FiFa WorldCup ಕ್ವಾರ್ಟರ್ ಫೈನಲ್ ನಲ್ಲಿ ಅಗ್ರ ತಂಡಗಳ ನಡುವೆ ಅಗ್ನಿಪರೀಕ್ಷೆ..!!
ಕತಾರ್ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ರೋಚಕ ಘಟ್ಟ ತಲುಪಿದೆ. ಈ ಬಾರಿಯ ವಿಶ್ವಕಪ್ನಲ್ಲಿ ಅನಿರೀಕ್ಷಿತ ಫಲಿತಾಂಶಗಳು ಹೊರ ಬಂದಿವೆ. ಫುಟ್ಬಾಲ್ ಅರಂಭವಾಗಿ ಎರಡು ವರೆ ವಾರ ಕಳೆದಿದೆ ಅಷ್ಟೆ.ಆದರೆ ಟೂರ್ನಿ ನಿರ್ಣಾಯಕ ಘಟ್ಟ ತಲುಪಿದೆ.
ಶುಕ್ರವಾರದಿಂದ ಕ್ವಾರ್ಟರ್ ಫೈನಲ್ ಆರಂಭಗೊಳ್ಳಲಿದೆ. ಟೂರ್ನಿಯ ಆರಂಭದಲ್ಲಿ 32 ತಂಡಗಳು 8 ವಿವಿಧ ಗುಂಪುಗಳಲ್ಲಿ ಸೆಣಸಿದ್ದವು.ಇದೀಗ ಕ್ವಾರ್ಟರ್ ಫೈನಲ್ ಹಂತದಲ್ಲಿ 8 ತಂಡಗಳು ಮಾತ್ರ ಉಳಿದಿವೆ.
ದಾಖಲೆಯ 5 ಬಾರಿ ಗೆದ್ದಿರುವ ಬ್ರೆಜಿಲ್, 2 ಬಾರಿ ಚಾಂಪಿಯನ್ ಅರ್ಜೆಂಟಿನಾ, 56 ವರ್ಷಗಳ ಬಳಿಕ ಪ್ರಶಸ್ತಿ ಗೆಲ್ಲಲು ಕಾಯುತ್ತಿರುವ ಇಂಗ್ಲೆಂಡ್,ಇನ್ನು ಮೊದಲ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಮೊರಾಕ್ಕೊ, ನೆದರ್ಲೆಂಡ್, ಪೋರ್ಚುಗಲ್, ಕ್ರೊವೇಷಿಯಾ ಕ್ವಾರ್ಟರ್ ಫೈನಲ್ನಲ್ಲಿ ಅಗ್ನಿ ಪರೀಕ್ಷೆಯನ್ನು ಎದುರಿಸಲಿವೆ.
ಫುಟ್ಬಾಲ್ ದಂತಕತೆಗಳಾದ ಲಿಯೊನೆಲ್ ಮಸ್ಸಿ ಮತ್ತು ಪೋರ್ಚುಗಲ್ ತಂಡ ತಾರಾ ಆಟಗಾರ ರೊನಾಲ್ಡೊ ಅವರುಗಳಿಗೆ ಇದು ಕೊನೆಯ ವಿಶ್ವಕಪ್ ಆಗಿದೆ. ಹೀಗಾಗಿ ಈ ಎರಡೂ ತಂಡಗಳ ಆಟಗಾರರು ತಮ್ಮ ನಾಯಕರುಗಳಿಗೆ ಪ್ರಶಸ್ತಿ ಗೆಲ್ಲಲು ಪಣ ತೊಟ್ಟಿದ್ದಾರೆ.