ಹೈದರಾಬಾದ್: ಕಾರು ದಲ್ಲಾಳಿಗಳ ಜಗಳದಿಂದಾಗಿ 1 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರು ಲ್ಯಾಂಬೋರ್ಗಿನಿ ರಸ್ತೆಯಲ್ಲಿಯೇ ಹೊತ್ತಿ ಉರಿದ ಘಟನೆ ನಡೆದಿದೆ.
ಹೈದರಾಬಾದ್‌ನ ಪಹಾಡಿ ಶರೀಫ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಆಗಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಸದ್ಯದ ಮಾಹಿತಿಯಂತೆ ಮಾಲೀಕ ನೀರಜ್ ತಮ್ಮ ಲ್ಯಾಂಬೋರ್ಗಿನಿ ಕಾರನ್ನು ಮಾರಾಟ ಮಾಡಲು ನಿರ್ಧರಿಸಿದ್ದ. ಅದಕ್ಕಾಗಿ ಖರೀದಿದಾರರನ್ನು ಹುಡುಕಲು ತನ್ನ ಸ್ನೇಹಿತರ ಸಹಾಯವನ್ನು ಪಡೆದಿದ್ದ.
ಅಹಮದ್ ಎಂಬ ವ್ಯಕ್ತಿಯೊಂದಿಗೆ ಸಂಪರ್ಕ ಸಾಧಿಸಿದ್ದು ಕಾರು ಖರೀದಿಗೆ ಆತ ಆಸಕ್ತಿ ವಹಿಸಿದ್ದ ಎನ್ನಲಾಗಿದೆ. ಆನಂತರ ದುಡ್ಡು ಕೊಡುವ ವಿಷಯದಲ್ಲಿ ಗಲಾಟೆಯಾಗಿದೆ. ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸದ್ಯ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಕೆ ನಡೆಸುತ್ತಿದ್ದಾರೆ.