Monday, March 27, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Marjala Manthana

 ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ, ಇದು ಬಿಜೆಪಿ ನೀತಿ

Mahesh M Dhandu by Mahesh M Dhandu
July 4, 2022
in Marjala Manthana, Newsbeat, ಮಾರ್ಜಲ ಮಂಥನ
Congress tweet

karnataka-bjp- outrage agenaist priyanka gandhi vadra Saaksha Tv

Share on FacebookShare on TwitterShare on WhatsappShare on Telegram

 ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ, ಇದು ಬಿಜೆಪಿ ನೀತಿ

ಬೆಂಗಳೂರು :  ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಬಿಜೆಪಿ ನೀತಿ ಎಂದು ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

Related posts

Astrology

Astrology : ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗೊತ್ತಾ ?

March 27, 2023
Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

March 26, 2023

ಜೆಡಿಎಸ್‌ʼನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲ ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಗಳನ್ನು ಮಾಡಿರುವ ಕುಮಾರಸ್ವಾಮಿ, ಜೆಡಿಎಸ್‌ʼನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇಲ್ಲಎಂದು ಮಾನ್ಯ @CTRavi_BJP ಹೇಳಿದ್ದಾರೆ. ರವಿ ಅವರೇ, ಆಂತರಿಕ ಪ್ರಜಾಪ್ರಭುತ್ವ ಎಂದರೆ, ನರೇಂದ್ರ ಮೋದಿ ಮುಂದೆ ʼಸತ್ತಸೊಂಟʼದವರಂತೆ ನಡುಬಗ್ಗಿಸಿ ತಲೆ ಅಲ್ಲಾಡಿಸುವುದಾ? ಜೀ ಜೀ ಎನ್ನುತ್ತಾ ಜೀ ಹುಜೂರ್‌ ಎನ್ನುವುದಾ? 25 ಸಂಸದರ ಯೋಗ್ಯತೆ ಏನು? ಅವರಿಗೆಷ್ಟು ಸ್ವಾತಂತ್ರ್ಯ ಕೊಟ್ಟಿದ್ದೀರಿ?

EX CM H D Kumaraswamy slams c t ravi in twitter saaksha tv
EX CM H D Kumaraswamy slams c t ravi in twitter saaksha tv

#ಆಪರೇಷನ್‌_ದಕ್ಷಿಣ್‌ ಇದು @BJP4India ಹೊಸ ಸ್ಲೋಗನ್.!! ಹೈದರಾಬಾದ್‌ ರಾಷ್ಟ್ರೀಯ ಕಾರ್ಯಕಾರಣಿಯಲ್ಲಿ ಭಾವನಾನ್ಮಕ ವಿಚಾರಗಳನ್ನು ಮುನ್ನೆಲೆಗೆ ತಂದು, ಜನರ ಮನಸ್ಸುಗಳನ್ನು ಒಡೆದು ʼರಾವಣ ರಾಜಕೀಯʼದ ವಿನಾಶಕಾರಿ ದಾರಿಗೆ ಹಿಡನ್‌ ಅಜೆಂಡಾ ಸಿದ್ಧ ಮಾಡಲಾಯಿತಾ? ಹೇಳಿ ಮಾನ್ಯ @CTRavi_BJP ಯವರೇ?

#ಆಪರೇಷನ್‌_ದಕ್ಷಿಣ್‌ ನೆಮ್ಮದಿಯ ಸಮಾಜಕ್ಕೆ ಕೋಮುವಿಷ ಪ್ರಾಶಣ ಮಾಡುವ  ಇಂಜೆಕ್ಷನ್. ಧರ್ಮ, ದೇವರು, ಜಾತಿ, ಭಾಷೆ, ಆಚಾರ, ಆಹಾರ, ವ್ಯಾಪಾರಗಳನ್ನು ಎಳೆತಂದು, ಅಸಹಿಷ್ಣುತೆ ಸೃಷ್ಟಿಸಿ ಭಾರತವನ್ನು ಧರ್ಮದ ಆಧಾರದಲ್ಲಿ ಒಡೆದುಹಾಕುವುದಾ? ಕರ್ನಾಟಕದ ನಂತರ ನಿಮ್ಮ ಮುಂದಿನ ಗುರಿ ದಕ್ಷಿಣ ಭಾರತ. ಹೌದಲ್ಲವೇ @CTRavi_BJP ಯವರೇ?

