ಹುಬ್ಬಳ್ಳಿ–ಧಾರವಾಡದಲ್ಲಿ ಮೇ 21ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

1 min read

ಹುಬ್ಬಳ್ಳಿ–ಧಾರವಾಡದಲ್ಲಿ ಮೇ 21ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಹುಬ್ಬಳ್ಳಿ : ಮೇ 21ರಿಂದ ಹುಬ್ಬಳ್ಳಿ–ಧಾರವಾಡದಲ್ಲಿ 3 ದಿನಗಳ ಕಾಲ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಹಾಗೂ ಕಿರುಚಿತ್ರಗಳ ಸ್ಪರ್ಧೆಯನ್ನ ಹಮ್ಮಿಕೊಳ್ಳಲಾಗಿದೆ. ನವ ಕರ್ನಾಟಕ ಚಲನಚಿತ್ರ ಅಕಾಡೆಮಿಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಸ್ಫರ್ಧೆ ಆಯೋಜನೆಗೊಂಡಿದೆ.  ನಿರ್ಮಾಪಕ ಸಾ.ರಾ.ಗೋವಿಂದು ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ ಈ ಬಗ್ಗೆ ಇನ್ನಷ್ಟು ಮಾಹಿತಿ ನೀಡಿರುವ ಗೋವಿಂದು ಅವರು ‌121 ಸಿನಿಮಾಗಳ ಪ್ರದರ್ಶನ ನಡೆಯಲಿದ್ದು, ಜಿಲ್ಲಾ ಕೇಂದ್ರಗಳಲ್ಲಿಯೂ ಸಿನಿಮಾ ಉತ್ಸವಗಳು ನಡೆಯಬೇಕು. ವಾಣಿಜ್ಯ ಮಂಡಳಿ ಸಹಕಾರ ನೀಡುತ್ತದೆ ಎಂದರು.

60ನೇ ವಯಸ್ಸಿನಲ್ಲಿ 2ನೇ ಮದುವೆ ಹುಚ್ಚು..! ಪಟ್ಟು ಹಿಡಿದು ಹೈ ವೋಲ್ಟೇಜ್ ವಿದ್ಯುತ್ ಕಂಬವೇರಿದ ಅಜ್ಜ : VIDEO VIRAL

ಇನ್ನೂ ಚಿತ್ರೋತ್ಸವದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್‌ ಭಾಷೆಗಳ ಸಿನಿಮಾಗಳನ್ನ ಪ್ರದರ್ಶಿಸಲಾಗುವುದು ಎಂದೂ ಕೂಡ ತಿಳಿಸಿದ್ದಾರೆ. ಇನ್ನೂ ಹುಬ್ಬಳ್ಳಿಯಲ್ಲಿ ನಾಲ್ಕು ಸ್ಕ್ರೀನ್‌, ಧಾರವಾಡದಲ್ಲಿ ಸೃಜನಾ ಕಲಾಮಂದಿರ, ಕಲಾಭವನ, ನೌಕರರ ಭವನ ಮತ್ತು ರಂಗಾಯಣದಲ್ಲಿ ಸಿನಿಮಾಗಳು ಪ್ರದರ್ಶನವಾಗಲಿವೆ. ಭಾರತ, ಮಾಲ್ಡೀವ್ಸ್‌ ಮತ್ತು ಲ್ಯಾಟಿನ್‌ ಅಮೆರಿಕ ದೇಶಗಳ ಸಿನಿಮಾಗಳು ಇರಲಿವೆ ಎಂದು ಚಿತ್ರೋತ್ಸವದ ಉಸ್ತುವಾರಿ ಅಲ್ತಾಫ್‌ ಜಹಾಂಗೀರ್‌ ತಿಳಿಸಿದ್ದಾರೆ.

ಇದೇ ವೇಳೆ 14ರಿಂದ 18 ವರ್ಷದ ಒಳಗಿನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿರಲಿದ್ದು, ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 12ರ ತನಕ ಐದು ಪ್ರದರ್ಶನಗಳಿರಲಿವೆ. ಮೇ 21ರಂದು ಬೆಳಿಗ್ಗೆ 9 ಗಂಟೆಗೆ ನವೀನ್‌ ಹೋಟೆಲ್‌ನಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. 300 ಜನ ಅಂತರರಾಷ್ಟ್ರೀಯ ಅತಿಥಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ದುರಹಂಕಾರದಲ್ಲಿ ಯದ್ವಾತದ್ವಾ ಮಾತನಾಡಿ ಮಹಿಳಾ PSI ಕೈಲಿ ಒದೆ ತಿಂದ ಯುವತಿ: Video Viral

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd