ಕೋಳಿಗೆ 463 ರುಪಾಯಿ ಟಿಕೆಟ್ ನೀಡಿದ ಬಸ್ ಕಂಡಕ್ಟ್ರ್
ಒಂದು ಕೋಳಿ ಬೆಲೆ 500 ರಿಂದ 600 ರುಪಾಯಿ ಇರುತ್ತೆ. ಆದ್ರೆ ನೀವು ಕೋಳಿ ಇಟ್ಕೊಂಡು KSRTC ಬಸ್ ಅಲ್ಲಿ ಪ್ರಯಾಣ ಮಾಡ್ತೀರಾ ಅಂದ್ರೆ ಸದಕ್ಕಿಂತ ಹೆಚ್ಚಿಗೆ ದುಡ್ಡು ಇಟ್ಟುಕೊಂಡು ಬಸ್ ಹತ್ತಬೇಕು. ವ್ಯಕ್ತಿಯೊಬ್ಬ ಹೈದ್ರಾಬಾದ್ ನಿಂದ ಗಂಗಾವತಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಸಾಕು ಕೋಳಿಯೊಂದಿಗೆ ಪ್ರಯಾಣಿಸಿದ್ದಾನೆ. ಇದಕ್ಕೆ ಬಸ್ ನಿರ್ವಾಹಕ ಕೋಳಿ ಪ್ರಯಾಣಕ್ಕೆ ಅರ್ಧ ಟಿಕೆಟ್ ನೀಡಿದ್ದಾನೆ. ವಿಶೇಷ ಇರೋದೆ ಇದ್ರಲ್ಲಿ. ಕೋಳಿ ಮಾಲೀಕ ಹೈದ್ರಾಬಾದ್ ನಿಂದ ಗಂಗಾವತಿಗೆ 463 ರುಪಾಯಿ ಪ್ರಯಾಣ ವೆಚ್ಚ ಭರಿಸಿದ್ದಾನೆ. ಸಾಕು ಪ್ರಾಣಿಗಳು ಬಸ್ಸಿನಲ್ಲಿ ಪ್ರಯಾಣಿದರೆ ಅರ್ಧ ಟಿಕೆಟ್ ಚಾರ್ಜ್ ಮಾಡುವ ಆದೇಶವಿದೆ, ಎನ್ನುವ ಆಧಾರದ ಮೇಲೆ ಬಸ್ ಕಂಡಕ್ಟರ್ 463 ರುಪಾಯಿ ಚಾರ್ಜ್ ಮಾಡಿದ್ದು,