#ಆಪರೇಷನ್‌_ದಕ್ಷಿಣ್‌ ಅಂದರೆ, ಆಪರೇಷನ್‌ ಕಮಲದ ರಾಷ್ಟ್ರೀಕರಣ & ತುಷ್ಠೀಕರಣ. ಶಾಸಕರ ಖರೀದಿ, ಕುದುರೆ ವ್ಯಾಪಾರ,  ಕರ್ನಾಟಕದ ನಂತರ ತಮಿಳುನಾಡು, ಕೇರಳ, ತೆಲಂಗಾಣ ಮತ್ತು ಆಂಧ್ರ ಪ್ರದೇಶಕ್ಕೂ ‌ವಿಸ್ತರಿಸುವ ಡೋಂಗೀ ರಾಷ್ಟ್ರಪ್ರೇಮಿಗಳ ರಾಜಕಾರಣ. ದಕ್ಷಿಣದ ಮೇಲೆ ಆಪರೇಷನ್‌ ಕಮಲದ ದುರಾಕ್ರಮಣ!! ಹೌದಲ್ಲವೇ @CTRavi_BJP ಯವರೇ?

#ಆಪರೇಷನ್‌_ದಕ್ಷಿಣ್‌
ಅಂದರೆ, ಬಿಜೆಪಿ ಪರಿವಾರ ರಾಜಕಾರಣವನ್ನು ಮತ್ತಷ್ಟು ಬಲಪಡಿಸುವುದಾ?
ಆಗ ಕಾಂಗ್ರೆಸ್‌ ಮುಕ್ತ ಭಾರತ! ಈಗ ಪರಿವಾರಮುಕ್ತ ಭಾರತ!‌ ನಂತರ ಪ್ರತಿಪಕ್ಷ ಮುಕ್ತ ಭಾರತ! ಮುಂದೆ ಸಂಪೂರ್ಣ ಪ್ರಜಾಪ್ರಭುತ್ವ ಮುಕ್ತ ಭಾರತ್‌ ನಿರ್ಮಾಣ!

ಇದಲ್ಲವೇ ನಿಮ್ಮ ಬಿಜೆಪಿಯ ಭವ್ಯಗುರಿ? ಉತ್ತರಿಸಿ @CTRavi_BJP ಯವರೇ? 6/10

— H D Kumaraswamy (@hd_kumaraswamy) July 4, 2022

#ಆಪರೇಷನ್‌_ದಕ್ಷಿಣ್‌. ಆಪರೇಷನ್‌ ಕಮಲಕ್ಕೆ ಬ್ರ್ಯಾಂಡ್‌ ಅಂಬಾಸಿಡರ್‌ ಒಬ್ಬರು ಬೇಕಲ್ಲವೇ? ‌ ಮಾನ್ಯ ಶ್ರೀ ಬಿ.ಎಸ್.‌ಯಡಿಯೂರಪ್ಪ ಅವರನ್ನೇ  ಬ್ರ್ಯಾಂಡ್‌ ರಾಯಭಾರಿ ಮಾಡುತ್ತೀರಾ? ಕಾರ್ಯಕಾರಿಣಿಯಲ್ಲಿ ಇದೂ  ಚರ್ಚೆಗೆ ಬಂತಾ? ಮೋದಿ ಸಾಹೇಬರು ಒಪ್ಪಿದರಾ? ಎಷ್ಟಾದರೂ ನಿಮ್ಮ ಅಮಿತೋತ್ಸಾಹಕ್ಕೆ ಆಪರೇಷನ್‌ ಕಮಲವೇ ಕಾರಣ, ಅಲ್ಲವೇ?

