ಕೊರೋನಾ ವೈರಸ್ ಕೇವಲ ಸೋಂಕಿತ ಮನುಷ್ಯರಿಂದ ಮಾತ್ರ ಹರಡುತ್ತದೆ ಎನ್ನುವುದು ಇದುವರೆಗೆ ತಿಳಿದಿರುವ ಮಾಹಿತಿ. ಆದರೆ ಇತ್ತಿಚೆಗೆ ಕೋಳಿ ಮಾಂಸ ತಿಂದರೆ ಕೊರೊನಾ ವೈರಸ್ ಬರುತ್ತದೆ ಎಂಬ ಸುಳ್ಳಿನ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದೇ ಕಾರಣದಿಂದ ಭಾರಿ ನಷ್ಟದಲ್ಲಿರುವ ಕೋಳಿ ಸಾಕಾಣಿಕೆ ಉದ್ಯಮ ಪಾತಾಳಕ್ಕೆ ಇಳಿದಿದೆ. ಈಗಾಗಲೇ ಈ ವಿಚಾರ ಕುರಿತು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದ್ದಾಗಿದೆ. ಕೋಳಿ ಮಾಂಸದಿಂದ ಕೊರೊನಾ ವೈರಸ್ ಬರುವುದಿಲ್ಲ, ಯಾರೂ ಆತಂಕಕ್ಕೆ ಒಳಗಾಗಬೇಡಿ ಎಂದು ಆರೋಗ್ಯ ಇಲಾಖೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಇದುವರೆಗೂ ಕೋಳಿ ಮಾಂಸದಿಂದ ಕೊರೊನಾ ವೈರಸ್ ಹರಡುತ್ತದೆ ಎಂಬುದಕ್ಕೆ ವೈಜ್ಞಾನಿಕ ಆಧಾರವೂ ಸಹ ಸಿಕ್ಕಿಲ್ಲ. ಒಟ್ಟಿನಲ್ಲಿ ಕೊರೋನಾ ಭಯದಿಂದ ಹೆದರಿರುವ ಜನ ಕೋಳಿ ಮಾಂಸ ತಿನ್ನುವುದನ್ನು ಬಿಟ್ಟಿದ್ದಾರೆ. ಇದರಿಂದ ಕರ್ನಾಟಕ ರಾಜ್ಯವೊಂದರಲ್ಲೇ ಕೋಟ್ಯಾಂತರ ಹಣಕಾಸಿನ ವ್ಯವಹಾರಕ್ಕೆ ಹೊಡೆತ ಬಿದ್ದಿದ್ದು, ಕೋಳಿ ಸಾಕಾಣಿಕೆದಾರರು ಬೀದಿಗೆ ಬರುವಂತಾಗಿದೆ.
fifaworldcup2026- ಯಮನಿಗೆ ಬೆನ್ನು ತೋರಿಸಿದ್ದ ಮೃತ್ಯುಂಜಯ.. ಫುಟ್ಬಾಲ್ ಜಗತ್ತಿನ ಸಾಂಬಾ ಡಾನ್ಸರ್ ನ ಬದುಕಿನ ಯಾನ..!
ಫುಟ್ಬಾಲ್ ಜಗತ್ತಿನಲ್ಲಿ ಇತಿಹಾಸವನ್ನ ಬರೆದವರಿದ್ದಾರೆ. ಸಾಮ್ರಾಜ್ಯವನ್ನು ಕಟ್ಟಿದವರಿದ್ದಾರೆ. ಆದ್ರೆ ಸಾವು ಬದುಕಿನ ಆಟದಲ್ಲಿ ಒಂದಲ್ಲ ಎರಡಲ್ಲ.. ನಾಲ್ಕು ಬಾರಿ ಯಮರಾಯನಿಗೆ ಬೆನ್ನು ತೋರಿಸಿ, ಫುಟ್ಬಾಲ್ ಮೈದಾನದಲ್ಲಿ ಚರಿತ್ರೆ...








