Uttar Pradesh | 2adults & 4children of a family lost their lives in a fire that was ignited due to short circuit in an inverter factor, in Padham town of Jasrana area under Firozabad district. 18 fire tenders reached on spot along with Police: Ashish Tiwari, SP Firozabad Police pic.twitter.com/nnIaYYt7xh
— ANI UP/Uttarakhand (@ANINewsUP) November 29, 2022
fire in factory ಕಾರ್ಖಾನೆ ಕಟ್ಟಡದ ನೆಲಮಹಡಿಯಲ್ಲಿರುವ Inverter ಇನ್ವರ್ಟರ್ ಕಾರ್ಖಾನೆ ಬೆಂಕಿ ಕಾಣಿಸಿಕೊಂಡಿದ್ದು ಅದೇ ಕಟ್ಟಡದಲ್ಲಿ ಕುಟುಂಬ ವಾಸವಿದ್ದ ಮಹಡಿಯವರೆಗೂ ಬೆಂಕಿ ತಗುಲಿದ್ದು ಒಂದೆ ಕುಟುಂಬದ 6 ಜನ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದಿದೆ.
ಈ ಅಪಗಾತದಲ್ಲಿ ಅದೇ ಕುಟುಂಬದ ಮೂವರು ಸದಸ್ಯರು ಬೆಂಕಿ ಅವಘಡದಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬೆಂಕಿ ಅವಘಡವು ಇನ್ವರ್ಟರ್ ಕಾರ್ಖಾನೆಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಕಾಣಿಸಿಕೊಂಡಿದ್ದು ಬೆಂಕಿ ಹೊತ್ತಿ ಉರಿದ ತೀವ್ರತೆ ಹೆಚ್ಚಿದ್ದರಿಂದ ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ ಕುಟುಂಬದ ಮಹಡಿಗೂ ವ್ಯಾಪಿಸಿತ್ತು .
ಈ ಬೆಂಕಿಯನ್ನು ನಂದಿಸಲು 18 ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದ್ದು ಬೆಂಕಿಯನ್ನು ನಂದಿಸುವಲ್ಲಿ ತೋಡಗಿದ್ದವು ಎಂದು ಫಿರೋಜಾಬಾದ್ನ ಪೊಲೀಸ್ ವರಿಷ್ಠಾಧಿಕಾರಿ ಆಶಿಶ್ ತಿವಾರಿ ತಿಳಿಸಿದ್ದಾರೆ.
ಕಾರ್ಖಾನೆಯಲ್ಲಿನ ಬೆಂಕಿಗೆ ಕಾರಣ ಎಂಬ ಅನುಮಾನವಿದ್ದು, ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅವಘಡದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದು, ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.