ನವದೆಹಲಿ: ದೇಶದಲ್ಲಿ ಲೋಕಸಭೆ ಚುನಾವಣೆ ಹಂಗಾಮ ಜೋರಾಗಿದ್ದು, ಇಂದು ಹಲವು ರಾಜ್ಯಗಳಲ್ಲಿ ಮೊದಲ ಹಂತದ ಮತದಾನ ಆರಂಭವಾಗಿದೆ.
ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹರಾಷ್ಟ್ರ, ತಮಿಳುನಾಡು ಸೇರಿದಂತೆ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಬೆಳಿಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆಯಲಿದೆ. ಮತದಾನದ ಹಿನ್ನೆಲೆಯಲ್ಲಿ 1.87 ಲಕ್ಷ ಮತಗಟ್ಟೆಗಳ ರಚಿಸಲಾಗಿದೆ. ಅಲ್ಲದೇ, 18 ಲಕ್ಷ ಮತಗಟ್ಟೆ ಸಿಬ್ಬಂದಿ ನಿಯೋಜಿಸಲಾಗಿದೆ.
8.4 ಕೋಟಿ ಪುರುಷ, 8.23 ಕೋಟಿ ಮಹಿಳಾ ಮತ್ತು 11,371 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 16.63 ಕೋಟಿ ಮತದಾರರು ಇಂದು ತಮ್ಮ ಹಕ್ಕು ಚಲಾಯಿಸಲಿದ್ದಾರೆ. ಇಂದು ಮತದಾರರು 1491 ಪುರುಷ, 134 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ಒಟ್ಟು 1625 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ.
ಇಂದು ತಮಿಳುನಾಡಿನ ಎಲ್ಲ 39, ಉತ್ತರಾಖಂಡದ ಎಲ್ಲ 5, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯದ ಎಲ್ಲ 2 ಸ್ಥಾನಗಳಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ರಾಜಸ್ಥಾನದ 25 ಸ್ಥಾನಗಳಲ್ಲಿ 12, ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ 8, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ 6, ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 5, ಅಸ್ಸಾಂ 14 ಸ್ಥಾನಗಳಲ್ಲಿ 5, ಬಿಹಾರದ 40 ಸ್ಥಾನಗಳಲ್ಲಿ 4, ಪಶ್ಚಿಮ ಬಂಗಾಳದ 42 ಸ್ಥಾನಗಳಲ್ಲಿ 3, ಛತ್ತೀಸ್‌ಗಢದ 11 ಸ್ಥಾನಗಳಲ್ಲಿ 1 ಮತ್ತು ಪುದುಚೆರಿ, ಅರುಣಾಚಲ ಪ್ರದೇಶ, ಜಮ್ಮು ಕಾಶ್ಮೀರ, ಲಡಾಕ್, ಲಕ್ಷದೀಪ, ಮಿಜೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ಮತ್ತು ತ್ರಿಪುರದ ತಲಾ 1 ಕ್ಷೇತ್ರಗಳು ಮತದಾನ ಎದುರಿಸಲಿವೆ.
ಬಿಕಾನೆರ್: (ರಾಜಸ್ಥಾನ ) ಅರ್ಜುನ್ ರಾಮ್ ಮೇಘವಾಲ್ (ಬಿಜೆಪಿ), ಅಲ್ವಾರ್: (ರಾಜಸ್ಥಾನ), ಭೂಪೇಂದರ್ ಯಾದವ್ (ಬಿಜೆಪಿ). ನಾಗ್ಪುರ: ನಿತಿನ್ ಗಡ್ಕರಿ (ಬಿಜೆಪಿ), ಅರುಣಾಚಲ ಪಶ್ಚಿಮ ಕಿರಣ್ ರಿಜಿಜು (ಬಿಜೆಪಿ), ಕೊಯಮತ್ತೂರು: ಗಣಪತಿ ರಾಜ್ ಕುಮಾರ್ (ಡಿಎಂಕೆ), ಸಿಂಗೈ ಜಿ ರಾಮಚಂದ್ರನ್ (ಎಐಎಡಿಎಂಕೆ), ಕೆ ಅಣ್ಣಾಮಲೈ (ಬಿಜೆಪಿ), ಚೆನ್ನೈ ದಕ್ಷಿಣ : ತಮಿಳಚ್ಚಿ ತಂಗಪಾಂಡಿಯನ್ (ಡಿಎಂಕೆ), ಜೆ ಜಯವರ್ಧನ್ (ಎಐಎಡಿಎಂಕೆ), ತಮಿಳಿಸಾಯಿ ಸೌಂದರ್ಯರಾಜನ್ (ಬಿಜೆಪಿ), ನೀಲಗಿರಿ: ಎ ರಾಜಾ (ಡಿಎಂಕೆ), ಶಿವಗಂಗಾ: ಕಾರ್ತಿ ಪಿ ಚಿದಂಬರಂ (ಕಾಂಗ್ರೆಸ್), ಚೆನ್ನೈ ಸೆಂಟ್ರಲ್: ದಯಾನಿಧಿ ಮಾರನ್ (ಡಿಎಂಕೆ), ಬಿ ಪಾರ್ಥಸಾರಥಿ (ಡಿಎಂಡಿಕೆ), ವಿನೋಜ್ ಪಿ ಸೆಲ್ವಂ (ಬಿಜೆಪಿ), ತಿರುವಳ್ಳೂರ್: ಸಸಿಕಾಂತ್ ಸೆಂಥಿಲ್ (ಕಾಂಗ್ರೆಸ್), ಪಿಲಿಭಿತ್: (ಉತ್ತರ ಪ್ರದೇಶ ), ಜಿತಿನ್ ಪ್ರಸಾದ (ಬಿಜೆಪಿ), ಗಯಾ: (ಬಿಹಾರ್) ಜಿತನ್ ರಾಮ್ ಮಾಂಝಿ (HAM-S) (ಹಿಂದುಸ್ಥಾನಿ ಅವಾಮ್ ಮೋರ್ಚಾ ), ಜೋರ್ಹತ್: (ಅಸ್ಸಾಂ) ತೊಪೋನ್ ಕುಮಾರ್ ಗೊಗೊಯ್ (ಬಿಜೆಪಿ), ಗೌರವ್ ಗೊಗೊಯ್ (ಕಾಂಗ್ರೆಸ್). ಹರಿದ್ವಾರ ( ಉತ್ತರಾಖಂಡ ) ಘಟಾನುಘಟಿಗಳ ಭವಿಷ್ಯವನ್ನು ಜನರು ಬರೆಯಲಿದ್ದಾರೆ.