H D Kumaraswamy | ಅಂಕವೇ ಎಲ್ಲವೂ ಅಲ್ಲ. ಪಾಸು-ಫೇಲು ಸಾಮಾನ್ಯ
ಬೆಂಗಳೂರು : ನಿನ್ನೆ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಒಂದೆಡೆ ಪಾಸಾದವರ ಸಂಭ್ರಮವಾದ್ರೆ ಮತ್ತೊಂದು ನಿರೀಕ್ಷಿತ ಅಂಕ ಬರದೆ ಫೇಲಾದ ಕಾರಣಕ್ಕೆ ವಿವಿಧೆಡೆ ಎಂಟು ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ತಮ್ಮ ಟ್ವಿಟ್ಟರ್ ನಲ್ಲಿ.. ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬರಲಿಲ್ಲ ಅಥವಾ ಫೇಲಾದೆವು ಎನ್ನುವ ಕಾರಣಕ್ಕೆ ರಾಜ್ಯದಲ್ಲಿ 8 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಸುದ್ದಿ ನನಗೆ ತೀವ್ರ ದಿಗ್ಭ್ರಮೆ ಉಂಟು ಮಾಡಿದೆ.
ಅಂಕವೇ ಎಲ್ಲವೂ ಅಲ್ಲ. ಪಾಸು-ಫೇಲು ಸಾಮಾನ್ಯ, ಜೀವನದಲ್ಲೂ ಏಳುಬೀಳು ಇದ್ದೇ ಇರುತ್ತದೆ. ಕಡಿಮೆ ಅಂಕ ಬಂದವರು ಮುಂದಿನ ತರಗತಿಯಲ್ಲಿ ಉತ್ತಮ ಅಂಕ ಪಡೆಯಲು ಯತ್ನಿಸಬೇಕು. ಫೇಲಾದವರು ಪಾಸಾಗಲು ಶ್ರಮಿಸಬೇಕು. ಅದನ್ನು ಬಿಟ್ಟು ಅಂಕಕ್ಕಾಗಿ ಜೀವವನ್ನೇ ಅಂತ್ಯ ಮಾಡಿಕೊಳ್ಳುವುದು ಹೆತ್ತವರಿಗೆ ಮಾಡುವ ಅನ್ಯಾಯ.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷಾ ಹಂತಗಳು ಇರುವಂತೆಯೇ ಬದುಕಿನುದ್ದಕ್ಕೂ ಅಗ್ನಿಪರೀಕ್ಷೆಗಳೇ ಇರುತ್ತವೆ. ಅವನ್ನು ಧೈರ್ಯ, ಛಲದಿಂದ ಎದುರಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಪೋಷಕರು, ಬೋಧಕರು, ಶಿಕ್ಷಣ ಸಂಸ್ಥೆಗಳು & ಶಿಕ್ಷಣ ಇಲಾಖೆ ಮನದಟ್ಟು ಮಾಡಿಸಬೇಕು.
ಶೈಕ್ಷಣಿಕ ವ್ಯವಸ್ಥೆಯಲ್ಲಿ ಪರೀಕ್ಷಾ ಹಂತಗಳು ಇರುವಂತೆಯೇ ಬದುಕಿನುದ್ದಕ್ಕೂ ಅಗ್ನಿಪರೀಕ್ಷೆಗಳೇ ಇರುತ್ತವೆ. ಅವನ್ನು ಧೈರ್ಯ, ಛಲದಿಂದ ಎದುರಿಸಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ಪೋಷಕರು, ಬೋಧಕರು, ಶಿಕ್ಷಣ ಸಂಸ್ಥೆಗಳು & ಶಿಕ್ಷಣ ಇಲಾಖೆ ಮನದಟ್ಟು ಮಾಡಿಸಬೇಕು. 3/4
— H D Kumaraswamy (@hd_kumaraswamy) June 19, 2022
ವಿದ್ಯಾಭ್ಯಾಸದಲ್ಲಿ ಹಿಂದುಳಿದ ಅನೇಕರು ಉನ್ನತ ಸ್ಥಾನಗಳಿಗೆ ಹೋಗಿರುವ ಉದಾಹರಣೆಗಳು ನಮ್ಮ ಮುಂದೆ ಇವೆ. ಹೀಗಾಗಿ ಧೃತಿಗೆಡಬೇಕಿಲ್ಲ. ಪೋಷಕರು ಕೂಡ ಮಕ್ಕಳಿಗೆ ಧೈರ್ಯ ತುಂಬಬೇಕು, ಸೂಕ್ಷ್ಮ ಮನಸ್ಸಿನ ಅವರಿಗೆ ಅಕ್ಕರೆಯಿಂದ ಆತ್ಮಸ್ಥೈರ್ಯ ಮೂಡಿಸಬೇಕು ಎಂದು ಬರೆದುಕೊಂಡಿದ್ದಾರೆ.