HD Kumaraswamy | ಮೋದಿ ಇಲ್ಲೇನು ಗೊಂಬೆ ಕುಣಿಸೋಕೆ ಬರ್ತಾರಾ
ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲೇನು ಗೊಂಬೆ ಕುಣಿಸೋಕೆ ಬರ್ತಾರಾ ? ಮೊದಲು ಜನರ ಸಮಸ್ಯೆ ಬಗೆಹರಿಸಲಿ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರುತ್ತಾರೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಇದಕ್ಕೆ ಮಂಡ್ಯದ ನಾಗಮಂಗಲದಲ್ಲಿ ಪ್ರತಿಕ್ರಿಯೆ ನೀಡಿರುವ ಹೆಚ್ ಡಿ ಕುಮಾರಸ್ವಾಮಿ, ಏನ್ ಮಾಡೋದಕ್ಕೆ ತಿಂಗಳಿಗೊಮ್ಮೆ ಬರುತ್ತಾರೆ ? ಏನ್ ಕೊಟ್ಟಿದ್ದಾರೆ ಅಂತಾ ಅವರು ಬರ್ತಾರೆ.
ಇಲ್ಲೇನು ಗೊಂಬೆ ಕುಣಿಸಲು ಬರ್ತಾರಾ. ಕಳೆದ ಮೂರು ವರ್ಷದಲ್ಲಿ 35 ರಿಂದ 40 ಸಾವಿರ ಕೋಟಿ ರೈತರ ಬೆಳೆ ನಾಶವಾಗಿದೆ. ಇದ್ಯಾವುದಕ್ಕೂ ಧ್ವನಿ ಎತ್ತದೆ ಇಲ್ಲಿ ಬಂದು ಏನು ಮಾಡಲು ಬರ್ತಾರೆ ಎಂದು ಪ್ರಶ್ನಿಸಿದರು.

ಇದೇ ವೇಳೆ ಮುರುಘಾ ಶ್ರೀಗಳ ಬಂಧನ ತಡವಾದ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ, ಈ ಬಗ್ಗೆ ತೀರ್ಮಾನ ಮಾಡಬೇಕಾಗಿರುವುದು ಸರ್ಕಾರ.
ಸಾರ್ವಜನಿಕವಾಗಿ ಚರ್ಚೆ ಮಾಡುವುದು ಅನಾವಶ್ಯಕ. ಕಾನೂನು ವ್ಯಾಪ್ತಿಯಲ್ಲಿ ನಡೆದು ಘಟನೆಯ ಸತ್ಯಾಂಶವನ್ನು ಹೊರತೆಗೆಯಬೇಕು. ಜನರಲ್ಲಿ ಅಪನಂಬಿಕೆ ಬಾರದಂತೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದರು.
ದೇವೇಗೌಡ ಆರೋಗ್ಯ ವಿಚಾರವಾಗಿ ಮಾತನಾಡಿ, ದೇವೇಗೌಡರ ಆರೋಗ್ಯ ದೇವರ ದಯೆಯಿಂದ ಮತ್ತೆ ಚೇತರಿಸುತ್ತಿದೆ. ಗಣೇಶ ಹಬ್ಬದಂದು ಅವರೇ ಹೇಳಿದ್ದಾರೆ.
ಜನತೇಯ ಮುಂದೆ ಬಂತು ಆಶೀರ್ವಾದ ತೆಗೆದುಕೊಳ್ಳುತ್ತಾರೆ. ಪಕ್ಷ ಸಂಘಟನೆ ಮಾಡುವ ಕೆಲಸ ವನ್ನು ಮಾಡ್ತಾರೆ ಎಂದು ಹೇಳಿದರು.