Siddaramaiah | ನಾನು ಚಾಮುಂಡೇಶ್ವರಿಯಿಂದ ಮತ್ತೆ ನಿಲ್ಲಲ್ಲ
ಮೈಸೂರು : ನಾನು ಚಾಮುಂಡೇಶ್ವರಿಯಿಂದ ಮತ್ತೆ ನಿಲ್ಲಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಅನ್ನುವ ಚರ್ಚೆ ರಾಜಕೀಯ ವಲಯದಲ್ಲಿ ಸಾಕಷ್ಟು ಹರಿದಾಡುತ್ತಿದೆ.
ಈ ನಡುವೆ ಅವರು ಮತ್ತೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಫರ್ಧಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಇದೀಗ ಈ ವಿಚಾರಕ್ಕೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.
ಚಾಮುಂಡೇಶ್ವರಿ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಶಿಸ್ತು ಇಲ್ಲದಿದ್ರೆ ಯಾವ ಪಕ್ಷವೂ ಬಲಯುತವಾಗಲ್ಲ.
ಶಿಸ್ತು ಇಲ್ಲ ಅಂದ್ರೆ ಒಬ್ಬರ ಕಾಲು ಮತ್ತೊಬ್ಬರು ಎಳೆಯುತ್ತಾರೆ ಎಂದು ಮಾರ್ಮಿಕ ನುಡಿದರು.
ಭಾನುವಾರ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಭೆವೊಂದು ನಡೆಯಿತು. ಈ ಸಭೆಗೆ ಸಿದ್ದರಾಮಯ್ಯ ಆಗಮಿಸಿದ್ರು.

ಆಗ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಮರೀಗೌಡ, ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯ ಅವರನ್ನ ಕೇಳಿಕೊಂಡರು.
ಅದಕ್ಕೆ ಅಲ್ಲಿನ ಕಾರ್ಯಕರ್ತರು ಕಳೆದ ಚುನಾವಣೆಯಲ್ಲಿ ಸಾಹೇಬರನ್ನು ಸೋಲಿಸಿ ಮತ್ತೆ ಏಕೆ ಕರೆಯುತ್ತೀರಾ ಅಂತಾ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಚಾಮುಂಡೇಶ್ವರಿಯಿಂದ ಮತ್ತೆ ನಿಲ್ಲಲ್ಲ. ನನ್ನನ್ನು ಮತ್ತೆ ಒತ್ತಾಯ ಮಾಡಬೇಡಿ.
ಇದನ್ನ ತಲೆಯಿಂದ ತೆಗೆದುಹಾಕಿ. ನನ್ನನ್ನು ಖುಷಿಪಡಿಸಲೂ ಇನ್ಮುಂದೆ ಹೀಗೆ ಮಾತನಾಡಬೇಡಿ. ದಟ್ ಇಸ್ ವೆರಿ ವೆರಿ ಕ್ಲಿಯರ್. ಇದು ನನ್ನ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.