ಲೆಕ್ಕ ಕೇಳಲು ಸಿದ್ದರಾಮಯ್ಯ ಯಾವನು : ಈಶ್ವರಪ್ಪ ಏಕವಚನ ವಾಗ್ದಾಳಿ
ರಾಯಚೂರು : ರಾಮಮಂದಿರ ನಿರ್ಮಾಣ ಸ್ಥಳ ವಿವಾದಿತ ಎಂದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಏಕ ವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ರಾಯಚೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮಮಂದಿರದ ನಿರ್ಮಾಣದ ಸ್ಥಳ ವಿವಾದಿತ ಸ್ಥಳ ಅಲ್ಲಿ ಮಂದಿರ ನಿರ್ಮಾಣಕ್ಕೆ ತಾವು ಹಣ ನೀಡುವುದಿಲ್ಲ ಎಂದಿರುವ ಸಿದ್ದರಾಮಯ್ಯ ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಗೌರವವಿಲ್ಲದೆ ವಿವಾದಿತ ಸ್ಥಳ ಎಂದಿದ್ದಾರೆ. ಮಂದಿರ ನಿರ್ಮಾಣದ ಲೆಕ್ಕ ಕೇಳಲು ಸಿದ್ದರಾಮಯ್ಯ ಯಾವನು, ಅವನು ಮೋದಿ ಬಗ್ಗೆ ಏಕವಚನದಲ್ಲಿ ಮಾತನಾಡಬಹುದೇ, ಕೂಲಿ ಮಾಡುವ ಒಬ್ಬ 10 ರೂಪಾಯಿ ನೀಡಿದ್ದಾರೆ ಅವರು ಲೆಕ್ಕ ಕೇಳಲಿ ಇವನಾರು ಲೆಕ್ಕ ಕೇಳಲು ಎಂದು ಈಶ್ವರಪ್ಪ ಸಿದ್ದರಾಮಯ್ಯ ವಿರುದ್ದ ಕಿಡಿ ಕಾರಿದರು.
ಇದೇ ವೇಳೆ ಹೆಚ್ ಡಿ ಕೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಮಾರಸ್ವಾಮಿ ಹಣ ನೀಡದವರ ಮನೆ ಮನೆಗೆ ಮಾರ್ಕ ಮಾಡಿದ್ದಾರೆ ಎಂದು ಹೇಳಿದ್ದಾರೆ. ರಾಯಚೂರಿನಲ್ಲೇ ಯಾರ ಮನೆಗೆ ಮಾರ್ಕ ಮಾಡಲಾಗಿದೆ ತೋರಿಸಲಿ. ರಾಮನ ಬಗ್ಗೆ ಹಗುರವಾಗಿ ಮಾತನಾಡುವ ಪ್ರವೃತ್ತಿ ಬಿಡಬೇಕು ಎಂದು ವಾಗ್ದಾಳಿ ನಡೆಸಿದರು. ವಿಜಯೇಂದ್ರ ಸೂಪರ್ ಸಿಎಂ : ವಿಡಿಯೋ ಹಂಚಿಕೊಂಡ ಯತ್ನಾಳ್
ಬಸನಗೌಡ ಯತ್ನಾಳರ ಬಿಹಾರದಲ್ಲಿ ಬಿಜೆಪಿ ಸೋಲಿಸಲು ವಿಜಯೇಂದ್ರ ಹಣ ನೀಡಿದ್ದಾರೆ ಎಂಬ ಆರೋಪಕ್ಕೆ ನಾನು ಹೇಗೆ ಉತ್ತರಿಸಲಿ. ಇಲ್ಲಿ ಯತ್ನಾಳರೂ ಇಲ್ಲ, ಹಣ ಕೊಟ್ಟಿರುವ ಆರೋಪ ಹೊತ್ತಿರುವ ವಿಜಯೇಂದ್ರರು ಇಲ್ಲ. ಎಲ್ಲೆಯೋ ಬಿಹಾರ ಈ ಸಂದರ್ಭದಲ್ಲಿ ನಾನೇನು ಹೇಳಲಿ ಎನ್ನುವ ಮೂಲಕ ಜಾರಿಕೆ ಉತ್ತರ ನೀಡಿದರು.