ಚಿಕ್ಕಬಳ್ಳಾಪುರ: ವ್ಯಕ್ತಿಯೊಬ್ಬ ನಿವೃತ್ತ ಸೈನಿಕರಿಗೆ ಲಕ್ಷ ಲಕ್ಷ ವಂಚಿಸಿ ಅರೆಸ್ಟ್ ಆಗಿರುವ ಘಟನೆ ನಡೆದಿದೆ.
ಇಬ್ಬರು ನಿವೃತ್ತ ಸೈನಿಕರಿಗೆ ಜಮೀನು ಮಂಜೂರು ವಿಷಯದಲ್ಲಿ ಡಿಸಿ ಆರ್ಡರ್ ಮಾಡಿಸುತ್ತೇನೆ ಎಂದು ಹೇಳಿ 35 ಲಕ್ಷ ರೂ. ವಂಚಿಸಿದ್ದ ಎನ್ನಲಾಗಿದ್ದು, ಪೊಲೀಸರು ಬಂಧಿಸಿದ್ದಾರೆ.
ನಗರದ ಗಂಗಮ್ಮ ಗುಡಿ ಬಜಾರ್ ರಸ್ತೆಯಲ್ಲಿರುವ ಜ್ಯುವೆಲ್ಲರಿ ಶಾಪ್ ಮಾಲೀಕ ಸೂರ್ಯನಾರಾಯಣಚಾರಿ ಬಂಧಿತ ಆರೋಪಿಯಾಗಿದ್ದಾನೆ. ನನಗೆ ಹಿರಿಯ ಅಧಿಕಾರಿಗಳು ಗೊತ್ತು ಎಂದು ನಂಬಿಸಿ, ನಿವೃತ್ತ ಸೈನಿಕರಿಂದ ಹಣ ಪಡೆದು ವಂಚಿಸಿದ್ದ ಎನ್ನಲಾಗಿದೆ. ಗೌರಿಬಿದನೂರಿನ (Gauribidanur) ದೊಡ್ಡಕುರುಗೋಡು ಹಳ್ಳಿಯ ಮಾಜಿ ಸೈನಿಕ ಮಾರ್ಕಂಡೇಯ ಹಾಗೂ ಮರಿಯಪ್ಪನಪಾಳ್ಯದ ಮಾಜಿ ಸೈನಿಕ ಅನಂದ್ ಕುಮಾರ್ ಎಂಬುವವರಿಗೆ ಮೋಸ ಮಾಡಿದ್ದ ಎನ್ನಲಾಗಿದೆ.
ಪೊಲೀಸರು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಆರೋಪಿ, ದರ್ಪ ಮೆರೆದಿದ್ದಾನೆ ಎನ್ನಲಾಗಿದೆ. ಸದ್ಯ ಆತನನ್ನು ಬಂಧಿಸಿ, ವಿಚಾರಣೆ ನಡೆಸಿದ್ದಾರೆ.