ನಾಳೆಯಿಂದ ಐಪೆಲ್ ಹಂಗಾಮಾ ಆರಂಭವಾಗಲಿದ್ದು, ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಮಧ್ಯೆ ಕಾದಾಟ ನಡೆಯಲಿದೆ.
ಎರಡೂ ತಂಡಗಳು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕಾದಾಟ ನಡೆಸಲಿವೆ. ಆದರೆ, ಹಳೆಯ ದಾಖಲೆಗಳನ್ನು ನೋಡಿದರೆ ಬೆಂಗಳೂರು ಎದುರು ಚೆನ್ನೈನ ಹೆಚ್ಚು ಗೆಲುವು ಸಾಧಿಸಿದೆ. ಈ ಬಾರಿ ಸಿಎಸ್ ಕೆಯ ತವರು ನೆಲದಲ್ಲಿ ಮೊದಲ ಪಂದ್ಯ ನಡೆಯುತ್ತಿದ್ದು, ಆರ್ ಸಿಬಿ ಕೂಡ ಬಲಿಷ್ಠ ತಂಡದಿಂದ ಕಣಕ್ಕೆ ಇಳಿಯುತ್ತಿದೆ.
ಶತಾಯಗತಾಯ ರುತುರಾಜ್ ಪಡೆಯನ್ನು ಸೋಲಿಸುವ ಗುರಿ ಇಟ್ಟುಕೊಂಡು ಕಣಕ್ಕಿಳಿಯುತ್ತಿದೆ. ಚೆನ್ನೈನ ಪಿಚ್ ಸ್ಪಿನ್ನರ್‌ಗಳಿಗೆ ಸ್ವರ್ಗ ಎಂದು ಪರಿಗಣಿಸಲಾಗಿದೆ. ಈ ಮೈದಾನದಲ್ಲಿ ಸ್ಪಿನ್ನರ್‌ಗಳಿಗೆ ಸಾಕಷ್ಟು ನೆರವು ಸಿಗುತ್ತದೆ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಕಳೆದ ಐಪಿಎಲ್ ಸೀಸನ್ನ ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 170 ರನ್ ಆಗಿತ್ತು. ಇಲ್ಲಿ ಯಾವ ತಂಡ ಟಾಸ್ ಗೆದ್ದರೂ ಮೊದಲು ಬೌಲಿಂಗ್ ಮಾಡಲು ನೋಡುತ್ತದೆ. ಎರಡನೇ ಇನ್ನಿಂಗ್ಸ್ ವೇಳೆಗೆ ಪಿಚ್ನಲ್ಲಿ ಬದಲಾವಣೆ ಕಂಡುಬರುವುದರಿಂದ ಇಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡಿದ ತಂಡಕ್ಕೆ ಗೆಲುವಿಗಿಂತ ಹೆಚ್ಚಾಗಿ ಸೋಲೇ ಸಿಕ್ಕಿದೆ.
ನಾಳೆ ಶೇ. 2ರಷ್ಟು ಮಳೆಯಾಗುವ ಸಾಧ್ಯತೆಯೂ ಇದೆ. ಪಂದ್ಯಕ್ಕೆ ಒಂದು ದಿನ ಮೊದಲು ಚೆನ್ನೈನಲ್ಲಿ ಭಾರೀ ಮಳೆ ಬೀಳಬಹುದು ಎಂದು ವರದಿ ಕೂಡ ಆಗಿದೆ.