ಬೇಬಿ ನರ್ಸರಿ ಮಕ್ಕಳಿಗೂ ನಿತ್ಯ ತರಗತಿ : ಸರ್ಕಾರಿ ಆದೇಶಕ್ಕಿಲ್ಲ ಕಿಮ್ಮತ್ತು!
ಮಂಡ್ಯ : ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯೊಂದು ಸರ್ಕಾರಿ ಆದೇಶಕ್ಕೆ ಕ್ಯಾರೆ ಎನ್ನದೆ, ಶಿಕ್ಷಣ ಸಚಿವರ ಆದೇಶಕ್ಕೆ ಸೆಡ್ಡು ಹೊಡೆದು ನಿಂತಿದೆ. ಎಲ್ಲೆಡೆ ಕೊರೊನಾ ಎರಡನೇ ಹಂತದ ಅಲೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ದೇಶಾದ್ಯಂತ ಕೊರೋನಾ ನಿಯಂತ್ರಣಕ್ಕೆ ಸರ್ಕಾರಗಳು ಕಟ್ಟು ನಿಟ್ಟಿನ ಆದೇಶ ಹೊರಡಿಸಿವೆ. ಅದರಲ್ಲೂ ರಾಜ್ಯದಲ್ಲಿ ಬೇಬಿ ನರ್ಸರಿಯಿಂದ ಐದನೇ ತರಗತಿವರೆಗೆ ತರಗತಿಗಳನ್ನ ನಡೆಸದಂತೆ ಶಿಕ್ಷಣ ಇಲಾಖೆ ಖಡಕ್ ಆದೇಶ ಹೊರಡಿಸಿದೆ.
ಆದರೂ ಸಕ್ಕರೆ ನಾಡು ಮಂಡ್ಯದ ಶಾಲೆಯೊಂದು ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೆ ನಿರಾತಂಕವಾಗಿ ತರಗತಿಗಳನ್ನ ನಡೆಸುತ್ತಿದೆ.
ಮಂಡ್ಯದ ಪ್ರತಿಷ್ಠಿತ ಅಭಿನವ ಭಾರತಿ ಶಿಕ್ಷಣ ಟ್ರಸ್ಟ್ ಗೆ ಸೇರಿದ ಶಾಲೆ ಮದ್ದೂರು ತಾಲೂಕಿನ ಮೂಡಲದೊಡ್ಡಿ ಗ್ರಾಮದಲ್ಲಿ ವೆಂಕಟೇಶ್ವರ ವಿದ್ಯಾನಿಕೇತನ ಶಾಲೆ ಇದೆ.
ಶಾಲೆಯಲ್ಲಿ ತರಗತಿಗಳನ್ನ ನಡೆಸಿದ್ರೆ ಹೊರಗಿನವರಿಗೆ ಗೊತ್ತಾಗುತ್ತೆ ಅಂತಾ, ಸಮೀಪದ ಚಿಕ್ಕದೊಡ್ಡಿ ಗ್ರಾಮದಲ್ಲಿ ತರಗತಿ ನಡೆಸ್ತಿದೆ.
ಗ್ರಾಮದ ಮನೆಯೊಂದರ ಮೇಲ್ಛಾವಣಿಯಲ್ಲಿ ಎಲ್ ಕೆಜಿ ಮತ್ತು ಯುಕೆಜಿ ನಡೆಸಿದ್ರೆ, ಸಮುದಾಯ ಭವನದಲ್ಲಿ 1ರಿಂದ ಐದನೇ ತರಗತಿ ವರೆಗೂ ಪಾಠ ಪ್ರವಚನ ಮಾಡಲಾಗುತ್ತಿದೆ ಎಂದು ಆರೋಪ ಕೇಳಿಬಂದಿದೆ.