ಬೆಂಗಳೂರು: ಸ್ಯಾಂಡಲ್‍ವುಡ್ ಡ್ರಗ್ಸ್ ದಂಧೆ ಸಂಬಂಧ ನಟಿ ರಾಗಿಣಿ ದ್ವಿವೇದಿ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ. ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ರಾಗಿಣಿ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ರಾಗಿಣಿ ವಿಚಾರಣೆ ನಡೆಯುತ್ತಿದೆ. ಕಾಟನ್‍ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಸಮಯ ಬರಲಿ ಎಲ್ಲವನ್ನೂ ಹೇಳುತ್ತೇವೆ ಎಂದಿದ್ದಾರೆ.
ರಾಗಿಣಿ ಅವರ ಮನೆ ಮೇಲೆ ದಾಳಿ ಆಗಿದೆ. ದಾಳಿ ವೇಳೆ ಏನೂ ಸಿಕ್ಕಿಲ್ಲ. 2 ಲ್ಯಾಪ್‍ಟಾಪ್, ಮೊಬೈಲ್ ಜಪ್ತಿ ಮಾಡಲಾಗಿದೆ. ತನಿಖಾ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲು ಆಗಲ್ಲ. ಹಂತ ಹಂತವಾಗಿ ತನಿಖೆ ನಡೆಸುತ್ತೇವೆ ಕಮಲ್ ಪಂತ್ ಸ್ಪಷ್ಟನೆ ನೀಡಿದ್ದಾರೆ.
ಸಿಸಿಬಿ ಪೊಲೀಸರು ರಾಗಿಣಿ ವಿಚಾರಣೆ ಮುಂದುವರೆಸಿದ್ದಾರೆ. ರಾಗಿಣಿಯನ್ನು ಬಚಾವ್ ಮಾಡಲು ರಾಜಕಾರಣಿಗಳಿಂದ ಒತ್ತಡ ಬಂದಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಲು ಕಮಲ್ ಪಂತ್ ನಿರಾಕರಿಸಿದ್ದಾರೆ.
ಇದೇ ವೇಳೆ, ಇಂದು ವಿಚಾರಣೆ ನಡೆಸಿ ರಾಗಿಣಿಯನ್ನು ಮನೆಗೆ ಕಳಿಸಿ ನಾಳೆ ಬರಲು ಹೇಳಬಹುದು, ಇಲ್ಲವೇ ಎಫ್‍ಐಆರ್ ಆಧಾರದ ಮೇಲೆ ಬಂಧಿಸಲು ಸಿಸಿಬಿ ಪೊಲೀಸರಿಗೆ ಅವಕಾಶ ಇದೆ.
ಆದರೆ, ರಾಜಕಾರಣಿಗಳ ಒತ್ತಡದಿಂದ ರಾಗಿಣಿ ವಿರುದ್ಧ ಬರೀ ಎಫ್‍ಐಆರ್ ಹಾಕಿ ಬಿಟ್ಟು ಕಳಿಸಲಾಗುತ್ತಿದೆಯೇ ? ಡ್ರಗ್ಸ್ ಆಪತ್ತನಿಂದ ರಾಗಿಣಿ ಬಚಾವಾಗ್ತಾರಾ ? ಕಾಲ್ ಮಾಡಿ ಸಿಸಿಬಿ ಪೊಲೀಸರ ಮೇಲೆ ಒತ್ತಡ ಹೇರಿದವರು ಯಾರು ಎಂಬ ಪ್ರಶ್ನೆ ಎದುರಾಗಿದೆ.
ಇದು ಬರೀ ಫುಟ್‍ಬಾಲ್ ಆಟಗಾರನ ಕಥೆಯಲ್ಲ.. ವರ್ಣಭೇದದ ವಿರುದ್ದ ಕ್ರಾಂತಿಯ ಕಿಡಿ ಹಚ್ಚಿದ್ಧ ಬುಲೆಟ್ ಪ್ಲೇಯರ್..!
ಇದು ಬರೀ ಒಂದು ಫುಟ್‍ಬಾಲ್ ಕಥೆಯಲ್ಲ..! ಒಬ್ಬ ಕ್ರಾಂತಿಕಾರಿ ಕಾಲ್ಚೆಂಡು ಆಟಗಾರನ ಬದುಕಿನ ಯಾನ. ಆಟದ ಜೊತೆಗೆ ವರ್ಣಭೇದ ನೀತಿಯ ವಿರುದ್ದ ಹೋರಾಡುತ್ತಿರುವ ಧೀರ ಸೇನಾನಿಯ ಬದುಕಿನ...








