ಸಾಲಭಾಧೆ : ಮದ್ದೂರಿನಲ್ಲಿ ರೈತ ಆತ್ಮಹತ್ಯೆ Mandya saaksha tv
ಮಂಡ್ಯ : ಸಾಲಭಾದೆಗೆ ತಾಳಲಾರದೇ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯದ ಮದ್ದೂರು ತಾಲೂಕಿನ ಬ್ಯಾಲದಕೆರೆ ಗ್ರಾಮದಲ್ಲಿ ನಡೆದಿದೆ.
45 ವರ್ಷದ ಉಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ರೈತರಾಗಿದ್ದಾರೆ.
ಈತ 4 ಎಕರೆ ಜಮೀನು ಹೊಂದಿದ್ದು,ಕೃಷಿಗಾಗಿ 5 ಲಕ್ಷ ಸಾಲ ಮಾಡಿದ್ದ.
ಸಾಲದ ಒತ್ತಡ ಹೆಚ್ಚಾಗಿ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಕೆಸ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









