ADVERTISEMENT
Saturday, July 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಜಾಥಾಗೆ ಅನುಮತಿ ಇಲ್ಲ: ಸಾಂಕೇತಿಕ ಪ್ರತಿಭಟನೆಗೂ `ನೋ’ ಎಂದ ಕಮಲ್‍ಪಂಥ್..!

Kariyappa N by Kariyappa N
January 25, 2021
in Newsbeat, Samagra karnataka, Uncategorized, ರಾಜ್ಯ
rally
Share on FacebookShare on TwitterShare on WhatsappShare on Telegram

Related posts

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

July 11, 2026
fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

July 11, 2026

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಾಳೆ ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ಜಾಥಾಗೆ ಬೆಂಗಳೂರು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ದೆಹಲಿ ಮಾದರಿಯಲ್ಲಿ ನಾಳೆ ಗಣರಾಜ್ಯೋತ್ಸವ ಪರೇಡ್ ಮುಗಿದ ಬಳಿಕ ರೈತರು ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸಲು ಪೊಲೀಸರ ಅನುಮತಿ ಕೇಳಿದ್ದರು. ಆದರೆ, ಟ್ರ್ಯಾಕ್ಟರ್ ಜಾಥಾಗೆ ಅನುಮತಿ ಇಲ್ಲ. ಜತೆಗೆ ಸಾಂಕೇತಿಕ ಪ್ರತಿಭಟನೆಗೂ ಅವಕಾಶ ಇಲ್ಲ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ತಿಳಿಸಿದ್ದಾರೆ.


ನಾಳಿನ ಗಣರಾಜ್ಯೋತ್ಸವ ಪರೇಡ್‍ಗೆ ಭದ್ರತೆ ನೀಡುವುದು ನಮ್ಮ ಮೊದಲ ಆದ್ಯತೆಯಾಗಿದೆ. ಇಂದು ಸಂಜೆಯಿಂದಲೇ ಗಣರಾಜ್ಯೋತ್ಸವ ಪರೇಡ್‍ಗೆ ಪೊಲೀಸರ ಭದ್ರತೆ ಮಾಡುತ್ತಿದ್ದೇವೆ. ಹೀಗಾಗಿ ಟ್ರ್ಯಾಕ್ಟರ್ ಜಾಥಾ ಭದ್ರತೆ ನೀಡುವುದು ಕಷ್ಟವಾಗಿದೆ. ಹೀಗಾಗಿ ಟ್ರ್ಯಾಕ್ಟರ್ ಬಂದು ಸಾಂಕೇತಿಕ ಪ್ರತಿಭಟನೆ ನಡೆಸಲು ಅನುಮತಿ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಫ್ರೀಡಂಪಾರ್ಕ್‍ನಲ್ಲಿ ಮಾತ್ರ ಪ್ರತಿಭಟನೆಗೆ ಓಕೆ..!
ಟ್ರ್ಯಾಕ್ಟರ್ ಜಾಥಾಗೆ ಅನುಮತಿ ಇಲ್ಲ, ಆದರೆ, ಫ್ರೀಡಂಪಾರ್ಕ್‍ನಲ್ಲಿ ರೈತರು ಪ್ರತಿಭಟನೆಗೆ ಅನುಮತಿ ನೀಡಲಾಗುವುದು. ಫ್ರೀಡಂಪಾರ್ಕ್‍ನಲ್ಲಿ ಪ್ರತಿಭಟನೆಗೆ ಅವಕಾಶ ನೀಡುವಂತೆ ಕೆಲವರು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಕಮಲ್ ಪಂಥ್ ತಿಳಿಸಿದ್ದಾರೆ.

farmers protest
ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಜಾಥಾ ನಡೆಸಲು ಈ ಹಿಂದೆ ಯಾವಾಗಲೂ ಅವಕಾಶ ಕೊಟ್ಟಿಲ್ಲ. ಹೀಗಾಗಿ ನಾಳೆಯ ಟ್ರ್ಯಾಕ್ಟರ್ ಜಾಥಾಗೆ ಅವಕಾಶ ಇಲ್ಲ. ಇಂದು ವೇಳೆ ರೈತರು ಟ್ರ್ಯಾಕ್ಟರ್‍ನೊಂದಿಗೆ ಬೆಂಗಳೂರು ಪ್ರವೇಶ ಮಾಡಲು ಯತ್ನಿಸಿದರೆ ನಗರದ ಒಳಗಡೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.