#ಆಪರೇಷನ್‌_ದಕ್ಷಿಣ್‌.  ಅಂದರೆ, ಬಿಜೆಪಿ ಪರಿವಾರ ರಾಜಕಾರಣವನ್ನು ಮತ್ತಷ್ಟು ಬಲಪಡಿಸುವುದಾ? ಆಗ ಕಾಂಗ್ರೆಸ್‌ ಮುಕ್ತ ಭಾರತ! ಈಗ ಪರಿವಾರಮುಕ್ತ ಭಾರತ!‌ ನಂತರ ಪ್ರತಿಪಕ್ಷ ಮುಕ್ತ ಭಾರತ! ಮುಂದೆ ಸಂಪೂರ್ಣ ಪ್ರಜಾಪ್ರಭುತ್ವ ಮುಕ್ತ ಭಾರತ್‌ ನಿರ್ಮಾಣ! ಇದಲ್ಲವೇ ನಿಮ್ಮ ಬಿಜೆಪಿಯ ಭವ್ಯಗುರಿ? ಉತ್ತರಿಸಿ @CTRavi_BJP ಯವರೇ?

ದಕ್ಷಿಣದಲ್ಲಿ ಪ್ರಾದೇಶಿಕ ಪಕ್ಷಗಳದ್ದೇ ಶಕ್ತಿ. ಇಲ್ಲಿ ಹೆಜ್ಜೆ ಇಡಲು ಬಿಜೆಪಿಗೆ ಆಗುತ್ತಿಲ್ಲ. ಆಪರೇಷನ್‌ ಕಮಲದಿಂದ ಕರ್ನಾಟಕದಲ್ಲಿ ಅಧಿಕಾರ ಹಿಡಿದಿರಿ. ಒಡಿಶಾ, ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿ ನಿಮ್ಮ ಬೇಳೆ ಬೇಯಲಿಲ್ಲ. ಅದಕ್ಕೀಗ ʼಪರಿವಾರಮುಕ್ತ ರಾಜಕೀಯʼ ಎಂದು ರಾಗ ತೆಗೆಯುತ್ತಿದ್ದೀರಿ. ಸತ್ಯ ಹೇಳಿ @CTRavi_BJP ಯವರೇ?

ಪ್ರಾದೇಶಿಕ ಪಕ್ಷಗಳನ್ನು ಎದುರಿಸಲಾಗದ ಬಿಜೆಪಿ, ಈಗ ಪರಿವಾರ ಜಪ ಮಾಡುತ್ತಿದೆ. ಅಯ್ಯೋ ಪಾಪ!! ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ ಮಾಡಿ ನೀವು ಮುಖ್ಯಮಂತ್ರಿ ಮಾಡಿದ ಶ್ರೀ ಏಕನಾಥ ಶಿಂಧೆ ಅವರ ʼಏಕಪರಿವಾರ ಪಾಲಿಟಿಕ್ಸ್‌ʼ ಗೊತ್ತಿರಲಿಲ್ಲವೇ? ಬೋದನೆ ಒಂದು! ಬೋಜನ ಇನ್ನೊಂದು!! ಛೇ, ಹೇಸಿಗೆ…

ಪ್ರಾದೇಶಿಕ ಪಕ್ಷಗಳನ್ನು ಎದುರಿಸಲಾಗದ ಬಿಜೆಪಿ, ಈಗ ಪರಿವಾರ ಜಪ ಮಾಡುತ್ತಿದೆ. ಅಯ್ಯೋ ಪಾಪ!! ಮಹಾರಾಷ್ಟ್ರದಲ್ಲಿ ಆಪರೇಷನ್‌ ಕಮಲ ಮಾಡಿ ನೀವು ಮುಖ್ಯಮಂತ್ರಿ ಮಾಡಿದ ಶ್ರೀ ಏಕನಾಥ ಶಿಂಧೆ ಅವರ ʼಏಕಪರಿವಾರ ಪಾಲಿಟಿಕ್ಸ್‌ʼ ಗೊತ್ತಿರಲಿಲ್ಲವೇ? ಬೋದನೆ ಒಂದು! ಬೋಜನ ಇನ್ನೊಂದು!! ಛೇ, ಹೇಸಿಗೆ… 8/10

