ಹಿಂದಿ ಚಲನಚಿತ್ರ ನಿರ್ಮಾಪಕರ ಪತ್ನಿ ಮತ್ತು ಮಗಳು ಆತ್ಮಹತ್ಯೆಗೆ ಶರಣು

1 min read
filmmaker Santosh Gupta

ಹಿಂದಿ ಚಲನಚಿತ್ರ ನಿರ್ಮಾಪಕರ ಪತ್ನಿ ಮತ್ತು ಮಗಳು ಆತ್ಮಹತ್ಯೆಗೆ ಶರಣು

ಮುಂಬೈನ ಉಪನಗರ ಪ್ರದೇಶದ ಅಂಧೇರಿ (ಪಶ್ಚಿಮ) ನಲ್ಲಿ ಹಿಂದಿ ಚಲನಚಿತ್ರ ನಿರ್ಮಾಪಕ ಸಂತೋಷ್ ಗುಪ್ತಾ ಅವರ ಪತ್ನಿ ಮತ್ತು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಮುಂಬೈ ಪೊಲೀಸರು ಇದರ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದಾರೆ. ತಾಯಿಯ ಹೆಸರು ಅಸ್ಮಿತಾ ಮತ್ತು ಮಗಳ ಹೆಸರು ಸೃಷ್ಟಿ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದಿ ಚಲನಚಿತ್ರ ನಿರ್ಮಾಪಕ ಸಂತೋಷ್ ಗುಪ್ತಾ ಅವರು ‘ಫರಾರ್’, ‘ರೋಮಿ: ದಿ ಹೀರೋ’ ಮತ್ತು ‘ಆಜ್ ಕಿ ಔರತ್’ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
filmmaker Santosh Gupta

ಅಶ್ಮಿತಾ ಮತ್ತು ಸೃಷ್ಟಿ ಅವರು ಅಂಧೇರಿ (ಪಶ್ಚಿಮ) ದ ಡಿ.ಎನ್ ನಗರದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ, ಅವರು ತಮ್ಮ ಅಪಾರ್ಟ್ಮೆಂಟ್ನಲ್ಲಿ ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದರು. ಜ್ವಾಲೆಗಳನ್ನು ನೋಡಿದ ನೆರೆಹೊರೆಯವರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ತಾಯಿ-ಮಗಳನ್ನು ಕೂಪರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ಅಸ್ಮಿತಾ ಅವರು ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಅವರ ಮಗಳು 70 ಪ್ರತಿಶತದಷ್ಟು ಸುಟ್ಟಗಾಯಗಳೊಂದಿಗೆ ಬುಧವಾರ ಐರೋಲಿ ನ್ಯಾಷನಲ್ ಬರ್ನ್ಸ್ ಸೆಂಟರ್‌ನಲ್ಲಿ ಕೊನೆಯುಸಿರೆಳೆದರು.
filmmaker Santosh Gupta

ಆತ್ಮಹತ್ಯೆಗೆ ಕಾರಣವೇನು ?

ಪ್ರಾಥಮಿಕ ತನಿಖೆಯಲ್ಲಿ ಅಸ್ಮಿತಾ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. ಇದರಿಂದ ನೊಂದಿದ್ದ ಆಕೆ ಆತ್ಮಹತ್ಯೆ ಮಾಡುವ ನಿರ್ಧಾರ ಕೈಗೊಂಡರು. ಅದೇ ಸಮಯದಲ್ಲಿ, ಸೃಷ್ಟಿಗೆ ತಾಯಿಯ ಅನಾರೋಗ್ಯದ ಆಘಾತವನ್ನು ಸಹಿಸಲಾಗಲಿಲ್ಲ ಮತ್ತು ಅವರು ಆತ್ಮಹತ್ಯೆಗೆ ಶರಣಾದರು ಎಂದು ಹೇಳಲಾಗಿದೆ. ಡಿಎನ್ ನಗರ ಪೊಲೀಸ್ ಠಾಣೆಯ ಹಿರಿಯ ತನಿಖಾಧಿಕಾರಿ ಭರತ್ ಗೈಕ್ವಾಡ್ ಅವರು ತಮ್ಮ ಹೇಳಿಕೆಯಲ್ಲಿ ಎರಡು ಪ್ರತ್ಯೇಕ ಆಕಸ್ಮಿಕ ಸಾವಿನ ಪ್ರಕರಣಗಳನ್ನು ದಾಖಲಿಸಿದ್ದು, ಪ್ರಕರಣದ ತನಿಖೆ ಆರಂಭಿಸಿರುವುದಾಗಿ ಹೇಳಿದ್ದಾರೆ.

#filmmaker #SantoshGupta

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd