ಫೆಬ್ರವರಿ 14 ರಂದು ಪ್ರೇಮಿಗಳ ದಿನಾಚರಣೆ ಮಾಡುವ ಬದಲು, ಪುಲ್ವಾಮ ಹುತಾತ್ಮರ ದಿನಾಚರಣೆ ಆಚರಿಸುವಂತೆ ಭಜರಂಗದಳ ಸಂಘಟನೆ ಆಗ್ರಹಿಸಿದೆ. ಪ್ರೇಮಿಗಳ ದಿನಾಚರಣೆಯನ್ನ ತೀವ್ರವಾಗಿ ಖಂಡಿಸುತ್ತಾ ಬಂದಿರುವ ಭಜರಂಗದಳ ಸಂಘಟನೆ ಈ ಬಾರಿಯೂ ಮಂಗಳೂರಿನ ಅಂಗಡಿಗಳಿಗೆ ತೆರಳಿ ಯಾರೂ ಗ್ರೀಟಿಂಗ್ ಕಾರ್ಡ್‍ಗಳ ಮಾರಾಟ ಮಾಡದಂತೆ ಮನವಿ ಮಾಡಿಕೊಂಡಿದೆ.
ನಾಳೆ ಪಾಶ್ಚಾತ್ಯರ ಅರ್ಥವಿಲ್ಲದ ವ್ಯಾಲೆಂಟೇನ್ಸ್ ಡೇಯನ್ನ ಆಚರಿಸುವ ಬದಲು, ನಮ್ಮ ದೇಶಕ್ಕಾಗಿ ಪುಲ್ವಾಮಾದಲ್ಲಿ ಹುತಾತ್ಮರಾದ ಸೈನಿಕರ ದಿನಾಚರಣೆ ಮಾಡಿ ಎಂದು ಮನವಿ ಮಾಡಿದೆ. ಪ್ರೇಮಿಗಳ ದಿನದ ಬದಲು ಹುತಾತ್ಮರ ದಿನಾಚರಣೆಯನ್ನ ಮಾಡಿ ರಾಷ್ಟ್ರೀಯತೆಯ ಪರವಾಗಿ ನಿಲ್ಲುವಂತೆ ಮನವಿ ಮಾಡಿದ್ದಾರೆ. ಹಾಗೇ ಫೆಬ್ರವರಿ 14 ಅನ್ನು ಪುಲ್ವಾಮಾ ಹುತಾತ್ಮ ರಾಷ್ಟ್ರೀಯ ದಿವಸ್ ಎಂದು ಘೋಷಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.