— H D Kumaraswamy (@hd_kumaraswamy) July 4, 2022

ಯಡಿಯೂರಪ್ಪ & ಸನ್ಸ್‌, ರವಿ ಸುಬ್ರಹ್ಮಣ್ಯ-ತೇಜಸ್ವಿಸೂರ್ಯ, ಅಶೋಕ್-ರವಿ, ಸೋಮಣ್ಣ-ಅರುಣ್‌ ಸೋಮಣ್ಣ, ಲಿಂಬಾಳಿ-ರಘು, ವಿಶ್ವನಾಥ್-ವಾಣಿ ವಿಶ್ವನಾಥ್‌, ಶೆಟ್ಟರ್-ಪ್ರದೀಪ್‌ ಶೆಟ್ಟರ್‌, ನಿರಾಣಿ-ಹನುಮಂತ ನಿರಾಣಿ, ಜಿ.ಎಸ್.ಬಸವರಾಜು-ಜ್ಯೋತಿ ಗಣೇಶ್ & ಜಾರಕಿಹೊಳಿ, ಕತ್ತಿ, ಅಂಗಡಿ, ಉದಾಸಿ ಕುಟುಂಬಗಳು.. ಇದೆಲ್ಲಾ ಏನು @CTRavi_BJP ಯವರೇ?

ಪರಿವಾರ ರಾಜಕಾರಣಕ್ಕೆ ಬಿಜೆಪಿ ಅತೀತವಲ್ಲ. ರಾಜ್ಯದ  ಲೆಕ್ಕ ಕೊಟ್ಟಿದ್ದೇನೆ. ಭಾರತದ ಪಟ್ಟಿ ಕೊಡಲೇ? ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಬಿಜೆಪಿ ನೀತಿ. ಆಪರೇಷನ್‌ ದಕ್ಷಿಣ್‌ ಅಲ್ಲ, ಬಿಜೆಪಿ ಅಸ್ತಿತ್ವಕ್ಕೇ ಆಪರೇಷನ್‌ ಆಗುವ ಕಾಲ ಹತ್ತಿರದಲ್ಲೇ ಇದೆ ಎಂದು ಕುಮಾರಸ್ವಾಮಿ ಬರೆದುಕೊಂಡಿದ್ದಾರೆ.

ಪರಿವಾರ ರಾಜಕಾರಣಕ್ಕೆ ಬಿಜೆಪಿ ಅತೀತವಲ್ಲ. ರಾಜ್ಯದ ಲೆಕ್ಕ ಕೊಟ್ಟಿದ್ದೇನೆ. ಭಾರತದ ಪಟ್ಟಿ ಕೊಡಲೇ? ಅಬ್ಬರ ಜಾಸ್ತಿ, ಅಭಿವೃದ್ಧಿ ನಾಸ್ತಿ. ಇದು ಬಿಜೆಪಿ ನೀತಿ.
ಆಪರೇಷನ್‌ ದಕ್ಷಿಣ್‌ ಅಲ್ಲ, ಬಿಜೆಪಿ ಅಸ್ತಿತ್ವಕ್ಕೇ ಆಪರೇಷನ್‌ ಆಗುವ ಕಾಲ ಹತ್ತಿರದಲ್ಲೇ ಇದೆ. 10/10#ಆಪರೇಷನ್‌_ದಕ್ಷಿಣ್‌#ಪ್ರಜಾಪ್ರಭುತ್ವಮುಕ್ತ_ಭಾರತ್_ನಿರ್ಮಾಣ್‌

— H D Kumaraswamy (@hd_kumaraswamy) July 4, 2022

Tags: #Saaksha TVBJPH D KUMARASWAMYJDS
ShareTweetSendShare
Join us on:

