Ishan-Kishan | ಇಶಾನ್ ಕಿಶಾನ್ ಬಗ್ಗೆ ಮುಂಬೈ ಫ್ಯಾನ್ಸ್ ಅಸಮಾಧಾನ
ಇಶಾನ್ ಕಿಶಾನ್.. 2022 ರ ಮೆಗಾ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ.
ಮೊದಲು ಈ ಯುವ ಬ್ಯಾಟರ್ ಅನ್ನು ರಿಟೈನ್ಡ್ ಮಾಡಿಕೊಳ್ಳದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಬಳಿಕ ಮೆಗಾ ಹರಾಜಿನಲ್ಲಿ ಪೈಪೋಟಿಗೆ ಬಿದ್ದು, ಬರೋಬ್ಬರಿ 15.25 ಕೋಟಿಗೆ ಖರೀದಿ ಮಾಡಿತು.
ಇದಕ್ಕೆ ತಕ್ಕಂತೆ ಇಶಾನ್ ಕಿಶಾನ್ ಕೂಡ ಆರಂಭದ ಎರಡು ಪಂದ್ಯಗಳಲ್ಲಿ 81 ರನ್ ಮತ್ತು 54 ರನ್ ಗಳಿಸಿದರು.
ಆ ನಂತರ ಆಡಿದ ಆರು ಪಂದ್ಯಗಳಲ್ಲಿ ಇಶಾನ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ
ಕಳೆದ ಆರು ಪಂದ್ಯಗಳಲ್ಲಿ ಇಶಾನ್ ಗಳಿಸಿರೋದು ಕೇವಲ 64 ರನ್ ಮಾತ್ರ.
ಭಾನುವಾರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಇಶಾನ್ ಕಿಶನ್ ತೋರಿದ ಪ್ರದರ್ಶನದಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಗೆ ಗುರಿಯಾಗಿದ್ದಾರೆ.
ಆರಂಭಿಕರಾಗಿ ಬಂದ ಇಶಾನ್ 20 ಎಸೆತಗಳನ್ನು ಎದುರಿಸಿ ಕೇವಲ 8 ರನ್ ಗಳಿಸಿದರು.
ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ಮುಂಬೈ ಫಾನ್ಸ್ ಕಿಡಿಕಾರುತ್ತಿದ್ದಾರೆ.
ಇದೇನು ಟೆಸ್ಟ್ ಪಂದ್ಯ ಅಂದುಕೊಂಡಿದ್ದೀಯಾ..? ಪಾಪಾ ಮುಂಬೈ ಎನ್ನುತ್ತಿದ್ದಾರೆ.
ಮೊದಲು ಬ್ಯಾಟ್ ಮಾಡಿ ಲಕ್ನೋ ಸೂಪರ್ ಜೈಂಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಕೆ.ಎಲ್ ರಾಹುಲ್ ಸೆಂಚೂರಿಯೊಂದಿಗೆ 168 ರನ್ ಗಳಿಸಿತು.
ಮುಂಬೈ ಇಂಡಿಯನ್ಸ್ ತಂಡ 136 ರನ್ ಗಳಿಗೆ ಸುಸ್ತಾಯ್ತು. ಇದರೊಂದಿಗೆ 32 ರನ್ ಗಳೊಂದಿಗೆ ಮುಂಬೈ ಇಂಡಿಯನ್ಸ್ ತಂಡ ಸೋಲು ಕಂಡಿದೆ. fans-trolls-ishan-kishan-his-batting