ಹಿಟ್ ಮ್ಯಾನ್ ರೋಹಿತ್ ಶರ್ಮಾಗೆ ಅಗ್ನಿ ಪರೀಕ್ಷೆ Rohit Sharma saaksha tv
ಭಾರತದ ಟಿ 20 ಮತ್ತು ಏಕದಿನ ಕ್ರಿಕೆಟ್ ನಲ್ಲಿ ಹೊಸ ಯುಗ ಆರಂಭವಾಗಿದೆ. ಇನ್ಮುಂದೆ ಟೆಸ್ಟ್ ಕ್ರಿಕೆಟ್ ಹೊರೆತು ಪಡಿಸಿ ಹಿಟ್ ಮ್ಯಾಚ್ ರೋಹಿತ್ ಶರ್ಮಾ ಸಾರಥ್ಯದಲ್ಲಿ ಟೀಂ ಇಂಡಿಯಾ ಮುನ್ನಡೆಯಲಿದೆ. ಸೀಮಿತ ಓವರ್ ಗಳ ನಾಯಕರಾಗಿರುವ ರೋಹಿತ್ ಶರ್ಮಾಗೆ ಟೆಸ್ಟ್ ತಂಡದ ಉಪನಾಯಕನ ಪಟ್ಟ ಸಿಕ್ಕಿರೋದು ಲಾಟರ್ ಹೊಡೆದಂತೆ ಆಗಿದೆ.
ಇದರೊಂದಿಗೆ ಟಿ 20, ಏಕದಿನ ಮತ್ತು ಟೆಸ್ಟ್ ನಲ್ಲಿ ರೋಹಿತ್ ಶರ್ಮಾ ಜಲ್ವಾ ಶುರುವಾಗಿದೆ. ಆದ್ರೆ ರೋಹಿತ್ ಶರ್ಮಾ ಹಾದಿ ಸುಗಮವಾಗಿಲ್ಲ. ಪ್ರತಿ ಹೆಜ್ಜೆಯಲ್ಲಿ ಅಗ್ನಿ ಪರೀಕ್ಷೆ ಎದುರಾಗಳಿದೆ.
ಹೌದು..! ಸದ್ಯ ಟೀಂ ಇಂಡಿಯಾ ಇದೇ 16 ರಂದು ಸೌತ್ ಆಫ್ರಿಕಾ ಪ್ರವಾಸ ಕೈಕೊಳ್ಳಲಿದೆ. ಅಲ್ಲಿ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನ ಆಡಲಿದೆ. ಟೆಸ್ಟ್ ಸರಣಿಗಾಗಿ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಗೆ ವೈಸ್ ಕ್ಯಾಪ್ಟನ್ ಪಟ್ಟ ನೀಡಿದೆ. ಬ್ಯಾಡ್ ಫಾರ್ಮ್ ಹಿನ್ನೆಲೆ ಉಪನಾಯಕನ ಪಟ್ಟದಿಂದ ರಹಾನೆಯನ್ನ ವಜಾಗೊಳಿಸಲಾಗಿದೆ.
ಆಫ್ರಿಕಾ ವಿರುದ್ಧ ಸರಣಿಯಿಂದ ಟೆಸ್ಟ್ ತಂಡದ ವೈಸ್ ಕ್ಯಾಪ್ಟನ್ ಪಟ್ಟ ಅಲಂಕರಿಸಲಿರುವ ರೋಹಿತ್ ಗೆ ಇದು ಮೊದಲ ಅಗ್ನಿ ಪರೀಕ್ಷೆಯಾಗಿದೆ. ಎಲ್ಲರಿಗೂ ತಿಳಿದಂತೆ ರೋಹಿತ್ ಗೆ ಟೆಸ್ಟ್ ನಲ್ಲಿ ಹೇಳಿಕೊಳ್ಳುವ ರೆಕಾರ್ಡ್ ಇಲ್ಲ. ಅದರಲ್ಲೂ ಸೌತ್ ಆಫ್ರಿಕಾ ಪಿಚ್ ಗಳಲ್ಲಿ ರೋಹಿತ್ ಬ್ಯಾಟ್ ಅಬ್ಬರಿಸಿರೋದು ತೀರಾ ಅಪರೂಪ. ಆದ್ರೆ ರೋಹಿತ್ ತಂಡದ ಉಪನಾಯಕ ಆಗಿರುವುದರಿಂದ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಮಿಂಚಲೇಬೇಕು.
ಒಂದು ವೇಳೆ ವೈಫಲ್ಯ ಅನುಭವಿಸಿದರೇ ತೀವ್ರ ಮುಖಭಂಗಕ್ಕೆ ಈಡಾಗಲಿದ್ದಾರೆ. ಅಲ್ಲದೇ ಸಾಕಷ್ಟು ಟೀಕೆಗಳನ್ನು ಕೂಡ ಎದುರಿಸಬೇಕಾಗುತ್ತದೆ.
ಇದನ್ನ ಗಮನದಲ್ಲಿಟ್ಟುಕೊಂಡೇ ರೋಹಿತ್ ಶರ್ಮಾ ಇದೀಗ ನೆಟ್ಸ್ ನಲ್ಲಿ ಭಾರಿ ಕಸರತ್ತು ನಡೆಸುತ್ತಿದ್ದಾರೆ.
ಸೌತ್ಆಫ್ರಿಕಾ ಪಿಚ್ ಗಳು ಹೆಚ್ಚಾಗಿ ವೇಗದ ಬೌಲರ್ ಗಳಿಗೆ ಅನುಕೂಲಕರ ಆಗಿರುತ್ತವೆ. ಹೀಗಾಗಿ ಟ್ರೋಡೌನ್ ಸ್ಪೆಷಲಿಸ್ಟ್‌ಗಳೊಂದಿಗೆ ರೋಹಿತ್ ನೆಟ್ಸ್ ನಲ್ಲಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ. ಪ್ರಾಕ್ಟೀಸ್‌ಗೆ ಸಂಬಂಧಿಸಿದ ವೀಡಿಯೊವನ್ನು ರೋಹಿತ್ ಶರ್ಮ ಇನಾಸ್ಟ್ರಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.