ಟ್ರ್ಯಾಕ್ಟರ್ ಪರೇಡ್‍ಗೆ ರೈತರ ಸಜ್ಜು..
ನಾಳೆ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಪರೇಡ್ ನಡೆಯುತ್ತದೆ. ಗಣರಾಜ್ಯೋತ್ಸವ ಪರೇಡ್ ಮಾದರಿಯಲ್ಲಿಯೇ ನಾಳೆ ದೆಹಲಿಯಲ್ಲಿ ರೈತರು ಟ್ರ್ಯಾಕ್ಟರ್ ಜಾಥಾ ನಡೆಸಲು ತೀರ್ಮಾನಿಸಿದ್ದಾರೆ. ದೆಹಲಿ ಮಾದರಿಯಲ್ಲಿಯೇ ಬೆಂಗಳೂರಿನಲ್ಲೂ ಸಾವಿರಾರು ಟ್ರ್ಯಾಕ್ಟರ್, ಎತ್ತಿನಗಾಡಿಗಳೊಂದಿಗೆ ಜಾಥಾ ನಡೆಸಲು ರೈತ ಸಂಘಟನೆಗಳು ತೀರ್ಮಾನಿಸಿವೆ. ಪೊಲೀಸರ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ರೈತ ಸಂಘಟನೆಗಳ ಮುಖಂಡರು ತಿಳಿಸಿದ್ದರು.
ಪೊಲೀಸರು ಟ್ರ್ಯಾಕ್ಟರ್ ಜಾಥಾ ನಡೆಸಲು ಅವಕಾಶ ನೀಡದೇ ಇದ್ದರೆ ಪೊಲೀಸರು ಎಲ್ಲಿ ತಡೆಯುತ್ತಾರೋ ಅಲ್ಲೇ ಟ್ರ್ಯಾಕ್ಟರ್‍ಗಳನ್ನು ಅಡ್ಡ ನಿಲ್ಲಿಸಿ ರೈತರು ಪ್ರತಿಭಟನೆ ನಡೆಸಲಿದ್ದಾರೆ ಎಂದು ರೈತ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್, ಕುರುಬೂರು ಶಾಂತಕುಮಾರ್, ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

Tags: bangaloreFarmares Tractor rallyfarmers organisationskamal panthrepublic day
ShareTweetSendShare
Join us on:

Related Posts

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

ಗಾನಕೋಗಿಲೆ ಮೌನ: ಸಂಗೀತ ಲೋಕದ ಧ್ರುವತಾರೆ ಎಸ್ ಜಾನಕಿ ಇನ್ನಿಲ್ಲ

by Shwetha
July 11, 2026
0

ಭಾರತೀಯ ಚಿತ್ರರಂಗದ ಅಪ್ರತಿಮ ಗಾಯಕಿ ಮತ್ತು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ಗಾನಕೋಗಿಲೆಯಾಗಿ ನೆಲೆಸಿದ್ದ ಎಸ್ ಜಾನಕಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ಕಳೆದ ಕೆಲವು ಸಮಯದಿಂದ ವಯೋಸಹಜ...

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

fifaworldcup2026- ಅಹಂ ಇಲ್ಲದ ಸೂಪರ್‌ಸ್ಟಾರ್ಸ್, ‘ವೈಕಿಂಗ್ಸ್’ ಶೈಲಿಯ ಸಂಭ್ರಮ: ಇದು ನಾರ್ವೆ ಸ್ಟೋರಿ!

by admin
July 11, 2026
0

🏔️ಶ್ವೇತವರ್ಣದಂತೆ ಹೊಳೆಯುವ ಹಿಮಪರ್ವತಗಳೇ ಈ ವೀರಭೂಮಿಯ ಮುಕಟುಮಣಿ. ಪ್ರಕೃತಿಯ ರಮಣೀಯ ಸೌಂದರ್ಯವೇ ಈ ನಾಡಿನ ಮುಖವಾಣಿ. ಸಣ್ಣ ಸಣ್ಣ ದ್ವೀಪಗಳು, ಬೆಟ್ಟಗುಡ್ಡಗಳೇ ಈ ದೇಶದ ಒಡಲು.🌊 ಅಟ್ಲಾಂಟಿಕ್...

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಮಹತ್ವದ ಸೂಚನೆ

by Shwetha
July 11, 2026
0

ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡುವ ವೇಳೆ ಹಣ ನೀಡುವಂತೆ ಯಾರಾದರೂ ಬೇಡಿಕೆ ಇಟ್ಟರೆ ಕೂಡಲೇ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...

ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

ರಾಜಕೀಯ ಒತ್ತಡಕ್ಕೆ ಅಂಜಬೇಡಿ, ಒತ್ತುವರಿ ಮುಕ್ತ ಬೆಂಗಳೂರಿಗೆ ಕರವೇ ಸಾಥ್ :ಪಾದಚಾರಿಗಳ ಹಿತರಕ್ಷಣೆಗೆ ನಿಂತ ಕೃಷ್ಣಬೈರೇಗೌಡರಿಗೆ ನಾರಾಯಣಗೌಡರ ಜೈಕಾರ

by Shwetha
July 11, 2026
0

ಬೆಂಗಳೂರು: ರಾಜಧಾನಿಯ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸಿ, ಸಿಲಿಕಾನ್ ಸಿಟಿಯನ್ನು ಪಾದಚಾರಿಗಳಿಗೆ ಸುರಕ್ಷಿತವಾಗಿಸಲು ಪಣತೊಟ್ಟಿರುವ ಸಚಿವ ಕೃಷ್ಣ ಬೈರೇಗೌಡರ ಬೆಂಬಲಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಧಾವಿಸಿದೆ....

ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ CCTV ಅಳವಡಿಕೆಗೆ ಸಿಎಂ ಸೂಚನೆ

ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ CCTV ಅಳವಡಿಕೆಗೆ ಸಿಎಂ ಸೂಚನೆ

by Shwetha
July 11, 2026
0

ಡಿ. ಕೆ. ಶಿವಕುಮಾರ್ ಅವರು, ರಾಜ್ಯದ ಪ್ರಮುಖ ಮುಜರಾಯಿ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ CCTV ಕ್ಯಾಮೆರಾಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸರ್ಕಾರದ ಪ್ರಕಾರ, ಭಕ್ತರ ಧಾರ್ಮಿಕ ಭಾವನೆಗಳ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram