National News – ಸ್ವೀಟ್ ಶಾಪ್ ಗೆ ಬೆಂಕಿ – ಇಬ್ಬರ ಸಾವು
ಬೆಳಗಿನ ಜಾವ 4 ಗಂಟೆಗೆ ಸ್ವೀಟ್ ಶಾಪ್ ಒಂದಕ್ಕೆ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಕಾನ್ಪುರದ ಕಹೂ ಮಾರುಕಟ್ಟೆಯಲ್ಲಿ ನಡೆದಿದೆ. Fire breaks out at sweets shop in Kanpur, 2 dead
ರಾಜ್ ಕಿಶೋರ್ ಸ್ವೀಟ್ ಶಾಪ್ ಸಂಪೂರ್ಣ ಸುಟ್ಟು ಭಸ್ಮವಾಗಿದ್ದು ಅಂಗಡಿಯಲ್ಲಿ ಮಲಗಿದ್ದ ಕೆಲಸಗಾರರಾದ ಶ್ಯಾಮ್ ನಾರಾಯಣ್ ಮತ್ತು ಸನ್ನಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಮೋಹಿತ್ ಎನ್ನುವ ಕೆಲಸಗಾರ ಗಾಯಗೊಂಡಿದ್ದು ಆತನನ್ನ ಸ್ಥಳಿಯ ಆಸ್ಪತ್ರೆಗೆ ಸೇರಿಸಲಾಗಿದೆ.
ಮೂರು ಅಂತಸ್ಥಿನ ಕಟ್ಟಡದಲ್ಲಿ, ಎಣ್ಣೇ ತುಪ್ಪ ಡಾಲ್ಡ್ ದಂತಹ ವಸ್ತುಗಳು ಹೆಚ್ಚಾಗಿದ್ದ ಕಾರಣ ಬೆಂಕಿ ವ್ಯಾಪಕವಾಗಿ ಆವರಿಸಿದೆ. 10 ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಬೆಂಕಿ ನಂದಿಸಲು ಹರಸಾಹಸ ಪಟ್ಟಿವೆ.