ಮಗುವನ್ನು ನೋಡಲು ಬಿಡಲಿಲ್ಲವೆಂದು ಬೆಂಕಿ ಹಚ್ಚಿಕೊಂಡ ತಂದೆ
ಬೆಂಗಳೂರು: ತನ್ನ ಮಗುವನ್ನು ನೋಡಲು ಬಿಡಲಿಲ್ಲವೆಂದು ತಂದೆಯೊಬ್ಬ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಯುವರಾಜ ಮೃತ ದುರ್ದೈವಿ. ಪತ್ನಿ ಮಗುವನ್ನು ನೋಡಲು ಬಿಡಲಿಲ್ಲವೆಂದು, ಪತ್ನಿಯ ಮನೆ ಮುಂದೆ ಬೆಂಕಿ ಹಚ್ಚಿಕೊಂಡಿದ್ದ, ಇದರಿಂದ ತೀರ್ವಗಾಯಗೊಂಡಿದ್ದ ಯುವರಾಜನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗಿದ ಸಾವನ್ನಪ್ಪಿದ್ದಾನೆ.
ನಡೆದಿದ್ದು ಏನು? : 5 ವರ್ಷದ ಹಿಂದೆ ಯುವರಾಜ, ಶ್ವೇತಾ ಪ್ರೀತಿಸಿ ಮದುವೆಯಾಗಿದ್ದರು. ಯುವರಾಜನಿಗೆ ದುಶ್ಚಟ ಇದ್ದಿದ್ದರಿಂದ ತನ್ನ ಮಗುವಿನ ಜೊತೆ ಶ್ವೇತಾ ತವರು ಮನೆಗೆ ತೆರಳಿದ್ದರು. ಖಾಸಗಿ ಪತ್ರಿಕೆಯೊಂದರಲ್ಲಿ ಕೆಲಸಮಾಡಿಕೊಂಡಿದ್ದ ಯುವರಾಜ ದಾವಣಗೆರೆಯಿಂದ ಬೆಂಗಳೂರಿಗೆ ಮಗುವನ್ನ ನೋಡಲು ಏ.15 ರಂದು ಬಂದಿದ್ದ, ಆದರೆ ಮಗುವನ್ನು ನೋಡಲು ಶ್ವೇತ ಬಿಟ್ಟಿರಲಿಲ್ಲ. ಮಗುವನ್ನ ನೋಡಲು ಪತ್ನಿ ಶ್ವೇತಾ ಬಿಡದ್ದಕ್ಕೆ ಯುವರಾಜ ಚಾಮುಂಡೇಶ್ವರಿ ನಗರದಲ್ಲಿರುವ ಪತ್ನಿ ನಿವಾಸದ ಬಳಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ.
ಶೇ. 50% ರಷ್ಟು ದೇಹ ಸುಟ್ಟಿದ್ದ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವರಾಜ ಸಾವನ್ನಪ್ಪಿದ್ದಾನೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.