ಕೋಟಿಗೊಬ್ಬ-3 ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಎಫ್ ಐಆರ್ kotigobba-3 saaksha tv
ಚಿತ್ರದುರ್ಗ : ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-3 ಸಿನಿಮಾದ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಚಿತ್ರದುರ್ಗದ ಸಿನಿಮಾ ವಿತರಕ ಖಾಜಾಪೀರ್, ನಿರ್ಮಾಪಕ ಸೂರಪ್ಪಬಾಬು ವಿರುದ್ಧ ದೂರು ದಾಖಲಾಗಿದ್ದಾರೆ.
ಖಾಜಾಪೀರ್ ಹಾಗೂ ನಿರ್ಮಾಪಕ ಸೂರಪ್ಪ ನಡುವೆ ಚಿತ್ರದುರ್ಗ, ದಾವಣಗೆರೆ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಕೋಟಿಗೊಬ್ಬ-3 ಚಿತ್ರ ವಿತರಣೆ ವಿಚಾರವಾಗಿ 2 ಕೋಟಿ 90 ಲಕ್ಷ ರೂಪಾಯಿಗಳಿಗೆ ಒಪ್ಪಂದವಾಗಿತ್ತು.
ಈ ಒಡಂಬಡಿಕೆಯಂತೆ ಖಾಜಾಪೀರ್, 60 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ನೀಡಿದ್ದಾರೆ.
ಆದರೆ ಸೂರಪ್ಪಬಾಬು ಆ ಅಗ್ರಿಮೆಂಟ್ ನಂತೆ ನಡೆದುಕೊಳ್ಳದೇ ಬೇರೆಯವರಿಗೆ ಚಿತ್ರವನ್ನು ನೀಡಿದ್ದಾರೆ.
ಹೀಗಾಗಿ ನಮ್ಮ ಹಣ ನೀಡುವಂತೆ ಕೇಳಿದರೆ ವಾಪಾಸ್ ಕೊಡದೇ ದೌರ್ಜನ್ಯದಿಂದ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ.
ಅಲ್ಲದೇ ಪ್ರಾಣಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಚಿತ್ರದುರ್ಗ ನಗರ ಠಾಣೆಯಲ್ಲಿ ಖಾಜಾಪೀರ್ ದೂರು ನೀಡಿದ್ದಾರೆ.
ಖಾಜಾಪೀರ್ ನೀಡಿರುವ ದೂರಿನ ಮೇರೆಗೆ ನಿರ್ಮಾಪಕ ಸೂರಪ್ಪಬಾಬು ವಿರುದ್ಧ ಚಿತ್ರದುರ್ಗ ನಗರ ಠಾಣೆಯಲ್ಲಿ ಐಪಿಸಿ ಕಲಂ 506 ಹಾಗೂ 504 ಅಡಿ ಎಫ್ಐಆರ್ ದಾಖಲಾಗಿದೆ.