Related Posts

Astrology

Astrology : ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗೊತ್ತಾ ?

by Naveen Kumar B C
March 27, 2023
0

ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗಾಯತ್ರಿ ಮಂತ್ರ ಜಪಿಸುವುದರಿಂದ ಮನುಷ್ಯನಿಗೆ ಯಾವ ರೀತಿಯಲ್ಲಿ ಲಾಭವಾಗುತ್ತದೆ ಎಂಬುದು ತಿಳಿದಿದೆಯೇ ? ಸಂಧ್ಯಾಕಾಲದಲ್ಲಿ...

Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

by Naveen Kumar B C
March 26, 2023
0

5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ... ನಮ್ಮ ಅಡುಗೆಮನೆಯಲ್ಲಿ ನೂರಾರು ವಸ್ತುಗಳು ಇವೆ....

Ramya

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… 

by Naveen Kumar B C
March 26, 2023
0

Weekend with Ramesh :  “ಸಬ್ ಟೈಟಲ್ ಹಾಕ್ರೋ” ಇಂಗ್ಲೀಷ್ ಬಳಸಿ ಟ್ರೋಲ್ ಗೆ ಒಳಗಾದ  ರಮ್ಯಾ… ಕನ್ನಡ ಕಿರುತೆರೆಯ ಪ್ರಸಿದ್ಧ ರಿಯಾಲಿಟಿ ಶೋ  ವೀಕೆಂಡ್ ವಿತ್...

Covid-19 , india , daily report , health , saakshatv

COVID-19 :  ಒಂದೇ ದಿನದಲ್ಲಿ 1,890 ಕೋವಿಡ್ ಪ್ರಕರಣಗಳು ಏರಿಕೆ….

by Naveen Kumar B C
March 26, 2023
0

COVID-19 :  ಒಂದೇ ದಿನದಲ್ಲಿ 1,890 ಕೋವಿಡ್ ಪ್ರಕರಣಗಳು ಏರಿಕೆ…. ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ  ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ 24...

ISRO LVM3

ISRO LVM 3 : 36 ಉಪಗ್ರಹಗಳೊಂದಿಗೆ LVM3 ರಾಕೆಟ್ ಉಡಾವಣೆ ಯಶಸ್ವಿ… 

by Naveen Kumar B C
March 26, 2023
0

ISRO LVM 3 : 36 ಉಪಗ್ರಹಗಳೊಂದಿಗೆ LVM3 ರಾಕೆಟ್ ಉಡಾವಣೆ ಯಶಸ್ವಿ… ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ LVM 3 ರಾಕೆಟ್ ಅನ್ನ ಯಶಸ್ವಿಯಾಗಿ ಉಡಾವಣೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • Samsung Galaxy F04 : ಆಕರ್ಷಕ ಫೀಚರ್ಸ್ , ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಲಭ್ಯ

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

Astrology

Astrology : ರೋಗನಿರೋಧಕ ಶಕ್ತಿ ಮತ್ತು ಆರೋಗ್ಯ ವೃದ್ಧಿಯಾಗ ಬೇಕೆಂದರೆ ಯಾವ ಮಂತ್ರವನ್ನು ಜಪಿಸಬೇಕು ಗೊತ್ತಾ ?

March 27, 2023
Annapoorneshwari

Astrology : 5 ಕಂಟೈನರ್‌ಗಳನ್ನು ಎಂದಿಗೂ ಅಡಿಗೆ ಕೌಂಟರ್‌ನಲ್ಲಿ ಇರಿಸಬಾರದು. ಈ ಎಲ್ಲಾ ವಸ್ತುಗಳನ್ನು ಅಡುಗೆ ವೇದಿಕೆಯ ಮೇಲೆ ಇರಿಸಿದರೆ, ಹಣಕ್ಕೆ ಕಷ್ಟವಾಗುತ್ತದೆ…

March 26, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram