ಫೇಸ್ ಬುಕ್ ನಿಂದ ತೆಗೆದುಹಾಕಿರುವ ಪೋಸ್ಟ್ಗಳಿಗೆ ಜುಲೈ 2ರಂದು ಮಧ್ಯಂತರ ವರದಿ ಸಲ್ಲಿಕೆ
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಐಟಿ ನಿಯಮಾನುಸಾರ ಮೇ 15ರಿಂದ ಜೂನ್ 15ರವರೆಗೆ ಫೇಸ್ ಬುಕ್ ನಿಂದ ತೆಗೆದುಹಾಕಿರುವ ಪೋಸ್ಟ್ಗಳಿಗೆ ಸಂಬಂಧಿಸಿದ ಮಧ್ಯಂತರ ವರದಿಯನ್ನು ಜುಲೈ 2ರಂದು ಸಲ್ಲಿಸುತ್ತೇವೆ ಎಂದು ಫೇಸ್ಬುಕ್ ತಿಳಿಸಿದೆ. ನೂತನ ನಿಯಮಗಳ ಅನ್ವಯ ತಿಂಗಳಿಗೊಮ್ಮೆ ಇಂತಹ ವರದಿಯಲ್ಲಿ ಎಲ್ಲಾ ಸಾಮಾಜಿಕ ಜಾಲತಾಣಗಳು ಸಲ್ಲಿಸುವುದು ಕಡ್ಡಾಯ. ಆ ಅವಧಿಯಲ್ಲಿ ಬಂದ ದೂರುಗಳು, ಆಕ್ಷೇಪಗಳು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು.
ಹೀಗಾಗಿ ಮೇ 15ರಿಂದ ಜೂನ್ 15ರವರೆಗೆ ಬಂದ ದೂರುಗಳು, ಆಕ್ಷೇಪಗಳು ಮತ್ತು ತೆಗೆದುಕೊಂಡ ಕ್ರಮಗಳ ಬಗ್ಗೆ ಅಂತಿಮ ವರದಿಯಲ್ಲಿ ಜುಲೈ 15ರಂದು ಸಲ್ಲಿಸುತ್ತೇವೆ. ಪರಿಶೀಲನಾ ಸಮಿತಿ ತೆಗೆದುಕೊಂಡ ಕ್ರಮಗಳು ಮತ್ತು ಸ್ವಯಂಚಾಲಿತ ವ್ಯವಸ್ಥೆ ತೆಗೆದುಕೊಂಡ ಕ್ರಮಗಳ ಬಗ್ಗೆ ಅಂತಿಮ ವರದಿಯಲ್ಲಿ ಮಾಹಿತಿ ಇರಲಿದೆ ಎಂದು ಫೇಸ್ಬುಕ್ ಹೇಳಿಕೊಂಡಿದೆ. ಅಲ್ಲದೇ ಜುಲೈ 15ರಂದು ಸಲ್ಲಿಸಲಿರುವ ವರದಿಯಲ್ಲಿ ವಾಟ್ಸ್ಆ್ಯಪ್ ಗೆ ಸಂಬಂಧಿಸಿದ ಮಾಹಿತಿಯೂ ಇರಲಿದೆ ಎಂದು ವಾಟ್ಸ್ಆ್ಯಪ್ನ ಮಾತೃಕಂಪನಿಯಾದ ಫೇಸ್ಬುಕ್ ಹೇಳಿದೆ.