ಕ್ರಿಕೆಟ್ ನ ಎಲ್ಲಾ ಸ್ವರೂಪಗಳಿಂದ ನಿವೃತ್ತಿ ಘೋಷಿಸಿದ ಇಯಾನ್ ಮಾರ್ಗನ್….
ಇಂಗ್ಲೆಂಡ್ ಗಾಗಿ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಟ್ಟ ಕ್ರಿಕೆಟಿಗ ಮಾಜಿ ನಾಯಕ ಇಯಾನ್ ಮಾರ್ಗನ್ ಅಂತರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಈ ವಿಷಯವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ ಇಯಾನ್ ಈ ವರ್ಷದಿಂದ ಪ್ರಾಂಚೈಸಿ ಲೀಗ್ ಕ್ರಿಕೆಟ್ ಗೂ ವಿದಾಯ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ ಇಯಾನ್ ತನ್ನ ಕೊನೆಯ ಪಂದ್ಯವನ್ನ ಆಡಿದ್ದರು. ಪರ್ತ ರಾಯಲ್ಸ್ ಪರ ಬ್ಯಾಟ್ ಬೀಸುತ್ತಿದ್ದರು. 8 ಫೆಬ್ರವರಿ 2023 ರಂದು ಪ್ರಿಟೋರಿಯಾ ರಾಯಲ್ಸ್ ವಿರುದ್ಧದ ಕೊನೆಯ ಪಂದ್ಯದಲ್ಲಿ, ಮೋರ್ಗನ್ 13 ಎಸೆತಗಳಲ್ಲಿ 17 ರನ್ ಗಳಿಸಿದರು.
ODI ಮತ್ತು T20 ಗಳಲ್ಲಿ ಇಂಗ್ಲೆಂಡ್‌ನ ಅತ್ಯುತ್ತಮ ನಾಯಕ
ಸೀಮಿತ ಓವರ್‌ಗಳ ಕ್ರಿಕೆಟ್‌ನ ಇತಿಹಾಸದಲ್ಲಿ ಮಾರ್ಗನ್ ಇಂಗ್ಲೆಂಡ್‌ನ ಅತ್ಯುತ್ತಮ ನಾಯಕ ಎಂದು ಸಾಬೀತುಪಡಿಸಿದ್ದಾರೆ. ಅವರ ನಾಯಕತ್ವದಲ್ಲಿ ಇಂಗ್ಲಿಷ್ ತಂಡ 198 ODI ಪಂದ್ಯಗಳನ್ನ ಆಡಿ 118 ರಲ್ಲಿ ಗೆಲುವು ಸಾಧಿಸಿದೆ. ಟಿ 20 ಯಲ್ಲಿ 72 ಪಂದ್ಯಗಳಲ್ಲಿ ನಾಯಕರಾಗಿ 42 ಪಂದ್ಯಗಳನ್ನ ಗೆದ್ದು ಕೊಟ್ಟಿದ್ದಾರೆ.
ನಾನು ಕ್ರಿಕೆಟ್‌ಗೆ ಕೃತಜ್ಞನಾಗಿದ್ದೇನೆ. ಈ ಕ್ರೀಡೆಯು ಪ್ರಪಂಚದಾದ್ಯಂತ ಪ್ರಯಾಣಿಸಲು ಮತ್ತು ವಿವಿಧ ಜನರನ್ನು ಭೇಟಿ ಮಾಡಲು ನನಗೆ ಅವಕಾಶವನ್ನು ನೀಡಿದೆ. ನಾನು ಕೆಲವು ಅದ್ಭುತ ವ್ಯಕ್ತಿಗಳೊಂದಿಗೆ ಜೀವಮಾನದ ಸ್ನೇಹವನ್ನು ಬೆಳೆಸಿದೆ. ಪ್ರಪಂಚದಾದ್ಯಂತ ಫ್ರಾಂಚೈಸಿ ತಂಡಗಳಿಗೆ ಆಡಲು ಸಿಕ್ಕಿತು. ಈ ನೆನಪುಗಳನ್ನು ನನ್ನೊಂದಿಗೆ ಇಟ್ಟುಕೊಳ್ಳುತ್ತೇನೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ, ನಾನು ನನ್ನ ಹತ್ತಿರದ ಮತ್ತು ಆತ್ಮೀಯರೊಂದಿಗೆ ಸಮಯ ಕಳೆಯಲು ಸಾಧ್ಯವಾಗುತ್ತದೆ. ನಾನು ಕ್ರಿಕೆಟ್‌ಗೆ ಸಂಬಂಧಿಸಿದ ಸಾಹಸ ಮತ್ತು ಸವಾಲನ್ನು ಕಳೆದುಕೊಳ್ಳುತ್ತೇನೆ ಎಂದು ಬರೆದಿದ್ದಾರೆ.
Eoin Morgan: Eoin Morgan has announced his retirement from all forms of cricket.








