿಂದ ಮೇಲೆ ಪಂದ್ಯಗಳನ್ನು ಗೆಲ್ಲುತ್ತಿದೆ. ಬ್ಯಾಟ್ಸ್ಮನ್ಗಳು ಅಬ್ಬರಿಸುತ್ತಿದ್ದಾರೆ. ಬೌಲರ್ಗಳು ಎದುರಾಳಿಗಳ ಎದೆ ನಡುಗಿಸುತ್ತಿದ್ದಾರೆ. ಫೀಲ್ಡಿಂಗ್ ಕ್ಲಾಸ್ ಆಗಿದೆ. ಗ್ರೂಪ್ನಲ್ಲಿ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದು 4ನೇ ಪಂದ್ಯಕ್ಕೆ ಸಿದ್ಧವಾಗುತ್ತಿದೆ. ಇನ್ನೊಂದು ಕಡೆ ಶ್ರೀಲಂಕಾ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ 2 ಪಂದ್ಯಗಳನ್ನು ಸೋತಿದೆ. ಬಾಂಗ್ಲಾ ವಿರುದ್ಧ ಗೆದ್ದಿದೆ. ಆದರೆ ಸೆಮಿಫೈನಲ್ ಆಸೆ ಲೆಕ್ಕಾಚಾರದ ಮೇಲೆ ನಿಂತಿದೆ. ಹೀಗಾಗಿ ಶಾರ್ಜಾದಲ್ಲಿ ಬಲಿಷ್ಠ ಇಂಗ್ಲೆಂಡ್ಗೆ ಲಂಕಾ ಲಯನ್ಸ್ ಹೇಗೆ ಚಾಲೆಂಜ್ ಹಾಕ್ತಾರೆ ಅನ್ನುವ ಬಗ್ಗೆ ಕುತೂಹಲವಿದೆ.

ಏಕದಿನ ವಿಶ್ವಕಪ್ ಗೆದ್ದಿರುವ ಇಂಗ್ಲೆಂಡ್ ಸ್ಪೋಟಕ ಬ್ಯಾಟ್ಸ್ಮನ್ಗಳನ್ನೇ ಹೊಂದಿದೆ. ಜೇಸನ್ ರಾಯ್, ಜೋಸ್ ಬಟ್ಲರ್ ಮತ್ತು ಜಾನಿ ಬೇರ್ಸ್ಟೋವ್ ಸಿಕ್ಕಾಪಟ್ಟೆ ಡೇಂಜರಸ್. ಡೇವಿಡ್ ಮಲಾನ್, ಲಿಯಂ ಲಿವಿಂಗ್ಸ್ಟೋನ್ ಇಯಾನ್ ಮೊರ್ಗಾನ್ ಮತ್ತು ಮೊಯಿನ್ ಅಲಿ ಬ್ಯಾಟಿಂಗ್ ಪ್ರದರ್ಶನ ನೀಡಲು ಕಾಯ್ತಿದ್ದಾರೆ.

ಬೌಲಿಂಗ್ ಬಗ್ಗೆ ಮಾತನಾಡಿದರೆ ಕ್ರಿಸ್ವೋಕ್ಸ್, ಕ್ರಿಸ್ ಜೊರ್ಡಾನ್ ಮತ್ತು ತೈಮಲ್ ಮಿಲ್ಸ್ ಟಿ20 ಅನುಭವ ಲೆಕ್ಕಕ್ಕೆ ಬರುತ್ತಿದೆ. ಆದಿಲ್ ರಶೀದ್ ಸ್ಪಿನ್ ಸ್ಪೆಷಲಿಸ್ಟ್. ಮೊಯಿನ್ ಅಲಿ ಮತ್ತು ಲಿವಿಂಗ್ ಸ್ಟೋನ್ ಕೂಡ ಬೌಲಿಂಗ್ನಲ್ಲಿ ಕೈಚಳಕ ಪ್ರದರ್ಶಿಸುತ್ತಿರುವುದು ಇಂಗ್ಲೆಂಡ್ಗೆ ಬೋನಸ್ ಆಗಿದೆ.

World Cup saaksha tv

ಶ್ರೀಲಂಕಾ ಅಸ್ಥಿರ ಪ್ರದರ್ಶನ ತಂಡಕ್ಕೆ ತಲೆನೋವಾಗಿದೆ. ಕುಸಾಲ್ ಪೆರಾರ, ನಿಸ್ಸಂಕಾ ಸೇರಿದಂತೆ ರಾಜಪಕ್ಸೆ, ಅಸಲಂಕ ಕೂಡ ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ಬೌಲಿಂಗ್ನಲ್ಲೂ ಹೇಳಿಕೊಳ್ಳುವಂತಹ ಪ್ರದರ್ಶನ ಬರುತ್ತಿಲ್ಲ. ಟಿ20ಯ ನಂಬರ್ 1 ಆಲ್ರೌಂಡರ್ ವನಿಂದು ಹಸರಂಗ ಕೂಡ ತಂಡದ ಕೈ ಹಿಡಿಯುತ್ತಿಲ್ಲ. ಒಟ್ಟಿನಲ್ಲಿ ಸಮಸ್ಯೆ ಶ್ರೀಲಂಕಾ ತಂಡವನ್ನು ಹೆಚ್ಚು ಅಸ್ಥಿರಗೊಳಿಸಿದೆ.

ಶಾರ್ಜಾ ಪಿಚ್ ವಿಭಿನ್ನವಾಗಿ ವರ್ತಿಸಿದೆ. ಕೆಲವೊಂದು ಪಂದ್ಯಗಳಲ್ಲಿ ರನ್ ಸರಾಗವಾಗಿ ಹರಿದು ಬಂದರೆ ಇನ್ನು ಕೆಲವು ಪಂದ್ಯಗಳಲ್ಲಿ ರನ್ಗಳಿಸುವುದೇ ಅಸಾಧ್ಯ ಅನ್ನುವ ಹಾಗಾಗಿದೆ. ಒಟ್ಟಿನಲ್ಲಿ ಇಂಗ್ಲೆಂಡ್ ಲಂಕಾ ವಿರುದ್ಧ ಪಂದ್ಯ ಗೆದ್ದು ಸೆಮಿಫೈನಲ್ ಸ್ಥಾನಗಟ್ಟಿ ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ ಶ್ರೀಲಂಕಾ ಟೂರ್ನಿಯಲ್ಲಿ ಉಳಿದುಕೊಳ್ಳಲು ಜಯ ಅನಿವಾರ್ಯವಾಗಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd