ಬ್ಲಾಕ್ ಫಂಗಸ್ ನಿಂದ ಪತ್ನಿ ಸಾವು : ಮಕ್ಕಳಿಗೆ ವಿಷವುಣಿಸಿ ಪತಿ ಆತ್ಮಹತ್ಯೆ belagavi saaksha tv
ಬೆಳಗಾವಿ : ಬ್ಲಾಕ್ ಫಂಗಸ್ ನಿಂದ ಪತ್ನಿ ಸಾವನ್ನಪ್ಪಿದ ಕಾರಣ ಮನನೊಂದು ನಾಲ್ವರು ಮಕ್ಕಳಿಗೆ ವಿಷವುಣಿಸಿ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಬೋರಗಲ್ ಗ್ರಾಮದಲ್ಲಿ ಈ ದಾರುಣ ಘಟನೆ ನಡೆದಿದೆ.
ಸೌಮ್ಯಾ ಹಾದಿಮನಿ (19), ಶ್ವೇತಾಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನ ಹಾದಿಮನಿಗೆ (8), ಗೋಪಾಲ ಹಾದಿಮನಿ(46) ಮೃತರಾಗಿದ್ದಾರೆ.
ಜುಲೈ 6 ರಂದು ಗೋಪಾಲ್ ಪತ್ನಿ ಜಯಾ ಬ್ಲಾಕ್ ಫಂಗಸ್ ಗೆ ಬಲಿಯಾಗಿದ್ದರು.
ಇದರಿಂದ ತೀವ್ರ ಮನನೊಂದಿದ್ದ ಗೋಪಾಲ್ ಹಾದಿಮನಿ ಮಕ್ಕಳಿಗೆ ವಿಷವುಣಿಸಿ, ತಾವು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ದುರ್ದೈವಿ ಗೋಪಾಲ್ ಹಾದಿಮನಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು ಎಂದು ಹೇಳಲಾಗಿದೆ.
ಇನ್ನು ವಿಷಯ ತಿಳಿದು ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿದ್ದಾರೆ.