H.D.Kumaraswamy | ತೇವಲು ತೀರಿಸಿಕೊಳ್ಳಲು ಅಮಾಯಕರಿಗೆ ಬಲಿ ಕೊಡಬೇಡಿ
ಬೀದರ್ : ನಿಮ್ಮ ತೇವಲು ತೀರಿಸಿಕೊಳ್ಳಲು ಅಮಾಯಕರಿಗೆ ಬಲಿ ಕೊಡಬೇಡಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.
ಬೀದರ್ ನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರಾಜ್ಯದಲ್ಲಿ ಸಮಾಜ ಒಡೆಯುವಂತ ಕೆಲಸ ಎರಡು ಪಕ್ಷದಿಂದ ನಡೆಯುತ್ತಿವೆ.
ಇದು ಕೇವಲ 10 ದಿನದ ಸಮಸ್ಯೆ ಇಲ್ಲ, ಕಳೆದ 15-20 ವರ್ಷಗಳ ಸಮಸ್ಯೆಯಾಗಿದೆ. ಅವರಿಗೆ ಸರಿಯಾದ ದಾರಿಯಲ್ಲಿ ಮತ ಕೇಳಲು ಬೇರೆ ದಾರಿ ಇಲ್ಲ. ಈ ರೀತಿಯಾದರೇ ಬಿಜೆಪಿಯವರಿಗೆ ಒಂದು ವರ್ಗದ ಮತ ಕೇಳುತ್ತಾರೆ, ಕಾಂಗ್ರೆಸ್ ನವರು ಒಂದು ಸಮುದಾಯ ಮತ ಕೇಳುತ್ತಾರೆ.
ಜನರಿಗೆ ಮೆಚ್ಚಿಸುವುದಕ್ಕೆ ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಶಾಂತಿಯ ವಾತಾವರಣ ತರಲು ಸರ್ಕಾರ ಗಮನ ಕೊಡಬೇಕಾಗಿದೆ ಎಂದು ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ಎಲ್ಲಾ ಧರ್ಮದ ಸ್ವಾಮೀಜಿಗಳನ್ನ ಕರೆದು, ಸ್ವಾಮೀಜಿಗಳಿಂದ ಶಾಂತಿ ಕಾಪಾಡಲು ಸಂದೇಶ ಕೊಡಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೇ ಪ್ರವೀಣ್ ಗೆ ಉಳಿಸಿಕೊಳ್ಳಬಹುದಾಗಿತ್ತು.
ಇದು ಸರ್ಕಾರದ ಆಡಳಿತದ ವೈಫಲ್ಯ, ಸಿಎಂ ಮುಖಕ್ಕೆ ಪ್ರವೀಣ್ ಪತ್ನಿ ಹೇಳಿದರು, ಸಿಎಂ ಭೇಟಿ ಮಾಡಿ 50 ಲಕ್ಷ ಪರಿಹಾರ ಕೊಟ್ಟ ತಕ್ಷಣ ಹತ್ಯೆಯಾದ ವ್ಯಕ್ತಿ ತಂದು ಕೊಡಲು ಸಾಧ್ಯನಾ..? ಸಿಎಂಗೆ ಕನಿಷ್ಠ ತಿಳಿವಳಿಕೆ ಇದ್ದರೇ ಜನರಿಗೆ ಶಾಂತಿಯಿಂದ ಇರಲು ಸಂದೇಶ ಕೊಡಬೇಕಾಗಿತ್ತು.
ಶಾಂತಿ ಕಾಪಾಡುವಂತೆ ಎರಡೂ ರಾಷ್ಟ್ರೀಯ ಪಕ್ಷಗಳು ಮನವಿ ಮಾಡುತ್ತಿಲ್ಲ ಎಂದು ಹೆಚ್ ಡಿ ಕುಮಾರಸ್ವಾಮಿ ಬೇಸರ ಹೊರಹಾಕಿದರು.








